3 ಕೋಟಿ ರು. ವಂಚನೆ ಪ್ರಕರಣದಿಂದ ಮಾಜಿ ಸಚಿವ ಬಿ.ಶ್ರೀರಾಮುಲುಗೆ ಮತ್ತೆ ಸಂಕಷ್ಟ   ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯನ್ನು ಹೈಕೋರ್ಟ್‌ ವಿಚಾರಣೆಗೆ ಅಂಗೀಕರಿಸಿದೆ

ಬೆಂಗಳೂರು (ಜು.27): 3 ಕೋಟಿ ರು. ವಂಚನೆ ಪ್ರಕರಣದಿಂದ ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಖುಲಾಸೆಗೊಳಿಸಿ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯನ್ನು ಹೈಕೋರ್ಟ್‌ ವಿಚಾರಣೆಗೆ ಅಂಗೀಕರಿಸಿದ್ದು, ಆ.9ಕ್ಕೆ ವಿಚಾರಣೆ ನಿಗದಿಪಡಿಸಿದೆ.

 ಮೇಲ್ಮನವಿದಾರರ ಪರ ವಕೀಲ ಎಸ್‌.ಬಾಲನ್‌ ವಾದ ಮಂಡಿಸಿ, 2014ರಲ್ಲಿ ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿದ್ದ ಬಿ.ಶ್ರೀರಾಮುಲು ಅವರು ಎಲ್‌.ಸೋಮಣ್ಣ ಅವರಿಂದ 2.96 ಕೋಟಿ ರು. ಹಣ ಪಡೆದಿದ್ದರು.

ಶ್ರೀರಾಮುಲು ಪಿಎ ಪರ ಯೋಗೇಶ್ವರ್ ಬ್ಯಾಟಿಂಗ್: ವಿಜಯೇಂದ್ರಗೆ ಪರೋಕ್ಷ ಟಾಂಗ್

ಈ ಹಣ ವಾಪಸ್‌ ಕೇಳಿದಾಗ ವಿಧಾನ ಪರಿಷತ್‌ ಇಲ್ಲವೇ ಬಳ್ಳಾರಿ ಲೋಕಸಭೆ ಟಿಕೆಟ್‌ ನೀಡಲಾಗುವುದು. ಸಾಧ್ಯವಾಗದಿದ್ದಲ್ಲಿ ಹಣ ಹಿಂದಿರುಗಿಸಲಾಗುವುದು ಎಂದು ತಿಳಿಸಿ ಚೆಕ್‌ ಸಹ ನೀಡಿದ್ದರು. ನಂತರ ಟಿಕೆಟ್‌ ಕೊಡದೇ, ಹಣವನ್ನೂ ಹಿಂದಿರುಗಿಸದೇ ವಂಚಿಸಿದ್ದಾರ ಎಂದು ಆರೋಪಿಸಿದರು.