Asianet Suvarna News

ಬಾಟಲಿ ನೀರು ಬಳಕೆ: ಕರ್ನಾಟಕ ನಂ.3!

ಬಾಟಲಿ ನೀರು ಬಳಕೆ: ಕರ್ನಾಟಕ ನಂ.3| ನಗರ ಪ್ರದೇಶಗಳಲ್ಲಿ ನಡೆದ ಅಧ್ಯಯನ| ದೇಶದಲ್ಲಿ ಶೇ.12ರಷ್ಟುಮನೆಗಳಲ್ಲಿ ಬಾಟಲಿ ನೀರು ಬಳಕೆ| ಬಾಟಲಿ ನೀರು ಬಳಕೆ 10 ವರ್ಷದಲ್ಲಿ ಶೇ.10 ಅಧಿಕ| ಕರ್ನಾಟಕದ ನಗರಗಳ ಶೇ.21 ಮನೆಗಳಿಗೆ ಬಾಟಲ್‌ ನೀರೇ ಕುಡಿಯಲು ಆಧಾರ

22 percent people of karnataka depended on ROs for drinking water
Author
Bangalore, First Published Nov 30, 2019, 5:01 PM IST
  • Facebook
  • Twitter
  • Whatsapp

ನವದೆಹಲಿ[ನ.30]: ಸರ್ಕಾರ ಪೂರೈಸುವ ನಲ್ಲಿ ನೀರಿನ ಶುದ್ಧತೆ ಬಗ್ಗೆ ನಾನಾ ಸಂದೇಹಗಳು ಉಂಟಾಗಿರುವ ನಡುವೆಯೇ, ನಗರ ಪ್ರದೇಶಗಳಲ್ಲಿ ಬಾಟಲಿ ನೀರು ಬಳಸುವವರ ಸಂಖ್ಯೆ 10 ವರ್ಷದಲ್ಲಿ ಶೇ.10ರಷ್ಟುಹೆಚ್ಚಿದೆ. ದೇಶದ ಶೇ.12.2ರಷ್ಟುನಗರ ಪ್ರದೇಶದ ಮನೆಗಳಲ್ಲಿ ಬಾಟಲಿ ನೀರು ಬಳಕೆಯಾಗುತ್ತಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ ಇತ್ತೀಚಿನ ವರದಿ ಹೇಳಿದೆ.

ಬಸವನಬಾಗೇವಾಡಿಯಲ್ಲಿ ಕುಡಿಯಲು ಶುದ್ಧ ನೀರೇ ಸಿಗ್ತಿಲ್ಲ!

ಇನ್ನು ನಗರಗಳಲ್ಲಿ ಬಾಟಲಿ ನೀರು ಬಳಸುವ ಮನೆಗಳಲ್ಲಿ ಕರ್ನಾಟಕ ದೇಶದಲ್ಲೇ 3ನೇ ಸ್ಥಾನ ಪಡೆದಿದೆ. ಕರ್ನಾಟಕದ ನಗರ ಭಾಗಗಳ ಶೇ.21.3ರಷ್ಟುಮನೆಗಳಲ್ಲಿ ಬಾಟಲ್‌ ನೀರನ್ನು ಬಳಸಲಾಗುತ್ತದೆ. ಮೊದಲ ಎರಡು ಸ್ಥಾನದಲ್ಲಿ ಆಂಧ್ರಪ್ರದೇಶ (ಶೇ.29.8) ಹಾಗೂ ತೆಲಂಗಾಣ (ಶೇ.28.7) ಇವೆ. ಕರ್ನಾಟಕದ ನಂತರದ ಸ್ಥಾನಗಳನ್ನು ಪುದುಚೇರಿ (ಶೇ.20) ಹಾಗೂ ದೆಹಲಿ (ಶೇ.14.1) ಪಡೆದಿವೆ. ಈ ರಾಜ್ಯಗಳಲ್ಲಿ ಬಾಟಲಿ ನೀರು 2ನೇ ಅತಿ ದೊಡ್ಡ ಕುಡಿವ ನೀರಿನ ಮೂಲವಾಗಿದೆ. ಒಟ್ಟಾರೆಯಾಗಿ ನಗರ ಪ್ರದೇಶಗಳ 4ರ ಪೈಕಿ 1 ಮನೆಗಳಲ್ಲಿ ಸೀಲ್‌ ಮಾಡಿದ ಬಾಟಲಿ ನೀರನ್ನೇ ಕುಡಿಯಲು ಉಪಯೋಗಿಸಲಾಗುತ್ತದೆ.

