ಪುಣ್ಯಕೋಟಿ ದತ್ತು ಯೋಜನೆಗೆ 40 ಕೋಟಿ ನೀಡಿದ ರಾಜ್ಯ ಸರ್ಕಾರಿ ನೌಕರರು

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರು ತಮ್ಮ ವೇತನ ನೀಡುವ ಮೂಲಕ ಪುಣ್ಯ ಕಟ್ಟಿಕೊಳ್ಳುವ ಕೆಲಸವನ್ನು ಮಾಡಿದ್ದಾರೆ. 

40 crores given by state government employees to Punyakoti Dattu Yojana gvd

ಜಗದೀಶ ವಿರಕ್ತಮಠ

ಬೆಳಗಾವಿ (ಜ.19): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರು ತಮ್ಮ ವೇತನ ನೀಡುವ ಮೂಲಕ ಪುಣ್ಯ ಕಟ್ಟಿಕೊಳ್ಳುವ ಕೆಲಸವನ್ನು ಮಾಡಿದ್ದಾರೆ. ಈವರೆಗೆ ರಾಜ್ಯದ 31 ಜಿಲ್ಲೆಗಳಲ್ಲಿ ಸುಮಾರು 6 ಲಕ್ಷ ನೌಕರರು 40 ಕೋಟಿ ರು. ಹಣವನ್ನು ನೀಡಿದ್ದಾರೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಈ ಯೋಜನೆಗೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆ ಸಿಗಬೇಕಿದೆ.

ಒಂದು ಕಡೆ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಅನುಷ್ಠಾನಗೊಳಿಸಿದೆ. ಮತ್ತೊಂದು ಕಡೆ ಜಾನುವಾರುಗಳಿಗೆ ಕಂಟಕವಾಗಿರುವ ಚರ್ಮಗಂಟು ರೋಗದಿಂದ ಸಾವಿರಾರು ಸಂಖ್ಯೆಯಲ್ಲಿ ಹಸುಗಳು ಹಸುನೀಗುತ್ತಿವೆ. ಇದರಿಂದ ಆತಂಕಗೊಂಡ ರೈತಾಪಿ ವರ್ಗ ಸಾವಿರಾರು ರು. ಮೌಲ್ಯದ ಜಾನುವಾರುಗಳನ್ನು ಗೋ ಶಾಲೆಗಳಿಗೆ ತಂದು ಬಿಡುತ್ತಿದ್ದಾರೆ. ಆದರೆ, ಸರ್ಕಾರದ ಪುಣ್ಯಕೋಟಿ ದತ್ತು ಯೋಜನೆಗೆ ನಿರೀಕ್ಷಿತ ಪ್ರಮಾಣದಲ್ಲಿ ಸಹಕಾರ ಸಿಗದ ಹಿನ್ನೆಲೆಯಲ್ಲಿ ಜಾನುವಾರುಗಳನ್ನು ಸಾಕುವುದು ಗೋ ಶಾಲೆಗಳಿಗೆ ಕಷ್ಟಸಾಧ್ಯವಾಗಿದೆ.

Punyakoti Dattu Yojana: ಗೋರಕ್ಷಣೆಗೆ ಸರ್ಕಾರಿ ನೌಕರರ ವಂತಿಗೆ

ಈ ಹಿನ್ನೆಲೆಯಲ್ಲಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸರ್ಕಾರಿ ನೌಕರರು ಒಂದು ದಿನದ ವೇತನ ನೀಡುವಂತೆ ರಾಜ್ಯ ಸರ್ಕಾರಿ ನೌಕರರಲ್ಲಿ ವಿನಂತಿಸಿಕೊಂಡಿದ್ದರು. ಈ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರಿ ನೌಕರರು ತಮ್ಮ ವೇತನಕ್ಕೆ ಅನುಗುಣವಾಗಿ ಒಂದು ದಿನದ ವೇತನ ನೀಡುವ ಮೂಲಕ ‘ಪುಣ್ಯಕೋಟಿ ದತ್ತು ಯೋಜನೆ‘ಗೆ ಕೈ ಜೋಡಿಸಿದ್ದಾರೆ.

