Asianet Suvarna News Asianet Suvarna News

Corona Update ಕರ್ನಾಟಕದಲ್ಲಿ ಕೊರೋನಾ ಇಳಿಕೆ, ಆದ್ರೂ ಶುರುವಾಯ್ತು ಮತ್ತೊಂದು ಆತಂಕ

* ಕರ್ನಾಟಕದಲ್ಲಿ ಕೊರೋನಾ ಸೊಂಕಿನ ಸಂಖ್ಯೆಯಲ್ಲಿ ಇಳಿಕೆ
* ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆ
* ಮಾಹಿತಿ ನೀಡಿದ ರಾಜ್ಯ ಅರೋಗ್ಯ ಇಲಾಖೆ

38754 New Coronavirus cases and 49 deaths In Karnataka On jan 27 rbj
Author
Bengaluru, First Published Jan 27, 2022, 9:21 PM IST

ಬೆಂಗಳೂರು, (ಜ.27): ಕರ್ನಾಟಕದಲ್ಲಿ (Karnataka) ಕೊರೋನಾ ಸೊಂಕಿನ (Coronavirus) ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಆದ್ರೆ, ಸೋಂಕಿನಿಂದ ಸಾವನ್ನಪ್ಪುತ್ತಿರುವವ ಸಂಖ್ಯೆ ಹೆಚ್ಚಳವಾಗುತ್ತಿರುವು ಆತಂಕ ಮೂಡಿಸಿದೆ.

ಹೌದು...ಕಳೆದ ಒಂದು ತಿಂಗಳಿನಿಂದ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದ ಕೊರೋನಾ ವೈರಸ್ ಇದೀಗ ಇಳಿಕೆಯತ್ತ ಸಾಗಿದೆ. ಆದ್ರೆ, ಇದೀಗ ದಿಢೀರ್ ಅಂತ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಗುರುವಾರ (ಜ.27) ಒಟ್ಟು 38,754 ಮಂದಿಯಲ್ಲಿ ಕೊವಿಡ್ ಸೋಂಕು ದೃಢಪಟ್ಟಿದ್ದು, 49 ಜನರು ಸಾವನ್ನಪ್ಪಿದ್ದಾರೆ.  67,236 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

Corona Vaccine:ಖಾಸಗಿ ಮಾರುಕಟ್ಟೆಯಲ್ಲಿ ವ್ಯಾಕ್ಸಿನ್ ಮಾರಾಟಕ್ಕೆ ಅನುಮತಿ, ಈ ಷರತ್ತು ಕಡ್ಡಾಯ

ರಾಜ್ಯದಲ್ಲಿ ಈವರೆಗೆ ಒಟ್ಟು 36,92,496 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಈ ಪೈಕಿ 33,25,001 ಜನರು ಚೇತರಿಸಿಕೊಂಡಿದ್ದಾರೆ.   ರಾಜ್ಯದಲ್ಲಿ ಪ್ರಸ್ತುತ 32,083 ಸಕ್ರಿಯ ಪ್ರಕರಣಗಳಿದ್ದು,  ಪಾಸಿಟಿವಿಟಿ ಪ್ರಮಾಣ ಶೇ 20.44 ಹಾಗೂ ಸೋಂಕಿನಿಂದ ಸಾಯುವವರ ಸರಾಸರಿ ಶೇ 0.12 ಇದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ನಗರದಲ್ಲಿ 17,717 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 43,997 ಜನರು ಚೇತರಿಸಿಕೊಂಡಿದ್ದಾರೆ. 12 ಜನರು ಸಾವನ್ನಪ್ಪಿದ್ದಾರೆ. ನಗರದಲ್ಲಿ ಪ್ರಸ್ತುತ 1,89,853 ಸಕ್ರಿಯ ಪ್ರಕರಣಗಳಿವೆ. ನಗರದಲ್ಲಿ ಈವರೆಗೆ 16,66,475 ಮಂದಿಯಲ್ಲಿ ಕೊವಿಡ್ ದೃಢಪಟ್ಟಿದ್ದು, 14,60,075 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 16,546 ಜನರು ಸಾವನ್ನಪ್ಪಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಹೊಸದಾಗಿ 185 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಮಿಕ್ರಾನ್​​ ಸೋಂಕಿತರ ಸಂಖ್ಯೆ 1,115ಕ್ಕೆ ಏರಿಕೆಯಾಗಿದೆ ಎಂದು ಟ್ವಿಟರ್​​ನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ. 

ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕು?
ಬೆಂಗಳೂರು ನಗರ 17,717, ಬಾಗಲಕೋಟೆ 345, ಬಳ್ಳಾರಿ 651, ಬೆಳಗಾವಿ 480, ಬೆಂಗಳೂರು ಗ್ರಾಮಾಂತರ 1091, ಬೀದರ್ 250, ಚಾಮರಾಜನಗರ 763, ಚಿಕ್ಕಬಳ್ಳಾಪುರ 665, ಚಿಕ್ಕಮಗಳೂರು 244, ಚಿತ್ರದುರ್ಗ 286, ದಕ್ಷಿಣ ಕನ್ನಡ 678, ದಾವಣಗೆರೆ 257, ಧಾರವಾಡ 1155, ಗದಗ 267, ಹಾಸನ 1452, ಹಾವೇರಿ 184, ಕಲಬುರ್ಗಿ 812, ಕೊಡಗು 707, ಕೋಲಾರ 572, ಕೊಪ್ಪಳ 500, ಮಂಡ್ಯ 1802, ಮೈಸೂರು 2587, ರಾಯಚೂರು 261, ರಾಮನಗರ 279, ಶಿವಮೊಗ್ಗ 626, ತುಮಕೂರು 1584, ಉಡುಪಿ 948, ಉತ್ತರ ಕನ್ನಡ 567, 223, ಯಾದಗಿರಿ 130.

Follow Us:
Download App:
  • android
  • ios