ಗುಡ್‌ನ್ಯೂಸ್: ಮೊದಲ ಬಾರಿ ರಾಜ್ಯದಲ್ಲಿ ಪಾಸಿಟಿವ್ ಕೇಸ್‌ಗಿಂತ ಡಿಸ್ಚಾರ್ಜ್ ಹೆಚ್ಚಳ

* ಮೊದಲ ಬಾರಿ ರಾಜ್ಯದಲ್ಲಿ ಪಾಸಿಟಿವ್ ಕೇಸ್‌ಗಿಂತ ಡಿಸ್ಚಾರ್ಜ್ ಹೆಚ್ಚಳ
* ಒಂದು ದಿನದ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಅಧಿಕ
* ಆತಂಕದ ಮಧ್ಯೆಯೇ ಮೂಡಿಸಿದ ಹೊಸ ಆಶಾಭಾವನೆ

31531 New Coronavirus Cases and 36475 recovery In Karnataka On May 16th rbj

ಬೆಂಗಳೂರು, (ಮೇ.16):  ರಾಜ್ಯದಲ್ಲಿ ಇಂದು (ಭಾನುವಾರ) ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಅಧಿಕವಾಗಿದೆ. ಇದು ಹೊಸ ಆಶಾಭಾವನೆ ಮೂಡಿಸಿದೆ.

ಹೌದು...ಕಳೆದ 24 ಗಂಟೆಗಳಲ್ಲಿ 31,531 ಕೊರೋನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ರೆ, 36,475 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದು ಉತ್ತಮ ಬೆಳವಣಿಗೆಯಾಗಿದೆ.

ಇದುವರೆಗೆ 15,81,457 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 22,03,462 ಕ್ಕೆ ಏರಿಕೆಯಾಗಿದ್ರೆ, ರಾಜ್ಯದಲ್ಲಿ ಸದ್ಯ 6,00,147 ಸಕ್ರಿಯ ಪ್ರಕರಣಗಳು ಇವೆ.

ಗ್ರಾಮೀಣ ಭಾಗದಲ್ಲಿ ಕೊರೋನಾ ಸ್ಫೋಟ; ಹೊಸ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ!

ಭಾನುವಾರ 403 ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಮೂಲಕ ಇದುವರೆಗೆ ಕೊರೋನಾ ಸೋಂಕಿನಿಂದ 21,837 ಜನರು ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೊರೋನಾ ಎರಡನೇ ಅಲೆ ಪ್ರಾರಂಭದಲ್ಲಿ ಹಾಟ್‌ಸ್ಪಾಟ್ ಆಗಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು 8,344 ಜನರಿಗೆ ಹೊಸದಾಗಿ ಸೋಂಕು ತಗಲಿದ್ದು,  13,612 ಸೋಂಕಿತರು ಗುಣಮುಖರಾಗಿದ್ದಾರೆ. ಇದರೊಂದಿಗೆ ಪ್ರಸ್ತುತ 3,61,380 ಸಕ್ರಿಯ ಪ್ರಕರಣಗಳಿವೆ. 

Latest Videos
Follow Us:
Download App:
  • android
  • ios