Corona Update ಕರ್ನಾಟಕದಲ್ಲಿ ಕೊರೋನಾ ಎಷ್ಟಿದೆ? ಇಲ್ಲಿದೆ ಜ.30ರ ಅಂಕಿ-ಸಂಖ್ಯೆ
* ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಸಂಖ್ಯೆಯಲ್ಲಿ ಇಳಿಕೆ
* ಸಾವಿನ ಸಂಖ್ಯೆ ಕೊಂಚ ಏರಿಕೆ
* ಮಾಹಿತಿ ನೀಡಿದ ರಾಜ್ಯ ಆರೋಗ್ಯ ಇಲಾಖೆ
ಬೆಂಗಳೂರು, (ಜ.30): ಕರ್ನಾಟಕದಲ್ಲಿ (Karnataka) ಇಂದು (ಜ.30) ಹೊಸದಾಗಿ 28,264 ಜನರಿಗೆ ಕೊರೋನಾ ಸೋಂಕು (Coronavirus) ತಗುಲಿದ್ದು, 68 ಮಂದಿ ಮೃತಪಟ್ಟಿದ್ದಾರೆ.
ಈ ಮೂಲಕ, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 37,85,295 ಕ್ಕೆ ಏರಿಕೆಯಾಗಿದ್ರೆ, ಈವರೆಗೆ ಸೋಂಕಿನಿಂದ 38,942 ಜನ ಸಾವನ್ನಪ್ಪಿದ್ದಾರೆ.
Covid 3rd Wave: ಕರ್ನಾಟಕದಲ್ಲಿ ಸಕಾಲಿಕ ನಿರ್ಬಂಧದಿಂದ ಸೋಂಕಿನ ತೀವ್ರತೆ ತಗ್ಗಿದೆ: IISC
37,85,295 ಸೋಂಕಿತರ ಪೈಕಿ 34,95,239 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ರಾಜ್ಯದಲ್ಲಿ 2,51,084 ಕೊರೋನಾ ಸಕ್ರಿಯ ಪ್ರಕಟರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 11,938 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದ್ದು, 14 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ, ಬೆಂಗಳೂರಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 17,10,198 ಕ್ಕೆ ಏರಿಕೆಯಾಗಿದೆ. 17,10,198 ಸೋಂಕಿತರ ಪೈಕಿ 15,61,445 ಜನರು ಗುಣಮುಖರಾಗಿದ್ದಾರೆ.
Covid 3rd Wave: ಸೋಂಕಿತರ ಸಾವು ಏರಲು ವಿಳಂಬ ಚಿಕಿತ್ಸೆಯೇ ಕಾರಣ..!
ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ 14 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ನಗರದಲ್ಲಿ ಕೊರೋನಾದಿಂದ ಈವರೆಗೆ 16,581 ಜನರು ಬಲಿಯಾಗಿದ್ದಾರೆ. ಇನ್ನು 1,32,171 ಕೊರೋನಾ ಸಕ್ರಿಯ ಪ್ರಕಟರಣಗಳಿವೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 14 ಮಂದಿ ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 10, ಬಳ್ಳಾರಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7, ಬಾಗಲಕೋಟೆ, ತುಮಕೂರು ಜಿಲ್ಲೆಯಲ್ಲಿ 4, ಚಿತ್ರದುರ್ಗ ಜಿಲ್ಲೆಯಲ್ಲಿ 3, ಬೆಳಗಾವಿ, ಚಾಮರಾಜನಗರ, ಹಾವೇರಿ, ಕಲಬುರಗಿ, ಮಂಡ್ಯ, ರಾಯಚೂರು, ಉತ್ತರ ಕನ್ನಡ ಜಿಲ್ಲೆಯಲ್ಲಿ 2 ಹಾಗೂ ಧಾರವಾಡ, ಗದಗ, ಹಾಸನ, ರಾಮನಗರ, ಶಿವಮೊಗ್ಗ ಜಿಲ್ಲೆಯಲ್ಲಿ 1 ಮಂದಿ ಮೃತಪಟ್ಟಿದ್ದಾರೆ.
