ಬೆಂಗಳೂರು(ಆ.07): ರಾಜಧಾನಿ ಬೆಂಗಳೂರಿನಲ್ಲಿ 20 ದಿನಗಳ ಬಳಿಕ ದಾಖಲೆಯ ಸಂಖ್ಯೆಯ ಹೊಸ ಕೊರೋನಾ ಸೋಂಕಿತರ ಪ್ರಕರಣ ದಾಖಲಾಗಿದೆ. ಜು.16 ರಂದು ಬೆಂಗಳೂರಿನಲ್ಲಿ 2,344 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿರುವುದು ದಾಖಲೆಯಾಗಿತ್ತು. ಅದಾದ ಬಳಿಕ ನಗರದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗಿತ್ತು. ಆದರೆ, ಗುರುವಾರ 2544 ಕೊರೋನಾ ಸೋಂಕಿತರು ಪತ್ತೆಯಾಗಿರುವುದು ಹೊಸ ದಾಖಲೆಯಾಗಿದೆ.

ಗುರುವಾರ ಪತ್ತೆಯಾದ 2,544 ಮಂದಿಯಲ್ಲಿ 1,464 ಮಂದಿ ಪುರುಷರು, 1,079 ಮಂದಿ ಮಹಿಳೆಯರು, ಓರ್ವ ಲೈಂಗಿಕ ಅಲ್ಪಸಂಖ್ಯಾತರಾಗಿದ್ದಾರೆ. ಇದರೊಂದಿಗೆ ಬೆಂಗಳೂರಿನ ಕೊರೋನಾ ಸೋಂಕಿತರ ಸಂಖ್ಯೆ 67,425 ಏರಿಕೆಯಾಗಿದೆ.

ದೇಶದಲ್ಲೀಗ 20 ಲಕ್ಷ ಮಂದಿ ಕೊರೋನಾ ಸೋಂಕಿತರು..!

ಗುರುವಾರ 2,972 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆ, ಆರೈಕೆ ಕೇಂದ್ರ ಮತ್ತು ಹೋಂ ಐಸೋಲೇಷನ್‌ನಿಂದ ಬಿಡುಗಡೆಯಾಗಿದ್ದಾರೆ. ಗುಣಮುಖರ ಸಂಖ್ಯೆ 33,932 ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಗುಣಮುಖರ ಸಂಖ್ಯೆ ಹೆಚ್ಚಳ

ನಗರದಲ್ಲಿ 67,425 ಮಂದಿಗೆ ಈವರೆಗೆ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ 1,178 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 32,314 ಸಕ್ರಿಯ ಸೋಂಕಿತರು, ಆಸ್ಪತ್ರೆ, ಆರೈಕೆ ಕೇಂದ್ರ ಹಾಗೂ ಹೋಂ ಐಸೋಲೇಷನಲ್ಲಿದ್ದಾರೆ. ಸಕ್ರಿಯ ಪ್ರಕರಣಗಳಿಗಿಂತ ಹೆಚ್ಚು 33,932 ಮಂದಿ ಗುಣಮುಖರಾಗಿದ್ದಾರೆ.