ಸರ್ಕಾರಿ ಬಸ್‌ನಲ್ಲಿ ಉಚಿತ ಕುಡಿಯುವ ನೀರು

ಇದೇ ವೇಳೆ, ಗ್ರಾಮೀಣ ಭಾಗಗಳಲ್ಲಿ ಕೂಡ ಬಾಟಲಿ ನೀರಿನ ಬಳಕೆ ಹೆಚ್ಚಿದೆ. 2008ರಲ್ಲಿ ಕೇವಲ ಶೇ.0.5ರಷ್ಟುಮನೆಗಳಲ್ಲಿ ಬಾಟಲ್‌ ನೀರನ್ನು ಬಳಸಲಾಗುತ್ತಿತ್ತು. 2018ರಲ್ಲಿ ಇದರ ಪ್ರಮಾಣ ಶೇ.4ಕ್ಕೆ ಹೆಚ್ಚಿದೆ ಎಂದು ಸಾಂಖ್ಯಿಕ ಕಚೇರಿ ವರದಿ ಹೇಳಿದೆ.

ಶುದ್ಧೀಕರಣ ಯಂತ್ರಗಳೂ ಅಧಿಕ:

ನಗರ ಭಾಗಗಳಲ್ಲಿ ಶೇ.26.3ರಷ್ಟುಮನೆಗಳಲ್ಲಿ ಜಲ ಶುದ್ಧೀಕರಣ ಯಂತ್ರಗಳನ್ನು ಬಳಸಲಾಗುತ್ತದೆ. ಇದರಲ್ಲಿ ಶೇ.20.8ರಷ್ಟುವಿದ್ಯುತ್‌ ಚಾಲಿತ ಯಂತ್ರಗಳಿದ್ದರೆ ಶೇ.5.5ರಷ್ಟುವಿದ್ಯುತ್‌ ರಹಿತ ಯಂತ್ರಗಳಾಗಿವೆ. ಗ್ರಾಮೀಣ ಭಾಗಗಳ ಶೇ.27.3ರಷ್ಟುಮನೆಗಳಲ್ಲಿ ಇಂತಹ ಯಂತ್ರ ಬಳಸಲಾಗುತ್ತಿದೆ. ಆದರೆ ನಗರಗಳಲ್ಲಿನ ಶೇ.50.9 ಮನೆಗಳಲ್ಲಿ ಯಾವುದೇ ಶುದ್ಧೀಕರಣ ಯಂತ್ರಗಳನ್ನು ಅಥವಾ ವಿಧಾನಗಳನ್ನು ಬಳಸದೇ ನಲ್ಲಿ ನೀರನ್ನು ಹಾಗೆಯೇ ಜನ ಸೇವಿಸುತ್ತಾರೆ. ಇಲೆಕ್ಟ್ರಿಕ್‌ ಪ್ಯೂರಿಫೈರ್‌ ಬಳಕೆಯಲ್ಲಿ ದಿಲ್ಲಿ ನಂ.1 ಸ್ಥಾನದಲ್ಲಿದೆ. ಇಲ್ಲಿ ಶೇ.36.5ರಷ್ಟುಮನೆಗಳಲ್ಲಿ ವಾಟರ್‌ ಪ್ಯೂರಿಫೈರ್‌ ಬಳಸಲಾಗುತ್ತದೆ. ನಂತರದ ಸ್ಥಾನಗಳಲ್ಲಿ ಪಂಜಾಬ್‌ (ಶೇ.35.9), ಉತ್ತರಾಖಂಡ (ಶೇ.21.8) ಹಾಗೂ ಹರ್ಯಾಣಾ (ಶೇ.19) ಇವೆ. ದೇಶದ ಒಟ್ಟಾರೆ 21.11 ಕೋಟಿ ಮನೆಗಳ ಪೈಕಿ 1,06,838 ಮನೆಗಳನ್ನು ಅಧ್ಯಯನ ಮಾಡಿ ಈ ವರದಿ ಸಿದ್ಧಪಡಿಸಲಾಗಿದೆ.

Follow Us:
Download App:
  • android
  • ios