ಜಿಲ್ಲಾವಾರು ಕೊರೋನಾ ಕೇಸ್
ಬಾಗಲಕೋಟೆ 338, ಬಳ್ಳಾರಿ 964, ಬೆಳಗಾವಿ 619, ಬೆಂಗಳೂರು ಗ್ರಾಮಾಂತರ 453, ಬೆಂಗಳೂರು ನಗರ 11,938, ಬೀದರ್ 111, ಚಾಮರಾಜನಗರ 554, ಚಿಕ್ಕಬಳ್ಳಾಪುರ 334, ಚಿಕ್ಕಮಗಳೂರು 201, ಚಿತ್ರದುರ್ಗ 360, ದಕ್ಷಿಣ ಕನ್ನಡ 419, ದಾವಣಗೆರೆ 239, ಧಾರವಾಡ 1,356, ಗದಗ 146, ಹಾಸನ 859, ಹಾವೇರಿ 409, ಕಲಬುರಗಿ 564, ಕೊಡಗು 633, ಕೋಲಾರ 422, ಕೊಪ್ಪಳ 321, ಮಂಡ್ಯ 953, ಮೈಸೂರು 2,322, ರಾಯಚೂರು 306, ರಾಮನಗರ 246, ಶಿವಮೊಗ್ಗ 530, ತುಮಕೂರು 1,165, ಉಡುಪಿ 441, ಉತ್ತರ ಕನ್ನಡ 780, ವಿಜಯಪುರ 159, ಯಾದಗಿರಿ ಜಿಲ್ಲೆಯಲ್ಲಿ 122 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.
ರಾಜ್ಯದಲ್ಲಿ(Karnataka) ಕೊರೋನಾ ನಿರ್ಬಂಧಗಳನ್ನು ಸೂಕ್ತ ಸಂದರ್ಭದಲ್ಲಿ ಜಾರಿಗೊಳಿಸಿ ಪರಿಣಾಮ ಸೋಂಕಿನ ತೀವ್ರತೆ ಸಾಕಷ್ಟು ಕಡಿಮೆಯಾಗಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (IISC) ಹಾಗೂ ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆಯ ಅಧ್ಯಯನ ವರದಿ ತಿಳಿಸಿದೆ. ಅಲ್ಲದೆ, ಈಗ ನಿರ್ಬಂಧ ಹಿಂಪಡೆದರೂ ಸಹ ಸೋಂಕು ಪ್ರಮಾಣ ಹೆಚ್ಚಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ತಜ್ಞರಾದ ಅನಿರುದ್ಧ್ ಅಡಿಗ, ಶಿವ ಆತ್ರೇಯ, ರಾಜೇಶ್ ಸುಂದರೇಶನ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ(Bengaluru) ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂ(Weekend and Night Curfew) ಸೇರಿದಂತೆ ಕೊರೋನಾ ನಿರ್ಬಂಧಗಳ(Corona Restrictions) ಪರಿಣಾಮಗಳನ್ನು ಅಧ್ಯಯನ ಮಾಡಲಾಗಿದೆ. ದಕ್ಷಿಣ ಆಫ್ರಿಕಾ(South Africa) ಮತ್ತು ಬೆಂಗಳೂರಿನಲ್ಲಿ ಒಮಿಕ್ರೋನ್(Omicron) ರೂಪಾಂತರಿ ಸೋಂಕಿನ ಪರಿಣಾಮಗಳು ಒಂದೇ ರೀತಿ ಕಂಡು ಬಂದ ಹಿನ್ನೆಲೆ ಈ ಅಧ್ಯಯನವನ್ನು ನಡೆಸಲಾಗಿದೆ.
ಈ ಹಿಂದೆ ಮೂರನೇ ಅಲೆಯ(Covid 3rd Wave) ಆರಂಭದ ದಿನಗಳಲ್ಲಿ, ‘ರಾಜ್ಯದಲ್ಲಿ ಸೋಂಕು ಹೊಸ ಪ್ರಕರಣಗಳು ನಿತ್ಯ ಒಂದು ಲಕ್ಷ ಗಡಿದಾಟಬಹುದು, ಸರ್ಕಾರದ ನಿರ್ಬಂಧಗಳಿಂದ 40-50 ಸಾವಿರದಷ್ಟು ವರದಿಯಾಗಬಹುದು’ ಎಂದು ಐಐಎಸ್ಸಿ ಅಂದಾಜಿಸಿತ್ತು. ಆ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ವಾರದ ದಿನ, ವಾರಾಂತ್ಯದಲ್ಲಿ ಜನರ ಚಲನವಲನ ಅದಕ್ಕೆ ತಕ್ಕಂತೆ ಸೋಂಕಿನ ಏರಿಳಿತ ಕುರಿತು ಕಳೆದ 1 ತಿಂಗಳು ನಿರಂತರ ಅವಲೋಕನ ಮಾಡಿ ವರದಿ ನೀಡಿದೆ.