ಬೆಂಗಳೂರು(ಜ. 30)  ಬೆಂಗಳೂರಿನಲ್ಲಿ 3 ಲಕ್ಷಕ್ಕೂ ಅಧಿಕ ಬಾಂಗ್ಲಾ ವಲಸಿಗರು ಇದ್ದಾರೆ ಎಂದು ಮಾಧ್ಯಮಗಳು ಪದೇ ಪದೇ ವರದಿಮಾಡುತ್ತಿದ್ದರೂ ವಿರೋಧದ ದನಿ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಲೇ ಇತ್ತು. ಹಾಗೇನು ಇಲ್ಲ.. ಇಲ್ಲಿ ಇರುವವರೆಲ್ಲ ನಮ್ಮವರೆ ಎಂದು ಸಮರ್ಥನೆ ಮಾಡಿಕೊಂಡವರಿಗೂ ಕಡಿಮೆ ಇಲ್ಲ.

ಬೆಂಗಳೂರಿನಲ್ಲಿ 3 ಲಕ್ಷ ಬಾಂಗ್ಲಾ ಪ್ರಜೆಗಳು ವಾಸವಿದ್ದಾರೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ  ಭಾಸ್ಕರ್ ರಾವ್ ಅವರೇ ಹೇಳಿದ್ದಾರೆ. ಬಾಂಗ್ಲಾ ದೇಶ ಮಾತ್ರವಲ್ಲ ನೇಪಾಳದಿಂದಲೂ ಸಾಕಷ್ಟು ಜನರು ಬೆಂಗಳೂರಿಗೆ ಬಂದಿದ್ದಾರೆ. ಕೆಲ ತಿಂಗಳ ಹಿಂದೆ ಕೆಲವರನ್ನ ಡಿಪೋರ್ಟ್ ಮಾಡಲಾಗಿತ್ತು. ಡಿಪೋರ್ಟ್ ಮಾಡಲು ಹೋದಾಗ ಲಕ್ಷಾಂತರ ಸಂಖ್ಯೆಯಲ್ಲಿ ಇದ್ದಾರೆ ಎಂದು ಬಾಂಗ್ಲಾದವರೇ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಸ್ಫೋಟಕ್ಕೆ ಸಂಚು ರೂಪಿಸಿದ್ದ ಬಾಂಗ್ಲಾ ಉಗ್ರ

ಕೇವಲ 61 ಜನರನ್ನ ಡಿಪೋರ್ಟ್ ಮಾಡಲು ಬಂದಿದ್ದೀರಿ. ಲಕ್ಷಾಂತರ ಜನ ಇದ್ದಾರಲ್ಲ ಅವರನ್ನ ಯಾವಾಗ ಕಳಿಸ್ತೀರಿ ಎಂದು ಬಿಎಸ್ಎಫ್ ನವರೇ ಕೇಳಿದ್ದಾರೆ. ಪೊಲೀಸರಾಗಲಿ, ಸರ್ಕಾರ ಆಗಲಿ ಬಾಂಗ್ಲಾದವರು ಎಷ್ಟಿದ್ದಾರೆ ಎಂದು ಕೌಂಟ್ ಮಾಡಿಲ್ಲ. ಯಾವ ಯಾವ ಕಾಲೋನಿಗಳಲ್ಲಿ ಬಾಂಗ್ಲಾದವರು ಇದ್ದಾರೆ ನಮ್ಮ ಪೊಲೀಸ್ ಸಿಬ್ಬಂದಿ ಲಿಸ್ಟ್ ಮಾಡಿದ್ದಾರೆ. ಕಸ ಕಲೆಕ್ಟ್ ಮಾಡೋದು, ಕಟ್ಟಡ ನಿರ್ಮಾಣ ಸೇರಿ ಕಡಿಮೆ ಸಂಬಳ ಬರುವ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ನೀಡಿದರು.

ಬಾಂಗ್ಲಾದೇಶಿ ದಲ್ಲಾಳಿಗಳೇ ಬಾರ್ಡರ್ ಕ್ರಾಸ್ ಮಾಡಿಸ್ತಾರೆ. ಬೆಂಗಳೂರಿಗೆ ಕರ್ಕೊಂಡು ಬಂದು ಕೆಲಸ ಮಾಡಲು ಬಿಡ್ತಾರೆ. ಬೆಂಗಳೂರಿಗೆ ಬೇಕಾಗುವ ಕೂಲಿ ಕಾರ್ಮಿಕರು ಕರ್ನಾಟದಲ್ಲಿ ಸಿಗುತ್ತಿಲ್ಲ. ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಬೇಕಾಗಿದ್ದಾರೆ ಅದಕ್ಕೆ ಬಾಂಗ್ಲಾದವರೂ ಬಂದಿದ್ದಾರೆ ಅಷ್ಟೇ. ಅವರದ್ದೇ ಆದ ಕಾಲೋನಿಗಳು ಬೆಂಗಳೂರಿನಲ್ಲಿ ಇವೆ ಎಂಬ ವಿಚಾರವನ್ನು ರಾವ್ ಹೇಳಿದರು.

"