* ಕರ್ನಾಟಕದಲ್ಲಿ ಕೊರೋನಾ ಅಂಕಿ-ಸಂಖ್ಯೆ* ಕೊರೋನಾ ಸೋಂಕು ತಗುಲಿದ್ದು,75 ಮಂದಿ ಸಾವು* ಪಾಸಿಟಿವಿ ದರ ಶೇಕಡ 1.64 

ಬೆಂಗಳೂರು, (ಜುಲೈ.07): ರಾಜ್ಯದಲ್ಲಿ ಇಂದು (ಬುಧವಾರ) ಹೊಸದಾಗಿ 2743 ಜನರಿಗೆ ಕೊರೋನಾ ಸೋಂಕು ತಗುಲಿದ್ದು,75 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 28,62,338 ಕ್ಕೆ ಏರಿಕೆಯಾಗಿದ್ರೆ, ಇದುವರೆಗೆ 35,601 ಜನ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆಯೇ ಕರ್ನಾಟಕದಲ್ಲಿ ಕೊರೋನಾ ಏರಿಕೆ: ಹೆಚ್ಚಿದ ಆತಂಕ

ಇವತ್ತು 3081 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 27,87,11 ಜನ ಗುಣಮುಖರಾಗಿದ್ದಾರೆ. ಈ ಮೂಲಕ 39,603 ಸಕ್ರಿಯ ಪ್ರಕರಣಗಳು ಇದ್ದು ಪಾಸಿಟಿವಿ ದರ ಶೇಕಡ 1.64 ರಷ್ಟು ಇದೆ.

ಬೆಂಗಳೂರಿನಲ್ಲಿ ಬುಧವಾರ ಹೊಸದಾಗಿ 611 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 12 ಸೋಂಕಿತರು ಮೃತಪಟ್ಟಿದ್ದಾರೆ. ಇನ್ನು 693 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 14,138 ಸಕ್ರಿಯ ಪ್ರಕರಣಗಳಿವೆ.