Asianet Suvarna News Asianet Suvarna News

ದಸರಾಕ್ಕೆ ಬೆಂಗಳೂರು-ಬೀದರ್‌ಗೆ 3 ವಿಶೇಷ ರೈಲು ಸೇವೆ: ಕೇಂದ್ರ ಸಚಿವ ಭಗವಂತ ಖೂಬಾ

ನಾಡಹಬ್ಬ ದಸರಾ ಪ್ರಯುಕ್ತ ಬೀದರ್‌ ಲೋಕಸಭಾ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ರಾಜಧಾನಿ ಬೆಂಗಳೂರಿನಿಂದ ಬೀದರ್ ವರೆಗೆ ಅ. 20ರಿಂದ 24ರ ವರೆಗೆ 3 ವಿಶೇಷ ರೈಲುಗಳು ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

3 special train service to Bengaluru-Bidar for dasara festival says bhagwant khooba at bidar rav
Author
First Published Oct 19, 2023, 12:59 PM IST

ಬೀದರ್ (ಅ.19):  ನಾಡಹಬ್ಬ ದಸರಾ ಪ್ರಯುಕ್ತ ಬೀದರ್‌ ಲೋಕಸಭಾ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ರಾಜಧಾನಿ ಬೆಂಗಳೂರಿನಿಂದ ಬೀದರ್ ವರೆಗೆ ಅ. 20ರಿಂದ 24ರ ವರೆಗೆ 3 ವಿಶೇಷ ರೈಲುಗಳು ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಅ.20ರ ಶುಕ್ರವಾರ ರೈಲು ಸಂಖ್ಯೆ: 06521 ಯಶವರ್ಪುರದಿಂದ ಬೀದರ್‌ಗೆ ಹೊರಡಲಿದೆ. ಮರುದಿನ 21 ಅಕ್ಟೋಬರ್ ಶನಿವಾರ, ರೈಲು ಸಂಖ್ಯೆ: 06522 ಬೀದರ್‌ನಿಂದ ಯಶವಂತಪೂರಕ್ಕೆ ಹೊರಡಲಿದೆ. ಅ.21ರಂದು ಶನಿವಾರದಂದು, ರೈಲು ಸಂಖ್ಯೆ 06523, ಯಶವಂತಪುರದಿಂದ ಬೀದರ್‌ಗೆ, ಮರುದಿನ ಅ.22ರಂದು ಭಾನುವಾರ ರೈಲು ಸಂಖ್ಯೆ: 06524, ಬೀದರ್‌ನಿಂದ ಯಶವಂತಪುರಕ್ಕೆ ಚಲಿಸಲಿದೆ.

ರಾಹುಲ್‌ ಎತ್ತರಕ್ಕೆ ಖೂಬಾ ಬೆಳೆದಿಲ್ಲ, ಸ್ಪರ್ಧೆ ಮಾತೆಲ್ಲಿ ಬಂತು: ಆನಂದ ದೇವಪ್ಪ

ಅ.23ರಂದು ಸೋಮವಾರ, ರೈಲು ಸಂಖ್ಯೆ: 06505 ಯಲಹಂಕದಿಂದ ಬೀದರ್‌ ಹಾಗೆ 24ನೇ ಅಕ್ಟೋಬರ್, ಮಂಗಳವಾರ ರೈಲು ಸಂಖ್ಯೆ: 06506 ಬೀದರನಿಂದ ಯಶವಂತಪೂರವರೆಗೆ, 3 ವಿಶೇಷ ರೈಲುಗಳು ಚಲಿಸಲಿವೆ. ಅ. 20, 21 ರಂದು ಹೊರಡುವ ರೈಲುಗಳು ಯಶವಂತಪುರದಿಂದ ರಾತ್ರಿ 11.15ಕ್ಕೆ ಹೊರಟು, ಯಲಹಂಕ, ಧರ್ಮವರಂ, ಮಂತ್ರಾಲಯ, ವಾಡಿ, ಸೇಡಂ, ಕಲಬುರಗಿ, ತಾಜಸುಲ್ಥಾನಪೂರ, ಕಮಲಾಪೂರ ಮಾರ್ಗವಾಗಿ ಹುಮನಾಬಾದಗೆ ಬೆಳಗ್ಗೆ 10.49ಕ್ಕೆ ತಲುಪಿ, ಬೀದರ್‌ಗೆ ಮಧ್ಯಹ್ನ 12.15ಕ್ಕೆ ತಲುಪಲಿವೆ.

