Covid Crisis: ರಾಜ್ಯದಲ್ಲಿ 268 ಕೇಸ್: ಡಿ.25ರ ಬಳಿಕ ಕನಿಷ್ಠ
ರಾಜ್ಯದಲ್ಲಿ 2 ತಿಂಗಳ ಬಳಿಕ ಕೊರೋನಾ ಸೋಂಕು ಪ್ರಕರಣಗಳು 250ರ ಆಸುಪಾಸಿಗೆ ತಗ್ಗಿದ್ದು, ಏಳು ಜಿಲ್ಲೆಗಳಲ್ಲಿ ಶೂನ್ಯ, 18 ಜಿಲ್ಲೆಗಳಲ್ಲಿ ಬೆರಳೆಣಿಕೆಯ ಪ್ರಕರಣಗಳು ದಾಖಲಾಗಿವೆ. ಸೋಮವಾರ 268 ಮಂದಿಗೆ ಸೋಂಕು ದೃಢಪಟ್ಟಿದ್ದು, 14 ಸೋಂಕಿತರು ಸಾವಿಗೀಡಾಗಿದ್ದಾರೆ.
ಬೆಂಗಳೂರು (ಮಾ.01): ರಾಜ್ಯದಲ್ಲಿ (Karnataka) 2 ತಿಂಗಳ ಬಳಿಕ ಕೊರೋನಾ ಸೋಂಕು ಪ್ರಕರಣಗಳು (Corona Cases) 250ರ ಆಸುಪಾಸಿಗೆ ತಗ್ಗಿದ್ದು, ಏಳು ಜಿಲ್ಲೆಗಳಲ್ಲಿ ಶೂನ್ಯ, 18 ಜಿಲ್ಲೆಗಳಲ್ಲಿ ಬೆರಳೆಣಿಕೆಯ ಪ್ರಕರಣಗಳು ದಾಖಲಾಗಿವೆ. ಸೋಮವಾರ 268 ಮಂದಿಗೆ ಸೋಂಕು ದೃಢಪಟ್ಟಿದ್ದು, 14 ಸೋಂಕಿತರು ಸಾವಿಗೀಡಾಗಿದ್ದಾರೆ (Death). 1,119 ಮಂದಿ ಗುಣಮುಖರಾಗಿದ್ದಾರೆ.
ಸದ್ಯ 5,623 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 38 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇ.0.7 ರಷ್ಟುದಾಖಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ 161 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 63 ಕಡಿಮೆಯಾಗಿವೆ (ಭಾನುವಾರ 224 ಕೇಸ್). ಕಳೆದ ವರ್ಷ ಡಿಸೆಂಬರ್ 25ರಂದು 270 ಪ್ರಕರಣಗಳು ಪತ್ತೆಯಾಗಿದ್ದವು.
ಆ ಬಳಿಕ ಏರಿಕೆಯಾಗುತ್ತಾ ಸಾಗಿ ದೈನಂದಿನ ಪ್ರಕರಣ 50 ಸಾವಿರ ಗಡಿ ದಾಟಿತ್ತು. ಸದ್ಯ ಮೂರು ತಿಂಗಳ ಬಳಿಕ ಮತ್ತೆ 250 ಆಸುಪಾಸಿಗೆ ಕುಸಿದಿವೆ. ಸೋಂಕಿತರ ಸಾವು ಕೂಡ ಎರಡು ದಿನಗಳಿಂದ 15 ಆಸುಪಾಸಿನಲ್ಲಿಯೇ ಇದೆ. ಈವರೆಗಿನ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 39.4 ಲಕ್ಷಕ್ಕೆ, ಗುಣಮುಖರ ಸಂಖ್ಯೆ 38.9 ಲಕ್ಷಕ್ಕೆ, ಸೋಂಕಿತರ ಸಾವಿನ ಸಂಖ್ಯೆ 39,950ಕ್ಕೆ ಏರಿಕೆಯಾಗಿದೆ.
Covid Crisis: 10273 ಕೋವಿಡ್ ಕೇಸು: 3ನೇ ಅಲೆಯಲ್ಲೇ ಕನಿಷ್ಠ
ಎಲ್ಲಿ ಎಷ್ಟು ಪ್ರಕರಣ?: ಬೆಂಗಳೂರು, ದಕ್ಷಿಣ ಕನ್ನಡ (13), ಮೈಸೂರು (11), ತುಮಕೂರು (14), ಶಿವಮೊಗ್ಗ (10) ಜಿಲ್ಲೆಗಳಲ್ಲಿ ಮಾತ್ರ ಎರಡಂಕಿ ಪ್ರಕರಣಗಳು ದಾಖಲಾಗಿವೆ. ಬಾಗಲಕೋಟೆ, ಗದಗ, ಹಾವೇರಿ, ಮಂಡ್ಯ, ರಾಯಚೂರು, ರಾಮನಗರ ಹಾಗೂ ಯಾದಗಿರಿ ಸೇರಿ ಏಳು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ. ಉಳಿದಂತೆ 18 ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟುಮಂದಿಗೆ ಮಾತ್ರ ಸೋಂಕು ತಗುಲಿದೆ. ಬೆಂಗಳೂರಿನವರು 10 ಮಂದಿ, ಮಂಡ್ಯ, ಕೊಪ್ಪಳ, ಹಾಸನ ಹಾಗೂ ಬಳ್ಳಾರಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಈ ಪೈಕಿ ಒಬ್ಬರು 59 ವರ್ಷದವರಿದ್ದು, 12 ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದಾರೆ.
