Asianet Suvarna News Asianet Suvarna News

Omicron Variant: ಒಮಿಕ್ರೋನ್‌ ಸೋಂಕಿತರ ಜತೆ ಸಂಪರ್ಕದಲ್ಲಿದ್ದ 39 ಜನ ಪತ್ತೆ

*  12 ಮಂದಿ ಪ್ರಾಥಮಿಕ ಸಂಪರ್ಕಿತರು, 27 ಮಂದಿ ದ್ವೀತಿಯ ಸಂಪರ್ಕಿತರು
*  2 ಡೋಸ್‌ ಲಸಿಕೆ ಪಡೆದವರಿಗೆ ಯುನಿವರ್ಸಲ್‌ ಪಾಸ್‌?
*  25 ದ್ವಿತೀಯ ಸಂಪರ್ಕಿತರಿದ್ದು ಅವರದ್ದು ಕೂಡ ನೆಗೆಟಿವ್‌ ರಿಪೋರ್ಟ್‌
 

39 People Contact with Omicron Patients in Karnataka grg
Author
Bengaluru, First Published Dec 17, 2021, 8:03 AM IST

ಬೆಂಗಳೂರು(ಡಿ.17):  ರಾಜ್ಯದಲ್ಲಿ(Karnataka) ಗುರುವಾರ ಮತ್ತೆ ಐದು ಮಂದಿಗೆ ಹೊಸದಾಗಿ ಒಮಿಕ್ರೋನ್‌(Omicron) ದೃಢಪಟ್ಟಿದ್ದರೂ, ಕೇವಲ 12 ಮಂದಿ ಪ್ರಾಥಮಿಕ ಸಂಪರ್ಕಿತರು ಮತ್ತು ಮತ್ತು 27 ಮಂದಿ ದ್ವಿತೀಯ ಸಂಪರ್ಕಿತರು ಇದ್ದಾರೆ ಎಂದು ಆರೋಗ್ಯ ಇಲಾಖೆ(Department of Health) ತಿಳಿಸಿದೆ. ಕುತೂಹಲಕಾರಿ ಸಂಗತಿಯೆಂದರೆ, ಐದು ಮಂದಿ ಒಮಿಕ್ರೋನ್‌ ಸೋಂಕಿತರ ಪೈಕಿ ದಕ್ಷಿಣ ಆಫ್ರಿಕಾದಿಂದ(South Africa) ದೆಹಲಿಗೆ ಬಂದು ಅನಂತರ ಬೆಂಗಳೂರಿಗೆ(Bengaluru) ಬಂದ ಸೋಂಕಿತ ಅತಿ ಹೆಚ್ಚು ಮಂದಿಯೊಂದಿಗೆ ಸಂಪರ್ಕ ಹೊಂದಿದ್ದಾನೆ. ಆತನಿಗೆ ಒಟ್ಟಾರೆ 12 ಮಂದಿ ಪ್ರಾಥಮಿಕ ಸಂಪರ್ಕಿತರ ಪೈಕಿ ನಾಲ್ಕು ಮಂದಿ ಪ್ರಾಥಮಿಕ ಸಂಪರ್ಕಿತರಿದ್ದರೆ 27 ಮಂದಿ ದ್ವಿತೀಯ ಸಂಪರ್ಕಿತರ ಪೈಕಿ 25 ಮಂದಿ ಈತನ ಸಂಪರ್ಕಿತರಾಗಿದ್ದಾರೆ.

ಇದಕ್ಕೆ ತದ್ವಿರುದ್ಧವಾಗಿ ಯುಕೆಯಿಂದ ಬೆಂಗಳೂರಿಗೆ ಆಗಮಿಸಿದ 19 ವರ್ಷದ ಯುವತಿಗೆ ಒಬ್ಬರೇ ಒಬ್ಬರೂ ಪ್ರಾಥಮಿಕ ಅಥವಾ ದ್ವಿತೀಯ ಸಂಪರ್ಕಿತರಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ. ಆಕೆ ಸೋಂಕು ದೃಢ ಪಡುತ್ತಿದ್ದಂತೆ ವಿಮಾನ ನಿಲ್ದಾಣದಿಂದ ಆಂಬ್ಯುಲೆನ್ಸ್‌ನಲ್ಲಿ ಬೌರಿಂಗ್‌ ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ಆಕೆಗೆ ಸಂಪರ್ಕಿತರಿರಲಿಲ್ಲ ಎಂಬ ವಿವರಣೆಯನ್ನು ಆರೋಗ್ಯ ಇಲಾಖೆ ನೀಡುತ್ತಿದೆ.

