Asianet Suvarna News Asianet Suvarna News

ಒಂದೇ ದಿನ ಡೆಂಘೀಗೆ 4 ಬಲಿ?: ಪ್ರತಿದಿನ ನೂರಾರು ಮಂದಿ ಆಸ್ಪತ್ರೆಗೆ ದಾಖಲು!

ಮುಂಗಾರು ಮಳೆಯ ಅಬ್ಬರದ ನಡುವೆಯೇ ರಾಜ್ಯಾದ್ಯಂತ ಡೆಂಘೀ ಜ್ವರದ ಬಾಧೆಯೂ ಹೆಚ್ಚುತ್ತಿದ್ದು, ಪ್ರತಿದಿನ ನೂರಾರು ಮಂದಿ ಜ್ವರ ಪೀಡಿತರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. 

4 deaths due to dengue fever in a single day at karnataka gvd
Author
First Published Jul 8, 2024, 8:29 AM IST | Last Updated Jul 8, 2024, 11:26 AM IST

ಬೆಂಗಳೂರು (ಜು.08): ಮುಂಗಾರು ಮಳೆಯ ಅಬ್ಬರದ ನಡುವೆಯೇ ರಾಜ್ಯಾದ್ಯಂತ ಡೆಂಘೀ ಜ್ವರದ ಬಾಧೆಯೂ ಹೆಚ್ಚುತ್ತಿದ್ದು, ಪ್ರತಿದಿನ ನೂರಾರು ಮಂದಿ ಜ್ವರ ಪೀಡಿತರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈ ಮಧ್ಯೆ ಜ್ವರದಿಂದ ಬಳಲುತ್ತಿದ್ದ ಇಬ್ಬರು ಮಕ್ಕಳು ಸೇರಿ ರಾಜ್ಯದಲ್ಲಿ ಮತ್ತೆ ನಾಲ್ವರು ಭಾನುವಾರ ಮೃತಪಟ್ಟಿದ್ದು, ಡೆಂಘೀಯಿಂದಾಗಿಯೇ ಇವರು ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.

ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಡಾಟಾ ಎಂಟ್ರಿ ಆಪರೇಟರ್ ಲಲಿತಾ (32), ಹಾಸನ ತಾಂಡ್ಯದ ಸುಪ್ರೀತಾ(27), ಗದಗ ತಾಲೂಕಿನ ಶಿರುಂಜ ಗ್ರಾಮದ ಚಿರಾಯಿ ಹೊಸಮನಿ (5), ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಾಸಣಗಿಯ ದೀಕ್ಷಾ ರಾಮಪ್ಪ ಬನ್ನಿಹಟ್ಟಿ(9) ಮೃತರು. ಜ್ವರದಿಂದ ಬಳಲುತ್ತಿದ್ದ ಇವರಿಗೆ ಡೆಂಘೀ ದೃಢಪಟ್ಟಿತ್ತು. ಆದರೆ ಆರೋಗ್ಯ ಇಲಾಖೆ ಇವರ ಸಾವಿಗೆ ಡೆಂಘೀಯೇ ಕಾರಣ ಎಂದು ಇನ್ನೂ ಖಚಿತಪಡಿಸಿಲ್ಲ.

ಆಯುಷ್ಮಾನ್‌ ಭಾರತದಡಿ ಇನ್ನು 10 ಲಕ್ಷ ರು. ಆರೋಗ್ಯ ವಿಮೆ?: 70 ವರ್ಷ ಮೇಲ್ಪಟ್ಟವರಿಗೂ ವಿಮಾ ಸೌಲಭ್ಯ

ಲಿಲಿತಾ ಅವರಿಗೆ ಪ್ರಾಥಮಿಕ ಪರೀಕ್ಷೆಯಲ್ಲಿ ಡೆಂಘೀ ದೃಢಪಟ್ಟಿತ್ತು. ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನು, ಕಳೆದೊಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಗದಗದ ಚಿರಾಯು ಎಂಬ ಬಾಲಕ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಕಳೆದೆರಡು ವಾರಗಳಿಂದ ಜ್ವರದಿಂದ ಬಳಲುತ್ತಿದ್ದ ಹಾವೇರಿ ಜಿಲ್ಲೆ ಬ್ಯಾಡಗಿಯ ಬಾಲಕಿ ದೀಕ್ಷಾ ರಾಮಪ್ಪ ಕೂಡ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆ. ಇದೇ ವೇಳೆ, ಒಂದು ವಾರದಿಂದ ಡೆಂಘೀಯಿಂದ ಬಳಲುತ್ತಿದ್ದ ಹಾಸನ ಜಿಲ್ಲೆ ಅರಸೀಕೆರೆಯ ಸುಪ್ರೀತಾ ಎಂಬುವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.

ಬೆಂಗ್ಳೂರಲ್ಲಿ ಒಂದೇ ದಿನದಲ್ಲಿ 166 ಡೆಂಘೀ ಕೇಸ್‌: ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ 166 ಡೆಂಘೀ ಪ್ರಕರಣ ಕಾಣಿಸಿಕೊಂಡಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. ದಿನದಿಂದ ದಿನಕ್ಕೆ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಆರು ದಿನದಲ್ಲಿ ಭಾನುವಾರ ದೃಢಪಟ್ಟ ಪ್ರಕರಣ ಅತ್ಯಧಿಕವಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಕಳೆದ 6 ದಿನದಲ್ಲಿ ಒಟ್ಟು 849 ಪ್ರಕರಣ ದೃಢಪಟ್ಟಿವೆ. ಒಟ್ಟಾರೆ ನಗರದಲ್ಲಿ ಈವರೆಗೆ 1988 ಪ್ರಕರಣ ದೃಢಪಟ್ಟಿವೆ. 

ಅಕ್ಕಿ ಕೊಡ್ತೇವೆ, ಆದರೆ ಖರೀದಿಗೆ ರಾಜ್ಯದಲ್ಲಿ ಹಣವೇ ಇಲ್ಲ: ಪ್ರಲ್ಹಾದ್ ಜೋಶಿ

ಈ ಪೈಕಿ 130 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಒಂದು ಡೆಂಘೀನಿಂದ ಮೃತಪಟ್ಟ ವರದಿಯಾಗಿದೆ. ರಾಜ್ಯದಲ್ಲಿ ಭಾನುವಾರ 156 ಪ್ರಕರಣ ಕಾಣಿಸಿಕೊಂಡಿವೆ. ಈ ವರೆಗೆ ಒಟ್ಟು 7165 ಪ್ರಕರಣ ದೃಢಪಟ್ಟಿವೆ. 301 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 6 ಮಂದಿ ಡೆಂಘೀನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿಯಲ್ಲಿ ತಿಳಿಸಲಾಗಿದೆ.

Latest Videos
Follow Us:
Download App:
  • android
  • ios