ಕೇವಲ 8,013 ಕೇಸು, 2 ತಿಂಗಳ ಕನಿಷ್ಠ: ದೇಶದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತಷ್ಟುಇಳಿಕೆಯಾಗಿದ್ದು ಬುಧವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 8,013 ಹೊಸ ಪ್ರಕರಣಗಳು ದಾಖಲಾಗಿವೆ. ಇದು ಡಿ.28ರ ನಂತರದ ಕನಿಷ್ಠ ಪ್ರಕರಣ. ಇದೇ ವೇಳೆ, 2 ತಿಂಗಳ ನಂತರ 10,000ಕ್ಕಿಂತ ಕಡಿಮೆ ದೈನಂದಿನ ಕೋವಿಡ್ ಪ್ರಕರಣಗಳು ದಾಖಲಾಗಿವೆ.
ಇದೇ 1 ದಿನದ ಅವಧಿಯಲ್ಲಿ 119 ಸೋಂಕಿತರು ಸಾವಿಗೀಡಾಗಿದ್ದಾರೆ. ಸತತ 22 ದಿನಗಳಿಂದ ದೇಶದಲ್ಲಿ 1 ಲಕ್ಷಕ್ಕೂ ಕಡಿಮೆ ದೈನಂದಿನ ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದು, ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1.02 ಲಕ್ಷಕ್ಕೆ ಕುಸಿದಿದೆ. ದೈನಂದಿನ ಪಾಸಿಟಿವಿಟಿ ದರವು ಶೇ. 1.11ರಷ್ಟಿದೆ. ದೇಶದಲ್ಲಿ ಈವರೆಗೆ 177.50 ಕೋಟಿ ಡೋಸು ಲಸಿಕೆ ವಿತರಿಸಲಾಗಿದೆ.
ನಿರ್ಬಂಧ ಸಡಿಲಕ್ಕೆ ರಾಜ್ಯಗಳಿಗೆ ಕೇಂದ್ರ ಸೂಚನೆ: ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು (Union Home Ministry) ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ರಾತ್ರಿ ಕರ್ಫ್ಯೂ ಸೇರಿದಂತೆ ಸಾಮಾಜಿಕ, ಕ್ರೀಡೆ, ಮನರಂಜನೆ, ಶಿಕ್ಷಣ, ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಎಲ್ಲ ನಿರ್ಬಂಧಗಳನ್ನು ಸಡಿಲಗೊಳಿಸಲು ಸೂಚಿಸಿದೆ.
Covid Crisis: ಕೋವಿಡ್ ತುಸು ಏರಿಕೆ: 628 ಕೇಸ್ ಪತ್ತೆ, 15 ಸಾವು
ಕೇಂದ್ರ ಗೃಹ ಕಾರ್ಯದರ್ಶಿ ಅಜಯ ಭಲ್ಲಾ ‘ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ಸ್ಥಳೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಸಂಚಾರ, ಶಾಂಪಿಗ್ ಕಾಂಪ್ಲೆಕ್ಸ್, ಸಿನಿಮಾ ಮಂದಿರ, ಜಿಮ್, ಸ್ಪಾ, ರೆಸ್ಟೋರೆಂಟ್, ಶಾಲೆ, ಕಾಲೇಜು, ಕಚೇರಿ ಹಾಗೂ ಎಲ್ಲ ಇತರೆ ಆರ್ಥಿಕ ಚಟುವಟಿಕೆಯ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಬೇಕು’ ಎಂದು ಹೊಸ ಕೋವಿಡ್ ಮಾರ್ಗದರ್ಶಿಯಲ್ಲಿ ಸೂಚಿಸಿದ್ದಾರೆ.’
ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಿದ ನಂತರವೂ ಸಾರ್ವಜನಿಕರು ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಮೊದಲಾದ ನಿಯಮಗಳನ್ನು ಪಾಲಿಸಬೇಕು ಎಂದು ಸೂಚಿಸಿದ್ದಾರೆ.