ಟ್ರಕ್ ಟರ್ಮಿನಲ್‌ ಹಗರಣ: ವೀರಯ್ಯ ಖಾತೆಗೆ 3 ಕೋಟಿ ಲಂಚ ವರ್ಗಾವಣೆ ಪತ್ತೆ..!

ಅಕ್ರಮ ನಡೆದ ಅವಧಿಯಲ್ಲಿನ ವೀರಯ್ಯ ಅವರಿಗೆ ಸೇರಿದ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಿದಾಗ ಹಣ ವರ್ಗಾವಣೆ ಸಂಗತಿ ಗೊತ್ತಾಯಿತು. ಟ್ರಕ್ ಟರ್ಮಿನಲ್‌ ಗಳ ನವೀಕರಣ ಹಾಗೂ ನಿರ್ವಹಣೆ ಸಂಬಂಧ ಗುತ್ತಿಗೆ ನೀಡಿಕೆಯಲ್ಲಿ ತಮ್ಮ ಹಿತಾಸಕ್ತಿ ಕಾಪಾಡಿದ್ದಕ್ಕೆ ಪ್ರತಿಯಾಗಿ ವೀರಯ್ಯ ಅವರಿಗೆ ಗುತ್ತಿಗೆದಾರರು 3 ಕೋಟಿ ರು ರು. ಹಣ ವರ್ಗಾವಣೆಯಾಗಿ ರುವುದನ್ನು ಪತ್ತೆ ಹಚ್ಚಿದೆ.

3 crores bribe transfer to Veeriah's account on truck terminal corporation scam in karnataka grg

ಬೆಂಗಳೂರು(ಜು.14):  ರಾಜ್ಯ ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್‌ ನಿಗಮ (ಡಿಡಿಯುಟಿಟಿಎಲ್)ದ 47.10 ಕೋಟಿ ರು. ಅವ್ಯವಹಾರ ಪ್ರಕರಣದ ಬೆನ್ನುಹತ್ತಿರುವ ಸಿಐಡಿ, ಈಗ ಬಂಧಿತರಾಗಿರುವ ನಿಗಮದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಶಾಸಕ ಡಿ. ಎಸ್‌.ವೀರಯ್ಯ ಅವರ ಬ್ಯಾಂಕ್ ಖಾತೆಗೆ 3 ಕೋಟಿ ರು. ಹಣ ವರ್ಗಾವಣೆಯಾಗಿ ರುವುದನ್ನು ಪತ್ತೆ ಹಚ್ಚಿದೆ.

ಅಕ್ರಮ ನಡೆದ ಅವಧಿಯಲ್ಲಿನ ವೀರಯ್ಯ ಅವರಿಗೆ ಸೇರಿದ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಿದಾಗ ಹಣ ವರ್ಗಾವಣೆ ಸಂಗತಿ ಗೊತ್ತಾಯಿತು. ಟ್ರಕ್ ಟರ್ಮಿನಲ್‌ ಗಳ ನವೀಕರಣ ಹಾಗೂ ನಿರ್ವಹಣೆ ಸಂಬಂಧ ಗುತ್ತಿಗೆ ನೀಡಿಕೆಯಲ್ಲಿ ತಮ್ಮ ಹಿತಾಸಕ್ತಿ ಕಾಪಾಡಿದ್ದಕ್ಕೆ ಪ್ರತಿಯಾಗಿ ವೀರಯ್ಯ ಅವರಿಗೆ ಗುತ್ತಿಗೆದಾರರು 3 ಕೋಟಿ ರು ರು. ಹಣ ವರ್ಗಾವಣೆಯಾಗಿ ರುವುದನ್ನು ಪತ್ತೆ ಹಚ್ಚಿದೆ.

