Asianet Suvarna News Asianet Suvarna News

ಸಮಾಧಾನಕರ ಸಂಗತಿ: ಬೆಂಗಳೂರಲ್ಲಿ ಸೋಂಕಿತರಿಗಿಂತ ಗುಣ ಆದವರ ಸಂಖ್ಯೆಯೇ ಹೆಚ್ಚು..!

ಬುಧವಾರ 1848 ಮಂದಿಗೆ ಸೋಂಕು| 3083 ಮಂದಿ ಗುಣಮುಖರಾಗಿ ಬಿಡುಗಡೆ| ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಕಂಟೈನ್ಮೆಂಟ್‌ ಪ್ರದೇಶಗಳ ಸಂಖ್ಯೆಯೂ ಹೆಚ್ಚು| 24,826 ಕಂಟೈನ್ಮೆಂಟ್‌ ವಲಯ ಈವರೆಗೆ ಸೃಷ್ಟಿ|

3083 Corona Patients Discharge From Covid Hospitals in Bengaluru
Author
Bengaluru, First Published Aug 6, 2020, 8:09 AM IST

ಬೆಂಗಳೂರು(ಆ.06): ರಾಜಧಾನಿ ಬೆಂಗಳೂರಿನಲ್ಲಿ ಸತತ ನಾಲ್ಕು ದಿನದಿಂದ ಹೊಸದಾಗಿ ಸೋಂಕಿತ ಪ್ರಕರಣಗಳಿಗಿಂತ ಹೆಚ್ಚಾಗಿ ಸೋಂಕು ಮುಕ್ತರಾಗಿ ಬಿಡುಗಡೆಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬುಧವಾರ 1,848 ಮಂದಿ ಹೊಸ ಸೋಂಕಿತರು ಪತ್ತೆಯಾದರೆ 3,083 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಆ.2ರಿಂದ ಪ್ರತಿದಿನ ಪತ್ತೆಯಾಗುತ್ತಿರುವ ಸೋಂಕಿತರಿಗಿಂತ ಅಧಿಕ ಮಂದಿ ಸೋಂಕಿನಿಂದ ಗುಣಮುಖರಾಗುತ್ತಿದ್ದಾರೆ. ಬುಧವಾರ 3083 ಮಂದಿ ಗುಣಮುಖರಾಗುವ ಮೂಲಕ ಬೆಂಗಳೂರಿನಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 30,960ಕ್ಕೆ ಏರಿಕೆಯಾಗಿದೆ.

ಬೆಂಗಳೂರಲ್ಲಿ ಕ್ವಾರಂಟೈನ್‌ ನಿಯಮ ಉಲ್ಲಂಘನೆ: 770 ಜನರ ವಿರುದ್ಧ ಎಫ್‌ಐಆರ್‌

ಬುಧವಾರ ಪತ್ತೆಯಾದ 1,848 ಹೊಸ ಸೋಂಕಿತರ ಪೈಕಿ 1,192 ಪುರುಷರು, 652 ಮಹಿಳೆಯರು, ನಾಲ್ವರು ಲೈಂಗಿಕ ಅಲ್ಪ ಸಂಖ್ಯಾತರಾಗಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 64,881ಕ್ಕೆ ಏರಿಕೆಯಾಗಿದೆ. ಇನ್ನು 32,757 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

29 ಮಂದಿ ಸಾವು:

ನಗರದಲ್ಲಿ ಬುಧವಾರ 29 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಈ ಪೈಕಿ 19 ಮಂದಿ ಪುರುಷರು, 10 ಮಹಿಳೆಯರಾಗಿದ್ದಾರೆ. ಇದರಲ್ಲಿ 80 ವರ್ಷದ ಮೇಲ್ಪಟ್ಟವರು ಐದು, 23 ವರ್ಷ ಓರ್ವ ಯುವತಿ ಉಳಿದವರು 40ರಿಂದ 80 ವರ್ಷ ವಯೋಮಿತಿಯವರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

25 ಸಾವಿರದತ್ತ ಕಂಟೈನ್ಮೆಂಟ್‌ ವಲಯ:

ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಕಂಟೈನ್ಮೆಂಟ್‌ ಪ್ರದೇಶಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, 24,826 ಕಂಟೈನ್ಮೆಂಟ್‌ ವಲಯ ಈವರೆಗೆ ಸೃಷ್ಟಿಯಾಗಿದೆ. ಈ ಪೈಕಿ 10,924 ಕಂಟೈನ್ಮೆಂಟ್‌ ಪ್ರದೇಶ ಕಂಟೈನ್ಮೆಂಟ್‌ ಮುಕ್ತವಾಗಿವೆ. ಇನ್ನು 13,902 ಸಕ್ರಿಯ ಕಂಟೈನ್ಮೆಂಟ್‌ ಪ್ರದೇಶಗಳಿವೆ ಎಂದು ಬಿಬಿಎಂಪಿ ತಿಳಿಸಿದೆ.
 

Follow Us:
Download App:
  • android
  • ios