ಕೊರೋನಾ ಆತಂಕದ ಮಧ್ಯೆ ಸಂತಸದ ಸುದ್ದಿ: ರಾಜ್ಯದಲ್ಲಿ ಒಂದೇ ದಿನ 22,584 ಜನ ಗುಣಮುಖ
* ಕೊರೋನಾ ಆತಂಕದ ಮಧ್ಯೆ ಒಂದು ಸಂತಸದ ಸುದ್ದಿ
* ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಮುಖ
* ಗುಣಮುಖರಾದವರ ಸಂಖ್ಯೆಯಲ್ಲೂ ಏರಿಕೆ
ಬೆಂಗಳೂರು, (ಮೇ.11): ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಮುಖ ಕಂಡಿದ್ದು, ಇಂದು (ಮಂಗಳವಾರ) 39,510 ಪಾಸಿಟಿವ್ ಕೇಸ್ ಪತ್ತೆಯಾಗಿವೆ. 480 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಇದರೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,87,452 ಏರಿಕೆಯಾಗಿದ್ರೆಮ ಇದುವರೆಗೆ ಒಟ್ಟು 19,852 ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
3ನೇ ಅಲೆ ತಾಗದಂತೆ ಮಕ್ಕಳನ್ನು ಕಾಪಾಡಿಕೊಳ್ಳುವುದು ಹೇಗೆ?
ಇನ್ನು ಕೊರೋನಾ ಆತಂಕದ ಮಧ್ಯೆಯೇ ಒಂದು ಸಂತಸದ ಸುದ್ದಿ ಏನಂದ್ರೆ, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 22,584 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಇದುವರೆಗೆ ಒಟ್ಟು 14,05,869 ಜನ ಗುಣಮುಖರಾದಂತಾಗಿದೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ:
ಬಾಗಲಕೋಟೆ-676, ಬಳ್ಳಾರಿ-1558, ಬೆಳಗಾವಿ- 755, ಬೆಂಗಳೂರು ಗ್ರಾಮಾಂತರ- 688, ಬೆಂಗಳೂರು ನಗರ-15879, ಬೀದರ್-158, ಚಾಮರಾಜನಗರ-411, ಚಿಕ್ಕಬಳ್ಳಾಪುರ-609, ಚಿಕ್ಕಮಗಳೂರು-537, ಚಿತ್ರದುರ್ಗ-193, ದಕ್ಷಿಣ ಕನ್ನಡ-915, ದಾವಣಗೆರೆ-212 , ಧಾರವಾಡ-740, ಗದಗ-456 , ಹಾಸನ-654, ಹಾವೇರಿ-465 , ಕಲಬುರಗಿ-971, ಕೊಡಗು-892, ಕೋಲಾರ-913, ಕೊಪ್ಪಳ-414, ಮಂಡ್ಯ-1359, ಮೈಸೂರು-2170 , ರಾಯಚೂರು- 763, ರಾಮನಗರ-440, ಶಿವಮೊಗ್ಗ-1108, ತುಮಕೂರು-2496 , ಉಡುಪಿ-1083, ಉತ್ತರ ಕನ್ನಡ -1084, ವಿಜಯಪುರ-485, ಯಾದಗಿರಿ-426.