Omicron variant : ಬೆಂಗಳೂರಿನ ಒಮಿಕ್ರೋನ್‌ ಸೋಂಕಿತ ಗುಣಮುಖ

ಅದೇ ರೀತಿ ನೈಜಿರಿಯಾದಿಂದ(Nigeria) ಬೆಂಗಳೂರಿಗೆ ಆಗಮಿಸಿ, ಅಲ್ಲಿಂದ ವಿಮಾನದ(Flight) ಮೂಲಕ ಬೆಳಗಾವಿಗೆ(Belagavi) ಪ್ರಯಾಣಿಸಿದ ವ್ಯಕ್ತಿ ಕೇವಲ ಇಬ್ಬರು ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚಿ ಅವರನ್ನು ಕ್ವಾರಂಟೈನ್‌(Quarantine) ಮಾಡಿ ಕೋವಿಡ್‌ ಪರೀಕ್ಷೆ(Covid Test) ಮಾಡಲಾಗಿದೆ. ಅವರಿಬ್ಬರ ವರದಿ ನೆಗೆಟಿವ್‌ ಬಂದಿದೆ. ಆದರೆ ನೈಜೀರಿಯಾದಿಂದ ಬಂದಿದ್ದ ವ್ಯಕ್ತಿಯ ಸಹಪ್ರಯಾಣಿಕರನ್ನು ಪ್ರಾಥಮಿಕ ಅಥವಾ ದ್ವಿತೀಯ ಸಂಪರ್ಕಿತರು ಎಂದು ಆರೋಗ್ಯ ಇಲಾಖೆ ಪರಿಗಣಿಸಿಲ್ಲ. ಈತ ಸಹ ಕೋವಿಡ್‌ ನೆಗೆಟಿವ್‌ ವರದಿಯೊಂದಿಗೆ ಭಾರತ(India) ಪ್ರವೇಶಿಸಿದ್ದ.

ಇನ್ನೂ ದೆಹಲಿಯ ಮದುವೆಯಲ್ಲಿ ಒಮಿಕ್ರೋನ್‌ ಸೋಂಕಿತನ ಸಂಪರ್ಕಕ್ಕೆ ಬಂದಿದ್ದ ಇಬ್ಬರಿಗೆ ಕೇವಲ ಮೂವರು ಪ್ರಾಥಮಿಕ ಮತ್ತು ಇಬ್ಬರು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ. ದಕ್ಷಿಣ ಆಫ್ರಿಕಾದಿಂದ ದೆಹಲಿಗೆ ಬಂದು ಬೆಂಗಳೂರಿಗೆ ಆಗಮಿಸಿದ ವ್ಯಕ್ತಿಗೆ ನಾಲ್ಕು ಮಂದಿ ಪ್ರಾಥಮಿಕ ಸಂಪರ್ಕಿತರಿದ್ದಾರೆ. ಇವರದ್ದೆಲ್ಲ ಕೋವಿಡ್‌ ಪರೀಕ್ಷೆ ನಡೆದಿದ್ದು ನೆಗೆಟಿವ್‌ ವರದಿ ಬಂದಿದೆ. ಆದರೆ 25 ದ್ವಿತೀಯ ಸಂಪರ್ಕಿತರಿದ್ದು ಅವರದ್ದು ಕೂಡ ನೆಗೆಟಿವ್‌ ವರದಿ ಬಂದಿದೆ.

Covid 19 Variant Outbreak: ಡೆಲ್ಟಾಗಿಂತ 70 ಪಟ್ಟು ವೇಗವಾಗಿ ಹರಡುತ್ತೆ ಒಮಿಕ್ರೋನ್‌!

2 ಡೋಸ್‌ ಲಸಿಕೆ ಪಡೆದವರಿಗೆ ಯುನಿವರ್ಸಲ್‌ ಪಾಸ್‌?

ರಾಜ್ಯದಲ್ಲಿ ಎರಡೂ ಡೋಸ್‌ ಲಸಿಕೆ(Vaccine) ಪಡೆದವರಿಗೆ ಎಲ್ಲಾ ಕಡೆಗಳಲ್ಲಿಯೂ ತಪಾಸಣೆಗೆ ಅನುಕೂಲವಾಗುವಂತೆ ‘ಯುನಿವರ್ಸಲ್‌ ಪಾಸ್‌’(Universal Pass) ನೀಡುಬೇಕು ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರು ರಾಜ್ಯ ಸರ್ಕಾರಕ್ಕೆ(Government of Karnataka) ಶಿಫಾರಸು ಮಾಡಿದ್ದಾರೆ.

ಈಗಾಗಲೇ ಮಹಾರಾಷ್ಟ್ರ(Maharashtra) ಸರ್ಕಾರವು ಈ ಮಾದರಿಯ ಪಾಸ್‌ ಜಾರಿಗೆ ತಂದಿದ್ದು, ವಿಮಾನ ನಿಲ್ದಾಣಗಳು, ಮಾಲ್‌, ಚಿತ್ರಮಂದಿರ, ಸರ್ಕಾರಿ ಕಚೇರಿಗಳನ್ನು ಪ್ರವೇಶಿಸಬಹುದು. ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರವು ಜಾರಿಗೆ ತರಬೇಕು. ಆರಂಭದಲ್ಲಿ ಬಿಬಿಎಂಪಿ(BBMP) ಈ ಕ್ರಮಕ್ಕೆ ಮುಂದಾಗಬೇಕು. ಈ ಪಾಸ್‌ ಹೊಂದಿವರಿಗೆ ಕಚೇರಿಗಳು, ಕಾರ್ಖಾನೆ, ಬಾಂಕ್‌, ಚಿತ್ರಮಂದಿರ, ವಾಣಿಜ್ಯ ಮಳಿಗೆ, ಮಾಲ್‌, ಜಿಮ್‌, ವಿಮಾನ ನಿಲ್ದಾಣ, ಈಜುಕೊಳ, ಮೃಗಾಲಯ ಸೇರಿದಂತೆ ಹಲವೆಡೆ ನೇರಪ್ರವೇಶಕ್ಕೆ ಪರಿಗಣಿಸಲು ಕ್ರಮವಹಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಸಾರ್ವಜನಿಕರು ಲಸಿಕೆಗೆ ನೋಂದಾಯಿಸಿದ ಮೊಬೈಲ್‌ ನಂಬರ್‌ ಬಳಿಸಿ ಈ ಯುನಿವರ್ಸಲ್‌ ಪಾಸ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.
 

Follow Us:
Download App:
  • android
  • ios