Asianet Suvarna News Asianet Suvarna News

ರಾಜ್ಯದಲ್ಲಿ ಕೊರೋನಾ ಮತ್ತಷ್ಟು ಇಳಿಕೆ: ನಿಯಂತ್ರಣಕ್ಕೆ ಬಂದ ಸೋಂಕು

* ರಾಜ್ಯದಲ್ಲಿ ನಿಯಂತ್ರಣಕ್ಕೆ ಬಂದ ಕೊರೋನಾ ಸೋಂಕು
 * ಕೇವಲ 290 ಜನರಿಗೆ ಕೊರೋನಾ ಪಾಸಿಟಿವ್
* ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ 

290 New Coronavirus Cases and 10 deaths In Karnataka On October 25th rbj
Author
Bengaluru, First Published Oct 25, 2021, 7:03 PM IST

ಬೆಂಗಳೂರು, (ಅ.25): ರಾಜ್ಯದಲ್ಲಿ ಕೊರೋನಾ ಸೋಂಕು (Coronavirus) ನಿಯಂತ್ರಣಕ್ಕೆ ಬಂದಿದ್ದು, ಪ್ರಕರಣಗಳ ಸಂಖ್ಯೆಯಲ್ಲಿ ದಿನೇ ದಿನೇ ಇಳಿಮುಖವಾಗಿದೆ. 

ಇಂದು (ಅ.25) ಕೇವಲ 290 ಜನರಿಗೆ ಕೊರೋನಾ ಸೋಂಕು ತಗುಲಿದ್ದು,  10 ಮಂದಿ ಬಲಿಯಾಗಿದ್ದಾರೆ (Death). ಇದರೊಂದಿಗೆ ಸೋಂಕಿತರ ಸಂಖ್ಯೆ 29,86,276ಕ್ಕೆ ಏರಿಕೆಯಾಗಿದ್ರೆ,  ಸಾವಿನ ಸಂಖ್ಯೆ 38,017ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಈವರೆಗೆ 5 ಕೋಟಿ Covid Test..!

ರಾಜ್ಯದಲ್ಲಿ ಇಂದು (ಸೋಮವಾರ) 408 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 29,39,647ಕ್ಕೆ ಏರಿಕೆಯಾಗಿದೆ. ಇನ್ನು 8,583 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇ. 0.32ಕ್ಕೆ ಇಳಿದಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರ 137 ಮಂದಿಗೆ ಸೋಂಕು ದೃಢಪಟ್ಟಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 12,50,844ಕ್ಕೆ ಏರಿಕೆಯಾಗಿದೆ.

ಇನ್ನು ಜಿಲ್ಲಾವಾರು ಸೋಂಕಿನ ಸಂಖ್ಯೆ ನೋಡುವುದರಾದರೆ ಬಾಗಲಕೋಟೆ, ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ದಾವಣಗೆರೆ, ಗದಗ, ಹಾವೇರಿ, ರಾಯಚೂರು, ರಾಮನಗರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಕೇಸ್‌ಗಳಿಲ್ಲ. ಇನ್ನುಳಿದ ಜಿಲ್ಲೆಗಳಲ್ಲಿ ಸಂಖ್ಯೆ ಈ ಕೆಳಗಿನಂತಿದೆ.

ಬೆಳಗಾವಿ 01, ಬೆಂಗಳೂರು ಗ್ರಾಮಾಂತರ 02, ಚಾಮರಾಜನಗರ 02, ಚಿಕ್ಕಮಗಳೂರು 06, ಚಿತ್ರದುರ್ಗ 01, ಧಾರವಾಡ 02, ಕಲಬುರ್ಗಿ 03, ಕೋಲಾರ ಮತ್ತು ಕೊಡಗು 07, ಮಂಡ್ಯ 04, ಶಿವಮೊಗ್ಗ 03, ಉಡುಪಿ 04, ಬೆಂಗಳೂರು 137, ದಕ್ಷಿಣ ಕನ್ನಡ 30, ಹಾಸನ 20, ಮೈಸೂರು 18, ತುಮಕೂರು 26, ಉತ್ತರ ಕನ್ನಡ 15  ಕೇಸ್ ಪತ್ತೆಯಾಗಿವೆ.
 

Follow Us:
Download App:
  • android
  • ios