ಹಾಗೆ ಅ. 23ರಂದು ಹೊರಡುವ ರೈಲು ಮಾತ್ರ ಯಲಹಂಕದಿಂದ ರಾತ್ರಿ 11.30ಕ್ಕೆ ಬಿಟ್ಟು ಮರುದಿನ ಬೀದರ್ ಗೆ ಮ. 12.15ಕ್ಕೆ ತಲುಪಲಿದೆ. ಈ ಎಲ್ಲಾ ರೈಲುಗಳು ಬಂದ ದಿನವೇ ಮ. 02.30ಕ್ಕೆ ಬೀದರ್ನಿಂದ ಹೊರಟು, ಹುಮನಾಬಾದಗೆ ಮ. 03.00 ಗಂಟೆಗೆ ತಲುಪಿ, ಬಂದ ಮಾರ್ಗವಾಗಿಯೇ ಮರುದಿನ ನಸುಕಿನ ಜಾವ ಯಶವಂತಪೂರಕ್ಕೆ 4 ಗಂಟೆಗೆ ತಲುಪಲಿವೆ. ಇದಲ್ಲದೇ ರೈಲ್ವೆ ಇಲಾಖೆಯ ನಿಯಮಾವಳಿಗಳನ್ವಯ ಬಂದ್‌ ಅಗಿದ್ದ ಹುಮನಾಬಾದ ರಿಸರ್ವೇಷನ್ ಟಿಕೆಟ್ ಕೌಂಟರ್ ಕೂಡ ಜನತೆಯ ಇಚ್ಛೆಯಂತೆ ಬರುವ ಎರಡು ದಿನದೊಳಗೆ ಪುನರ್ ಪ್ರಾರಂಭವಾಗಲಿದೆ.

ನನ್ನ ವಿರುದ್ಧ ರಾಹುಲ್‌ ನಿಲ್ಲಿಸಿದ್ರೂ 2 ಲಕ್ಷ ಮತಗಳಿಂದ ಗೆಲ್ತೇನೆ: ಕೇಂದ್ರ ಸಚಿವ ಖೂಬಾ

ಹುಮನಾಬಾದ ಮಾರ್ಗವಾಗಿ ಚಲಿಸಲಿರುವ ಬೆಂಗಳೂರು ರೈಲು ಹಾಗೂ ಇತರೆಡೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತೆ ಪುನರ್ ಪ್ರಾರಂಭವಾಗುತ್ತಿವೆ, ಇದರ ಜೊತೆಗೆ ಕಮಲಾಪೂರದಲ್ಲಿಯೂ ಹೊಸದಾಗಿ ರಿಸರ್ವೇಷನ್ ಟಿಕೆಟ್ ಕೌಂಟರ್ ಪ್ರಾರಂಭಿಸಲಾಗುತ್ತಿದೆ. ಜನತೆ ಹೆಚ್ಚಿನ ಸಂಖ್ಯೆಯಲ್ಲಿ ರೈಲ್ವೆ ನಿಲ್ದಾಣದ ಕೌಂಟರ್‌ಗಳಲ್ಲಿ ಟಿಕೆಟ್‌ ಪಡೆದು ಸಹಕರಿಸಬೇಕೆಂದು ಕೇಂದ್ರ ಸಚಿವ ಭಗವಂತ ಖೂಬಾ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

Follow Us:
Download App:
  • android
  • ios