* ರಾಜ್ಯದಲ್ಲಿ ಕೊರೋನಾ ಮತ್ತಷ್ಟು ಇಳಿಮುಖ* 3310 ಜನರಿಗೆ ಸೋಂಕು, 114 ಮಂದಿ ಸಾವು*  ಪಾಸಿಟಿವಿಟಿ ದರ ಶೇ.2.09ಕ್ಕೆ ಇಳಿಕೆ

ಬೆಂಗಳೂರು, (ಜೂನ್.25): ರಾಜ್ಯದಲ್ಲಿ ಕೊರೋನಾ ಮತ್ತಷ್ಟು ಇಳಿಮುಖವಾಗಿದ್ದು, ಇಂದು (ಶುಕ್ರವಾರ) 3310 ಜನರಿಗೆ ಸೋಂಕು ತಗಲಿದೆ. 114 ಮಂದಿ ಮೃತಪಟ್ಟಿದ್ದಾರೆ.

Add Asianetnews Kannada as a Preferred SourcegooglePreferred

ಒಟ್ಟು ಸೋಂಕಿತರ ಸಂಖ್ಯೆ 28,26,754 ಕ್ಕೆ ಏರಿಕೆಯಾಗಿದ್ರೆ, ಇದುವರೆಗೆ 34 539 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ 2 ಡೆಲ್ಟಾಪ್ಲಸ್‌ ಕೇಸ್‌ ಪತ್ತೆ, ಇಬ್ಬರೂ ಗುಣ

 ಇವತ್ತು 6524 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಇದುವರೆಗೆ 26,84,997 ಜನ ಗುಣಮುಖರಾಗಿದ್ದಾರೆ. 1,07,195 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇ.2.09 ರಷ್ಟು ಇದೆ.

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 614 ಜನರಿಗೆ ಸೋಂಕು ತಗಲಿದ್ದು, 17 ಸೋಂಕಿತರು ಸಾವನ್ನಪ್ಪಿದ್ದಾರೆ. 1401 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 66,232 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-08, ಬಳ್ಳಾರಿ-29, ಬೆಳಗಾವಿ-87, ಬೆಂಗಳೂರು ಗ್ರಾಮಾಂತರ-80, ಬೆಂಗಳೂರು ನಗರ-614, ಬೀದರ್-06, ಚಾಮರಾಜನಗರ-71, ಚಿಕ್ಕಬಳ್ಳಾಪುರ-47, ಚಿಕ್ಕಮಗಳೂರು-39, ಚಿತ್ರದುರ್ಗ-13,ದಕ್ಷಿಣ ಕನ್ನಡ-377, ದಾವಣಗೆರೆ-89, ಧಾರವಾಡ-34, ಗದಗ-23, ಹಾಸನ-399, ಹಾವೇರಿ-29. ಕಲಬುರಗಿ-14, ಕೊಡಗು-183, ಕೋಲಾರ-140, ಕೊಪ್ಪಳ-21, ಮಂಡ್ಯ-119, ಮೈಸೂರು-367, ರಾಯಚೂರು-14, ರಾಮನಗರ-11, ಶಿವಮೊಗ್ಗ-212, ತುಮಕೂರು-80, ಉಡುಪಿ-92, ಉತ್ತರ ಕನ್ನಡ-99, ವಿಜಯಪುರ-08, ಯಾದಗಿರಿ-05.