ಬೆಂಗಳೂರು, (ಜುಲೈ.13):  ಇಂದು (ಸೋಮವಾರ) ರಾಜ್ಯದಲ್ಲಿ 2,738 ಜನರಿಗೆ ಕೊರೋನಾ ಸೋಂಕು ಹೊಸದಾಗಿ ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 41,581ಕ್ಕೆ ಏರಿಕೆಯಾಗಿದೆ. 

ಅಲ್ಲದೇ ಇಂದು ರಾಜ್ಯದಲ್ಲಿ 73 ಜನರು ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 757ಕ್ಕೆ ಏರಿಕೆಯಾಗಿದೆ.

ಲಾಕ್ ಡೌನ್ ಮಾರ್ಗಸೂಚಿ ರಿಲೀಸ್: ಏನಿರುತ್ತೆ..? ಏನಿರಲ್ಲ? ಇಲ್ಲಿದೆ ಮಾಹಿತಿ

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಒಟ್ಟು 41,581 ಸೋಂಕಿತರ ಸಂಖ್ಯೆಯಲ್ಲಿ 16,248 ಜನ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಸದ್ಯ  24,572 ಸಕ್ರೀಯ ಸೋಂಕಿತರಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಜಿಲ್ಲಾವಾರು ಮಾಹಿತಿ

 ಬೆಂಗಳೂರು ನಗರ 1315, ಯಾದಗಿರಿ 162, ಮೈಸೂರು 151, ದಕ್ಷಿಣ ಕನ್ನಡ 131, ಬಳ್ಳಾರಿ 106, ಕಲಬುರಗಿ 89, ವಿಜಯಪುರ 86, ಶಿವಮೊಗ್ಗ 74, ಧಾರವಾಡ 71, ಉಡುಪಿ 53, ತುಮಕೂರು 48, ರಾಯಚೂರು 45, ದಾವಣಗೆರೆ 45, ಚಿಕ್ಕಬಳ್ಳಾಪುರ 42, ಉತ್ತರ ಕನ್ನಡ 37, ಬಾಗಲಕೋಟೆ 37, ಕೊಪ್ಪಳ 31, ಮಂಡ್ಯ 30, ಕೊಡಗು 29, ಬೆಳಗಾವಿ 27, ಹಾಸನ 25, ಬೀದರ್ 23, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರದಲ್ಲಿ 21, ಚಿಕ್ಕಮಗಳೂರು 10, ಚಾಮರಾಜನಗರ 09, ಚಿತ್ರದುರ್ಗ 08, ಗದಗ 06, ಹಾವೇರಿ 06, ಮತ್ತು ರಾಮನಗರ 0