Asianet Suvarna News Asianet Suvarna News

ಕರ್ನಾಟಕದಲ್ಲಿ ಹೊಸದಾಗಿ 282 ಕೊರೊನಾ ಕೇಸ್,1 ಶಾಲೆ ಸೀಲ್‌ಡೌನ್

* ಕರ್ನಾಟಕದಲ್ಲಿ ಕೊರೋನಾ ಸ್ಥಿತಿಗತಿ
* ಹೊಸದಾಗಿ 282 ಜನರಿಗೆ ಕೊರೋನಾ ಸೋಂಕು 
* ಪಾಸಿಟಿವಿಟಿ ದರ ಶೇಕಡ 0.24
 

282 new Coronavirus Cases and 13 deaths In Karnataka On Oct 27th rbj
Author
Bengaluru, First Published Oct 27, 2021, 9:34 PM IST

ಬೆಂಗಳೂರು, (ಅ.27): ಕರ್ನಾಟಕದಲ್ಲಿ (Karnataka) ಇಂದು (ಅ. 27) ಹೊಸದಾಗಿ 282 ಜನರಿಗೆ ಕೊರೋನಾ ಸೋಂಕು (Coronavirus) ತಗುಲಿರುವುದು ದೃಢಪಟ್ಟಿದ್ದು, 13 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

ಈ ಮೂಲಕ  ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 29,86,835 ಕ್ಕೆ ಏರಿಕೆಯಾಗಿದ್ರೆ, ಸೋಂಕಿತರ ಪೈಕಿ 29,40,339 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಈವರೆಗೆ ರಾಜ್ಯದಲ್ಲಿ  ಕೊರೋನಾದಿಂದ (Corona) ಒಟ್ಟು 38,037 ಜನ ಸಾವನ್ನಪ್ಪಿದ್ದಾರೆ.

ಒಂದೇ ಶಾಲೆಯ 21 ವಿದ್ಯಾರ್ಥಿಗಳಿಗೆ ಸೋಂಕು: ಕರ್ನಾಟಕದಲ್ಲಿ ಮತ್ತೆ ಕೊರೋನಾ ಆತಂಕ

 ರಾಜ್ಯದಲ್ಲಿ 8,430 ಕೊರೋನಾ  ಸಕ್ರಿಯ ಕೇಸ್‌ಗಳಿದ್ದು, ಪಾಸಿಟಿವಿಟಿ ದರ (Activity Case) ಶೇಕಡ 0.24 ರಷ್ಟು ಇದೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರು ವರದಿ (Bengaluru Report)
ಬೆಂಗಳೂರಿನಲ್ಲಿ ಇಂದು (ಬುಧವಾರ) ಒಂದೇ ದಿನ 142 ಜನರಿಗೆ ಕೊವಿಡ್-19 (Covid 19) ಸೋಂಕು ದೃಢಪಟ್ಟಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ.  ಈ ಮೂಲಕ ಬೆಂಗಳೂರಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 12,51,155 ಕ್ಕೆ ಏರಿಕೆಯಾಗಿದೆ. 12,51,155 ಸೋಂಕಿತರ ಪೈಕಿ 12,28,469 ಜನರು ಗುಣಮುಖರಾಗಿದ್ದಾರೆ. ನಗರದಲ್ಲಿ ಕೊರೊನಾದಿಂದ ಈವರೆಗೆ 16,259 ಜನರು ಮೃತಪಟ್ಟಿದ್ದಾರೆ.  ಇನ್ನು ಸಿಲಿಕಾನ್ ಸಿಟಿ ಬೆಂಗಳೂರಲ್ಲಿ 6,426 ಸಕ್ರಿಯ ಪ್ರಕರಣಗಳಿವೆ.

ಯಾವ ಜಿಲ್ಲೆಯಲ್ಲಿ ಎಷ್ಟು ಸಾವು(Deaths)
ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊವಿಡ್19 ಸೋಂಕಿನಿಂದ 6 ಮಂದಿ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿನಿಂದ 3 ಮಂದಿ ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ 2 ಮಂದಿ ಸಾವನ್ನಪ್ಪಿದ್ದಾರೆ. ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕೊರೋನಾದಿಂದ ಒಬ್ಬರು ಮೃತಪಟ್ಟಿದ್ದಾರೆ.

