ಮಿಜೋರಾಂ [ಜ.25]:  ಕಳೆದ ವರ್ಷ ಮಿಜೋರಾಂನಲ್ಲಿ ಬಂಧಿತರಾಗಿದ್ದ ಬಾಂಗ್ಲಾದೇಶದ ಅನ್ಸರ್‌ ಅಲ್‌ ಇಸ್ಲಾಂ ಸಂಘಟನೆಯ ಇಬ್ಬರು ಶಂಕಿತ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಇಲ್ಲಿನ ಕೋರ್ಟ್‌ಗೆ ಆರೋಪ ಪಟ್ಟಿಸಲ್ಲಿಸಿದೆ. ಬಂಧಿತರ ಪೈಕಿ ಒಬ್ಬ ಉಗ್ರ ಬೆಂಗಳೂರಿನಲ್ಲಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದ ಎಂಬ ಸಂಚಲನ ಮೂಡಿಸುವ ಅಂಶವೂ ಇದೆ.

ಕಳೆದ ವರ್ಷ ಜುಲೈನಲ್ಲಿ ಮಿಜೋರಾಂನ ಸಿಲ್ಸುರಿ ಎಂಬಲ್ಲಿ ಮಹಮೂದ್‌ ಹಸನ್‌ ಅಲಿಯಾಸ್‌ ಶಫಿ ಉಲ್‌ ಇಸ್ಲಾಂ ಮತ್ತು ಸಾದ್‌ ಹುಸೇನ್‌ ಅಲಿಯಾಸ್‌ ಮೊಹಮ್ಮದ್‌ ಸಯ್ಯದ್‌ ಹುಸೇನ್‌ ಶಂಕಾಸ್ಪದ ದಾಖಲೆಗಳನ್ನು ಹೊಂದಿದ ಕಾರಣಕ್ಕೆ ಮಿಜೋರಾಂ ಪೊಲೀಸರಿಂದ ಬಂಧಿತರಾಗಿದ್ದರು. ಬಳಿಕ ಈ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು.

ಮಂಗಳೂರು ಏರ್‌ಪೋರ್ಟ್‌ಗೆ ಮತ್ತೆ ಆದಿತ್ಯ, ಕೃತ್ಯವೆಸಗಿದ ಸ್ಥಳ ಮಹಜರು...

‘ಬಂಧಿತರ ಪೈಕಿ ಒಬ್ಬನಾದ ಮಹಮೂದ್‌ ಹಸನ್‌, ತ್ರಿಪುರಾದ ಅಗರ್ತಲಾದಿಂದ ಬೆಂಗಳೂರಿಗೆ ಪ್ರಯಾಣಿಸಿದ್ದ. ನವೆಂಬರ್‌ 2018ರಿಂದ ಜುಲೈ 2019ರವರೆಗೆ 8ರಿಂದ 9 ತಿಂಗಳ ಕಾಲ ಬೆಂಗಳೂರಿನಲ್ಲಿ ನೆಲೆಸಿದ್ದ. ಈ ವೇಳೆ ಬೆಂಗಳೂರಿನ ಸಾರ್ವಜನಿಕ ಸ್ಥಳಗಳನ್ನು ಸಮೀಕ್ಷೆ ಮಾಡಿ, ಇಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ’ ಎಂದು ಆರೋಪಪಟ್ಟಿಯಲ್ಲಿದೆ.

ಧರ್ಮಕ್ಕೆ ಒಳಿತಾಗುತ್ತದೆ ಎಂದು ಆರೆಸ್ಸೆಸ್‌ ಕಾರ್ಯಕರ್ತನ ಹತ್ಯೆ ಯತ್ನ...

ಇವರು ನಕಲಿ ಆಧಾರ್‌ ಕಾರ್ಡು ರೂಪಿಸಿಕೊಂಡು ಭಾರತ ಪ್ರವೇಶಿಸಿ ಭಯೋತ್ಪಾದಕ ಸಂಚು ರೂಪಿಸುತ್ತಿದ್ದರು ಎಂದು ಎನ್‌ಐಎ ಹೇಳಿದೆ.