Asianet Suvarna News Asianet Suvarna News

ರಾಜ್ಯ ಸರ್ಕಾರದ ನೆರವಿನಿಂದ ಸೌದಿಯಲ್ಲಿ ಸಿಲುಕಿದ್ದ 32 ಕನ್ನಡಿಗರು ಮನೆ ಸೇರಿದ್ರು..!

ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಅವರು ಮಾಡಿದ ಮಹತ್ವದ ಕೆಲಸದಿಂದ ಇದೀಗ ಸೌಧಿಯಲ್ಲಿ ಸಿಲುಕಿದ್ದ ಕನ್ನಡಗರು ಮನೆ ಸೇರವಂತಾಗಿದೆ.

32 Kannadigas came To Karnataka from soudhi after Helped Karnataka Govt rbj
Author
Bengaluru, First Published Sep 24, 2020, 7:24 PM IST

ಬೆಂಗಳೂರು, (ಸೆ.24): ಉದ್ಯೋಗ ವೀಸಾ ಅವಧಿ ಮುಗಿದು ಸೌದಿ ಅರೇಬಿಯಾದಲ್ಲಿ ಸಿಕ್ಕಿಕೊಂಡು ಬಂಧನಕ್ಕೆ ಒಳಗಾಗಿದ್ದ 32 ಕನ್ನಡಿಗರ ನೆರವಿಗೆ ರಾಜ್ಯ ಸರಕಾರ ಧಾವಿಸಿದ್ದು, ಅವರೆಲ್ಲರನ್ನೂ ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್‌ ಕರೆಸಿಕೊಂಡಿದೆ.

ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರ ಸೂಚನೆಯಂತೆ ಸೌದಿ ಕನ್ನಡಿಗರ ನೆರವಿಗೆ ಧಾವಿಸಿದ ಕೌಶಲ್ಯಾಭಿವೃದ್ಧಿ ನಿಗಮದ ಅಧಿಕಾರಿಗಳು, ಕಷ್ಟಕ್ಕೆ ಸಿಲುಕಿರುವ ಎಲ್ಲ ಕನ್ನಡಿಗರನ್ನು ತಾಯ್ನಾಡಿಗೆ ವಾಪಸ್‌ ಕರೆಸಿಕೊಂಡಿದ್ದಾರೆ. ಗುರುವಾರ ಸಂಜೆ ಎಲ್ಲರೂ ಬೆಂಗಳೂರು ತಲುಪಿದ್ದಾರೆ.

ಸೌದಿಯಲ್ಲಿ ಕನ್ನಡಿಗರು ಸಿಲುಕಿದ್ದಾರೆಂಬ ಮಾಹಿತಿ ಸಿಕ್ಕಕೂಡಲೇ ಉಪ ಮುಖ್ಯಮಂತ್ರಿ, ತಮ್ಮ ಅಧೀನದಲ್ಲಿರುವ ಕೌಶಲ್ಯಾಭಿವೃದ್ಧಿ ನಿಗಮದ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು. ಕೂಡಲೇ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ದೆಹಲಿಯ ವಿದೇಶಾಂಗ ಇಲಾಖೆ, ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳ ಜತೆ ಸುದೀರ್ಘ ಮಾತುಕತೆ ನಡೆಸಿದರಲ್ಲದೆ, ಅಷ್ಟೂ ಉದ್ಯೋಗಿಗಳನ್ನು ಚೆನ್ನೈಗೆ ಕರೆಸಿಕೊಂಡು, ಅಲ್ಲಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ.

RCBಗೆ ಕನ್ನಡಿಗರ ಚಾಲೆಂಜ್, ವಿಫಲವಾಯ್ತು ಚೀನಾ ರಿವೇಂಜ್: ಸೆ.24ರ ಟಾಪ್ 10 ಸುದ್ದಿ!

ಇವರೆಲ್ಲರನ್ನೂ ಬೆಂಗಳೂರು ವಿವಿಯಲ್ಲಿರುವ ಹಾಸ್ಟೆಲ್ ನಲ್ಲಿ ಇಟ್ಟಿದ್ದು, ಅಲ್ಲಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಸೌದಿಯಲ್ಲಿಯೂ ಉದ್ಯೋಗ ನಷ್ಟವಾಗಿದ್ದು, ಇನ್ನು ಕೆಲ ದಿನಗಳ ಕಾಲ ಅಲ್ಲಿ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಅಲ್ಲಿ ವಿನಾಕಾರಣ ಕಷ್ಟಕ್ಕೆ ಸಿಲುಕಿಕೊಳ್ಳುವ ಬದಲು ತಾಯ್ನಾಡಿಗೆ ವಾಪಸ್‌ ಬರುವುದು ಉತ್ತಮ ಎಂದು ಡಿಸಿಎಂ ಹೇಳಿದ್ದಾರೆ.

ಎಲ್ಲರಿಗೂ ಉದ್ಯೋಗ:
ಸೌದಿಯಿಂದ ವಾಪಸ್‌ ಬಂದಿರುವ ಎಲ್ಲ ಕನ್ನಡಿರಿಗೂ ಉದ್ಯೋಗ ಕಲ್ಪಿಸಲಾಗುವುದು. ಅವರವರ ಕೌಶಲ್ಯತೆಯನ್ನು ಗುರುತಿಸಿ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಅಶ್ವಥನಾರಾಯಣ ಹೇಳಿದ್ದಾರೆ.

Follow Us:
Download App:
  • android
  • ios