Asianet Suvarna News Asianet Suvarna News

ರಾಹುಲ್‌ ಎತ್ತರಕ್ಕೆ ಖೂಬಾ ಬೆಳೆದಿಲ್ಲ, ಸ್ಪರ್ಧೆ ಮಾತೆಲ್ಲಿ ಬಂತು: ಆನಂದ ದೇವಪ್ಪ

ರಾಹುಲ್‌ ಗಾಂಧಿ ಒಬ್ಬ ರಾಷ್ಟ್ರೀಯ ನಾಯಕ. ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದವರು. ಅಂತಹ ರಾಷ್ಟ್ರ ನಾಯಕರ ಬಗ್ಗೆ ಮಾತನಾಡುವಷ್ಟು ಎತ್ತರಕ್ಕೆ ತಾವು ಬೆಳದಿಲ್ಲ ಎಂದು ಖೂಬಾಗೆ ತಿಳಿಸಿದ ಆನಂದ 

Anand Devappa React to Union Minister Bhagwanth Khuba's Statement About Rahul Gandhi grg
Author
First Published Oct 7, 2023, 11:00 PM IST

ಬೀದರ್‌(ಅ.07): ನನ್ನ ವಿರುದ್ಧ ರಾಹುಲ್‌ ಗಾಂಧಿ ನಿಂತರೂ 2 ಲಕ್ಷ ಮತಗಳಿಂದ ಗೆಲ್ತೇನೆ ಎಂದು ಹೇಳಿರುವ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಅಧಿಕಾರದ ಮದ ಏರಿರುವುದು ಸ್ಪಷ್ಟವಾಗುತ್ತದೆ ಎಂದು ಎಐಸಿಸಿ ಸದಸ್ಯ ಆನಂದ ದೇವಪ್ಪ ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಖೂಬಾ ಅವರು ನನ್ನ ವಿರುದ್ಧ ರಾಹುಲ್‌ ಗಾಂಧಿ ಸ್ಪರ್ಧಿಸಿದರೂ ಅವರ ಸೋಲು ಖಚಿತ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿ, ರಾಹುಲ್‌ ಗಾಂಧಿ ಒಬ್ಬ ರಾಷ್ಟ್ರೀಯ ನಾಯಕ. ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದವರು. ಅಂತಹ ರಾಷ್ಟ್ರ ನಾಯಕರ ಬಗ್ಗೆ ಮಾತನಾಡುವಷ್ಟು ಎತ್ತರಕ್ಕೆ ತಾವು ಬೆಳದಿಲ್ಲ ಎಂದು ಖೂಬಾಗೆ ಆನಂದ ತಿಳಿಸಿದ್ದಾರೆ.

ನನ್ನ ವಿರುದ್ಧ ರಾಹುಲ್‌ ನಿಲ್ಲಿಸಿದ್ರೂ 2 ಲಕ್ಷ ಮತಗಳಿಂದ ಗೆಲ್ತೇನೆ: ಕೇಂದ್ರ ಸಚಿವ ಖೂಬಾ

ಬೀದರ್‌ ಜಿಲ್ಲೆಯ ಮುಗ್ದ ಜನರ ಆಶೀರ್ವಾದದಿಂದ ತಾವು ಎರಡು ಸಲ ನರೇಂದ್ರ ಮೋದಿ ಕೃಪಾರ್ಶೀವಾದದಿಂದ ಗೆಲುವು ಸಾಧಿಸಿದ್ದೀರಿ ಎಂಬುವದನ್ನು ಮರೆಯಬೇಡಿ. ರಾಹುಲ್ ಗಾಂಧಿ ಅಥವಾ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡುವಂತ ವ್ಯಕ್ತಿತ್ವ ನಮ್ಮದ್ಯಾರದೂ ಇನ್ನೂ ಬೆಳೆದಿಲ್ಲ ಎಂಬ ಸತ್ಯ ತಾವು ತಿಳಿದುಕೊಳ್ಳಿ ಎಂದು ಹೇಳಿದ್ದಾರೆ

ಈ ಸಲ ಬರುವ ಲೋಕಸಭೆ ಚುನಾವಣೆಯಲ್ಲಿ ನಾನು ಸ್ವತಃ ನಿಮ್ಮ ವಿರುದ್ಧ ಸ್ಪರ್ಧೆ ಮಾಡಲು ರಾಹುಲ್‌ ಗಾಂಧಿಯವರಿಗೆ ಮನವಿ ಮಾಡಿದ್ದು, ನಮ್ಮ ಎಲ್ಲಾ ನಾಯಕರ, ಕಾರ್ಯಕರ್ತರ ಹಾಗೂ ಜಿಲ್ಲೆಯ ಜನರ ಆಶೀರ್ವಾದದಿಂದ ತಮಗೆ ಸೋಲಿನ ರುಚಿ ತೋರಿಸುವುದು ಖಚಿತ ನೆನಪಿಟ್ಟುಕೊಳ್ಳಿ ಎಂದು ಆನಂದ ದೇವಪ್ಪ ಎಚ್ಚರ ನೀಡಿದ್ದಾರೆ.

Follow Us:
Download App:
  • android
  • ios