ದೇವರಾಜ್‌ ಅರಸ್‌ ಟ್ರಕ್‌ ಟರ್ಮಿನಲ್‌ ಹಗರಣ: ಮಾಜಿ ಅಧ್ಯಕ್ಷ ಡಿಎಸ್‌ ವೀರಯ್ಯ ಬಂಧನ, ಪ್ರಕರಣ ಸಿಐಡಿಗೆ ವರ್ಗಾವಣೆ

ಅಕ್ರಮ ನಡೆದ ಅವಧಿಯ ಲ್ಲಿನ ವೀರಯ್ಯ ಅವರಿಗೆ ಸೇರಿದ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಿದಾಗ ಹಣ ವರ್ಗಾವಣೆ ಸಂಗತಿ ಗೊತ್ತಾಯಿತು. ಟ್ರಕ್ ಟರ್ಮಿನಲ್ ಗಳ ನವೀಕರಣ ಹಾಗೂ ನಿರ್ವಹಣೆ ಸಂಬಂಧ ಗುತ್ತಿಗೆ ನೀಡಿಕೆಯಲ್ಲಿ ತಮ್ಮ ಹಿತಾಸಕ್ತಿ ಕಾಪಾಡಿದ್ದಕ್ಕೆ ಪ್ರತಿಯಾಗಿ ವೀರಯ್ಯ ಅವರಿಗೆ ಗುತ್ತಿಗೆದಾರರು 3 ಕೋಟಿ ರು. ಹಣ ಕೊಟ್ಟಿದ್ದರು. ಈ ಹಣ ಗುತ್ತಿಗೆದಾರರ ಬ್ಯಾಂಕ್‌ ಖಾತೆಯಿಂದ ವೀರಯ್ಯ ಖಾತೆಗೆ ವರ್ಗಾವಣೆಯಾಗಿದೆ ಎಂದು ಸಿಐಡಿ ಮೂಲಗಳು ಮಾಹಿತಿ ನೀಡಿವೆ. 

ವೀರಯ್ಯ ಮತ್ತು ಗುತ್ತಿಗೆದಾರರ ನಡುವೆ ಕಿಕ್‌ಬ್ಯಾಕ್ ವ್ಯವಹಾರ ನಡೆದಿರುವುದಕ್ಕೆ ಪೂರಕ ದಾಖಲೆಗಳು ತನಿಖೆಯಲ್ಲಿ ಪತ್ತೆಯಾಗಿವೆ. ಈಗಾಗಲೇ ನ್ಯಾಯಾಲ ಯದಲ್ಲಿ ಮೂವರು ಗುತ್ತಿಗೆದಾರರು ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ತನಿಖೆಯ ಮುಂದಿನ ಹಂತದಲ್ಲಿ ಮತ್ತಷ್ಟು ಹಣದ ಮೂಲಗಳು ಸಿಗಬಹುದು ಎಂದು ಅಧಿಕಾರಿಗಳು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

ನಿವೇಶನ-ಮನೆ ಖರೀದಿ: ಟ್ರಕ್ ಟರ್ಮಿನಲ್‌ನ

47.10 ಕೋಟಿ ರು. ಹಣ ಅವ್ಯವಹಾರದಲ್ಲಿ 39 ಕೋಟಿ ರು. ಪತ್ತೆಯಾಗಿದೆ. ಈಗ ಆ ಹಣದ ಜಪ್ತಿ ಕಾರ್ಯ ಮುಂದುವರೆದಿದ್ದು, ಕೆಲವು ಮನೆಗಳು ಹಾಗೂ ನಿವೇಶನಗಳನ್ನು ಸಹ ಖರೀದಿಸಿರುವುದು ಗೊತ್ತಾಗಿದೆ. ಆ ಆಸ್ತಿಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮ ಹಗರಣ: ಬಿಜೆಪಿ ಮಾಜಿ ಶಾಸಕ ವೀರಯ್ಯ ಬಂಧನ

40% ಅಲ್ಲ 100% ಅಕ್ರಮ ಎಂದಿದ್ದ ಎಂಡಿ:

ಟ್ರಕ್ ಟರ್ಮಿನಲ್‌ಗಳ ನವೀಕರಣ ಹಾಗೂ ನಿರ್ವಹಣೆ ಕಾಮಗಾರಿಯಲ್ಲಿ ಶೇ.40ರಷ್ಟು ಅಲ್ಲ ಶೇ.100ರಷ್ಟು ಅಕ್ರಮ ನಡೆದಿದೆಎಂದು ಆರೋಪಿಸಿ ರಾಜ್ಯ ಸರ್ಕಾರಕ್ಕೆ ಮೂರು ಬಾರಿ ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ಲಿ. (ಡಿಡಿಯುಟಿಟಿಎಲ್) ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಕಾಶ್ ಪತ್ರ ಬರೆದಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.