ಏನಿದು ಪುಣ್ಯಕೋಟಿ ದತ್ತು ಯೋಜನೆ?: 13 ವರ್ಷದೊಳಗಿನ ಗೋವು, ಕರು, ಎತ್ತುಗಳ ವಧೆ ನಿಷೇಧಿಸುವ ಮೂಲಕ ಸರ್ಕಾರ ಗೋ ಹತ್ಯೆಗೆ ಕಡಿವಾಣ ಹಾಕಿದೆ. ಈ ಕಾಯ್ದೆ ರಾಜ್ಯದಲ್ಲಿ ಅನುಷ್ಠಾನಗೊಂಡಾಗಿನಿಂದಲೂ ಗೋ ಶಾಲೆಗಳಿಗೆ ಆಗಮಿಸುವ ಜಾನುವಾರಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಇದು ಖಾಸಗಿ ಗೋ ಶಾಲೆಗಳಿಗೆ ಹೊರೆಯಾಗುತ್ತಿದ್ದು, ಮಧ್ಯಮ ವಯಸ್ಸಿನ ಜಾನುವಾರು ಒಂದಕ್ಕೆ ಪ್ರತಿದಿನ 8 ಕೆಜಿ, ಕರುವಿಗೆ 3 ರಿಂದ 4 ಕೆಜಿಯಷ್ಟುಆಹಾರ ಬೇಕಿದೆ. ಈ ಹಿನ್ನೆಲೆಯಲ್ಲಿ ಗೋ ಶಾಲೆಗಳ ಮೇಲಿನ ಭಾರ ತಗ್ಗಿಸಲು ಸರ್ಕಾರ ಪುಣ್ಯಕೋಟಿ ದತ್ತು ಯೋಜನೆ ಅನುಷ್ಠಾನಗೊಳಿಸಿದೆ.

ಪುಣ್ಯಕೋಟಿ ದತ್ತು ಯೋಜನೆಗೆ ಸಹಾಯಹಸ್ತ ಚಾಚಲು ಕರೆ ನೀಡಿದ್ದಕ್ಕೆ ಸರ್ಕಾರಿ ನೌಕರರು ನಿರೀಕ್ಷೆಗೂ ಮೀರಿ ಸ್ಪಂದಿಸಿ, ಒಂದು ದಿನದ ವೇತನ ನೀಡುವ ಮೂಲಕ ಇದುವರೆಗೆ . 40 ಕೋಟಿಗೂ ಅಧಿಕ ಧನ ಸಹಾಯ ಮಾಡಿರುವುದು ಶ್ಲಾಘನೀಯ.
- ಸಿ.ಎಸ್‌.ಷಡಾಕ್ಷರಿ, ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ

ಗೋವು ದತ್ತು ಸ್ಕೀಂಗೆ ಸರ್ಕಾರಿ ನೌಕರರಿಂದ 100 ಕೋಟಿ : ‘ಪುಣ್ಯಕೋಟಿ ದತ್ತು ಯೋಜನೆ’ಗೆ ಬಲ

ಕ್ರಮ ಸಂಖ್ಯೆ ಜಿಲ್ಲೆ ನೌಕರರ ಸಂಖ್ಯೆ ಹಣ
1. ಬೆಂಗಳೂರು ನಗರ 48860 29813800
2. ಬೆಳಗಾವಿ 41769 23556400
3. ಕಲಬುರಗಿ 29512 23546800
4. ತುಮಕೂರು 29957 20999484
5. ಶಿವಮೊಗ್ಗ 20968 20138800
6. ಮೈಸೂರು 29294 19584200
7. ಧಾರವಾಡ 18780 16967806
8. ಬಾಗಲಕೋಟೆ 21830 16648402
9. ಕಾರವಾರ 20198 15590200
10. ದಾವಣಗೆರೆ 16660 14164836
11. ಬೀದರ 17780 14012400
12. ಚಿತ್ರದುರ್ಗ 19361 13900200
13. ಹಾಸನ 27345 13428424
14. ವಿಜಯಪುರ 27352 12312600
15. ಮಂಗಳೂರು 14329 11000300
16. ವಿಜಯನಗರ 14743 10964800
17. ಕೋಲಾರ 13510 10670400
18. ಯಾದಗಿರಿ 11857 10500400
19. ಕೊಪ್ಪಳ 16927 10245800
20. ಗದಗ 12818 10040800
21. ರಾಯಚೂರು 20044 09871600
22. ಬಳ್ಳಾರಿ 11983 09555600
23. ಹಾವೇರಿ 16706 09478024
24. ಮಂಡ್ಯ 21140 08362400
25. ಚಿಕ್ಕಬಳ್ಳಾಪುರ 12443 08079200
26. ರಾಮನಗರ 12138 07437656
27. ಚಾಮರಾಜನಗರ 9110 07128000
28. ಬೆಂಗಳೂರು ಗ್ರಾಮಾಂತರ 10177 07029800
29. ಉಡುಪಿ 10646 06724200
30. ಚಿಕ್ಕಮಗಳೂರು 16580 05958200
31. ಕೊಡಗು 5949 04173600
ಒಟ್ಟು 600764 .401885132

Latest Videos
Follow Us:
Download App:
  • android
  • ios