ಜಿಲ್ಲಾವಾರು ಕೊರೋನಾ ಕೇಸ್
ಬಾಗಲಕೋಟೆ 0, ಬಳ್ಳಾರಿ 2, ಬೆಳಗಾವಿ 2, ಬೆಂಗಳೂರು ಗ್ರಾಮಾಂತರ 3, ಬೆಂಗಳೂರು ನಗರ 142, ಬೀದರ್ 0, ಚಾಮರಾಜನಗರ 0, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 4, ಚಿತ್ರದುರ್ಗ 3, ದಕ್ಷಿಣ ಕನ್ನಡ 28, ದಾವಣಗೆರೆ 1, ಧಾರವಾಡ 1, ಗದಗ 0, ಹಾಸನ 18, ಹಾವೇರಿ 0, ಕಲಬುರಗಿ 0, ಕೊಡಗು 31, ಕೋಲಾರ 1, ಕೊಪ್ಪಳ 0, ಮಂಡ್ಯ 5, ಮೈಸೂರು 18, ರಾಯಚೂರು 1, ರಾಮನಗರ 3, ಶಿವಮೊಗ್ಗ 2, ತುಮಕೂರು 9, ಉಡುಪಿ 2, ಉತ್ತರ ಕನ್ನಡ 4, ವಿಜಯಪುರ 0, ಯಾದಗಿರಿ ಜಿಲ್ಲೆಯಲ್ಲಿ 0 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.

31 ಮಕ್ಕಳಿಗೆ ಕೊರೊನಾ ದೃಢ
ಮಡಿಕೇರಿಯ ಗಾಳಿಬೀಡು ಗ್ರಾಮದಲ್ಲಿರುವ ನವೋದಯ ವಿದ್ಯಾಲಯದಲ್ಲಿ ಮತ್ತೆ 10 ಮಕ್ಕಳಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಶಾಲೆಯಲ್ಲಿ ನಿನ್ನೆ 21 ಮಕ್ಕಳಿಗೆ ಕೊರೊನಾ‌ ಸೋಂಕು ದೃಢಪಟ್ಟಿತ್ತು. ಇಂದು (ಅಕ್ಟೋಬರ್ 27) ಮತ್ತೆ 10 ವಿದ್ಯಾರ್ಥಿಗಳಿಗೆ ಕೊವಿಡ್19 ಸೋಂಕು ಖಚಿತವಾಗಿದೆ. ಸೋಂಕಿತ ವಿದ್ಯಾರ್ಥಿಗಳಿಗೆ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕಳೆದ‌ ಕೆಲವು ದಿನಗಳಿಂದ ಕೆಲವು ವಿದ್ಯಾರ್ಥಿಗಳು ಶೀತ ಜ್ವರದಿಂದ‌ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ನವೋದಯ ಶಾಲೆಯ ವಿದ್ಯಾರ್ಥಿಗಳಿಗೆ ಕೊರೊನಾ‌ಟೆಸ್ಟ್ ಮಾಡಿಸಲಾಗಿತ್ತು. ಆರೋಗ್ಯ ಇಲಾಖೆ ಕೊರೊನಾ ಪರೀಕ್ಷೆ ಮಾಡಿಸಿತ್ತು. ಇದರಲ್ಲಿ ಒಟ್ಟು 31 ಮಕ್ಕಳಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಸೋಂಕಿತ ವಿದ್ಯಾರ್ಥಿಗಳಿಗೆ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

70 ವಿದ್ಯಾರ್ಥಿಗಳ ಪೈಕಿ 31 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ವಿದ್ಯಾರ್ಥಿಗಳನ್ನು ಶಾಲೆಯಲ್ಲೇ ಕ್ವಾರಂಟೈನ್​ ಮಾಡಲಾಗಿದೆ. 7 ದಿನಗಳ ಕಾಲ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಲಾಗಿದ್ದು, ಶಾಲೆಯ 40 ಸಿಬ್ಬಂದಿಗೂ ಕೊವಿಡ್ ಟೆಸ್ಟ್ ಮಾಡಲಾಗಿದೆ. ಸದ್ಯಕ್ಕೆ ನವೋದಯ ಶಾಲೆ ಸೀಲ್​ಡೌನ್ ಮಾಡಲಾಗಿದೆ.

Follow Us:
Download App:
  • android
  • ios