ಈ ನಿಗಮದ ಎಂಡಿಯಾಗಿ ಶಿವಪ್ರಕಾಶ್ ಅವರು ಅಧಿಕಾರ ಸ್ವೀಕರಿಸುವ ಮುನ್ನ ಈ ಅವ್ಯವಹಾರ ನಡೆದಿತ್ತು. ಆಗ ಟರ್ಮಿನಲ್‌ಗಳ ನವೀಕರಣದ ಮಾಹಿತಿ ಪಡೆದು ಅವರು ಪರಿಶೀಲಿಸಿದಾಗ ಕಾಮಗಾರಿ ನಡೆಸದೆ ನಕಲಿ ದಾಖಲೆ ಸೃಷ್ಟಿಸಿ ನಿಗಮದಿಂದ ಹಣ ಡ್ರಾ ಮಾಡಿದ್ದ ವಿಷಯ ಗೊತ್ತಾಗಿದೆ. ಕೂಡಲೇ ಟರ್ಮಿನಲ್‌ಗಳಿಗೆ ಭೇಟಿ ನೀಡಿ ವಿಡಿಯೋ ಚಿತ್ರೀಕರಣ ಮಾಡಿದ ಅವರು, ಈ ಅಕ್ರಮದ ಬಗ್ಗೆ ಸವಿಸ್ತಾರವಾಗಿ 2022ರಲ್ಲೇ ರಾಜ್ಯ ಸಾರಿಗೆ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಆದರೆ ಈ ಪತ್ರಕ್ಕೆ ಸೂಕ್ತ ಸ್ಪಂದನೆ ದೊರೆಯದೆ ಹೋದಾಗ ಅವರು, ಕೊನೆಗೆ ಲಾರಿ ಮಾಲಿಕರ ಸಂಘದ ಅಧ್ಯಕ್ಷರೂ ಹಾಗೂ ನಿಗಮದ ಆಡಳಿತ ಮಂಡಳಿ ಸದಸ್ಯ ಚೆನ್ನಾರೆಡ್ಡಿ ಅವರಿಗೆ ಪತ್ರ ಬರೆದು ಮಾಹಿತಿ ನೀಡಿದ್ದರು. ಈ ಪತ್ರ ಆಧರಿಸಿ ಲೋಕಾಯುಕ್ತ ಸಂಸ್ಥೆಗೆ ಲಾರಿ ಮಾಲಿಕರ ಸಂಘವು ದೂರು ನೀಡಿತು. ಅಷ್ಟರಲ್ಲಿ ಸರ್ಕಾರ ಬದಲಾದ ಬಳಿಕ ಸಾರಿಗೆ ಮಂತ್ರಿ ರಾಮಲಿಂಗಾರೆಡ್ಡಿ ಅವರಿಗೆ ಎಂಡಿ ಮಾಹಿತಿ ನೀಡಿದರು. ಬಳಿಕ ಸಚಿವರ ಸೂಚನೆ ಮೇರೆಗೆ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಂಡಿ ದೂರು ನೀಡಿದರು. ಈ ಅಕ್ರಮ ಸಂಬಂಧ ನಿಗಮದ ಮಾಜಿ ಅಧ್ಯಕ್ಷ ವೀರಯ್ಯ ಹಾಗೂ ಮಾಜಿ ಎಂಡಿ ಶಂಕರಪ್ಪ ಅವರನ್ನು ಸಿಐಡಿ ಬಂಧಿಸಿದೆ.

Latest Videos
Follow Us:
Download App:
  • android
  • ios