Asianet Suvarna News Asianet Suvarna News

2023ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ: ವಿವರ ಇಲ್ಲಿದೆ..

2ನೇ ಶನಿವಾರ, 4ನೇ ಶನಿವಾರ ಹಾಗೂ ಭಾನುವಾರದ ರಜಾ ದಿನಗಳನ್ನು ಹೊರತುಪಡಿಸಿ 203ರಲ್ಲಿ 19 ಸಾರ್ವತ್ರಿಕ ರಜಾ ದಿನಗಳನ್ನು ರಾಜ್ಯ ಸರ್ಕಾರ ನೀಡಿದೆ. ಈ ಪಟ್ಟಿಯಲ್ಲಿ ಸೇರಿಸಿರುವ ಮುಸಲ್ಮಾನರ ಹಬ್ಬಗಳನ್ನು ನಿಗದಿತ ದಿನಾಂಕಗಳು ಬೀಳದಿದ್ದರೆ ಹಬ್ಬದ ದಿನದಂದೇ ಮುಸಲ್ಮಾನ ಸರ್ಕಾರಿ ಅಧಿಕಾರಿಗೆ ರಜೆ ನೀಡಬೇಕೆಂದೂ ಸೂಚನೆ ನೀಡಲಾಗಿದೆ. 

2023 public holidays list released by karnataka government through notification ash
Author
First Published Nov 21, 2022, 5:14 PM IST

2023ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು (2023 Public Holidays List) ಕರ್ನಾಟಕ ಸರ್ಕಾರ (Karnataka Government) ಬಿಡುಗಡೆ ಮಾಡಿದೆ. ಸಾರ್ವಜನಿಕರ (Public) ಮಾಹಿತಿಗಾಗಿ ರಾಜ್ಯ ಸರ್ಕಾರ (State Government) ಈ ಮಾಹಿತಿಯನ್ನು ಪ್ರಕಟ ಮಾಡಿದೆ. 2ನೇ ಶನಿವಾರ, 4ನೇ ಶನಿವಾರ ಹಾಗೂ ಭಾನುವಾರದ ರಜಾ ದಿನಗಳನ್ನು ಹೊರತುಪಡಿಸಿ 203ರಲ್ಲಿ 19 ಸಾರ್ವತ್ರಿಕ ರಜಾ ದಿನಗಳನ್ನು ರಾಜ್ಯ ಸರ್ಕಾರ ನೀಡಿದೆ. ಈ ರಜಾ ದಿನಗಳಂದು ಸರ್ಕಾರಿ ಕಚೇರಿಗಳು (Government Offices) ಮುಚ್ಚಿರುತ್ತವೆ. ಹಾಗೂ, ಈ ಪಟ್ಟಿಯಲ್ಲಿ ಸೇರಿಸಿರುವ ಮುಸಲ್ಮಾನರ ಹಬ್ಬಗಳನ್ನು (Muslim Festivals) ನಿಗದಿತ ದಿನಾಂಕಗಳು ಬೀಳದಿದ್ದರೆ ಹಬ್ಬದ ದಿನದಂದೇ ಮುಸಲ್ಮಾನ ಸರ್ಕಾರಿ ಅಧಿಕಾರಿಗೆ ರಜೆ ನೀಡಬೇಕೆಂದೂ ಸೂಚನೆ ನೀಡಲಾಗಿದೆ. 

ಹಾಗಾದ್ರೆ, 2023ರ ಸಾರ್ವತ್ರಿಕ ರಜಾ ದಿನಗಳ ವಿವರ ಏನು ಅಂತೀರಾ.. ಇಲ್ಲಿದೆ ನೋಡಿ..

  • ಜನವರಿ 26, ಗುರುವಾರ - ಗಣರಾಜ್ಯೋತ್ಸವ
  • ಫೆಬ್ರವರಿ 18, ಶನಿವಾರ - ಮಹಾಶಿವರಾತ್ರಿ 
  • ಮಾರ್ಚ್‌ 22, ಬುಧವಾರ - ಯುಗಾದಿ ಹಬ್ಬ
  • ಏಪ್ರಿಲ್ 3, ಸೋಮವಾರ - ಮಹಾವೀರ ಜಯಂತಿ
  • ಏಪ್ರಿಲ್ 7, ಶುಕ್ರವಾರ - ಗುಡ್‌ಫ್ರೈಡೇ
  • ಏಪ್ರಿಲ್ 14, ಶುಕ್ರವಾರ - ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿ
  • ಮೇ 1, ಸೋಮವಾರ - ಕಾರ್ಮಿಕರ ದಿನಾಚರಣೆ
  • ಜೂನ್ 29, ಗುರುವಾರ - ಬಕ್ರೀದ್‌
  • ಜುಲೈ 29, ಶನಿವಾರ - ಮೊಹರಂ ಕಡೇ ದಿನ
  • ಆಗಸ್ಟ್‌ 15, ಮಂಗಳವಾರ - ಸ್ವಾತಂತ್ರ್ಯ ದಿನಾಚರಣೆ
  • ಸೆಪ್ಟೆಂಬರ್ 18, ಸೋಮವಾರ - ವರಸಿದ್ಧಿ ವಿನಾಯಕ ವ್ರತ
  • ಸೆಪ್ಟೆಂಬರ್ 28, ಗುರುವಾರ - ಈದ್‌ ಮಿಲಾದ್‌
  • ಅಕ್ಟೋಬರ್ 2, ಸೋಮವಾರ - ಗಾಂಧಿ ಜಯಂತಿ
  • ಅಕ್ಟೋಬರ್ 23, ಸೋಮವಾರ - ಮಹಾನವಮಿ, ಆಯುಧ ಪೂಜೆ
  • ಅಕ್ಟೋಬರ್ 24, ಮಂಗಳವಾರ - ವಿಜಯದಶಮಿ
  • ನವೆಂಬರ್ 1, ಬುಧವಾರ - ಕನ್ನಡ ರಾಜ್ಯೋತ್ಸವ
  • ನವೆಂಬರ್ 14, ಮಂಗಳವಾರ - ಬಲಿಪಾಡ್ಯಮಿ ದೀಪಾವಳಿ
  • ನವೆಂಬರ್ 30, ಗುರುವಾರ - ಕನಕದಾಸ ಜಯಂತಿ
  • ಡಿಸೆಂಬರ್ 25, ಸೋಮವಾರ - ಕ್ರಿಸ್‌ಮಸ್‌ 

ಇದನ್ನು ಓದಿ: Govt Holiday : 2022ರ ಸರ್ಕಾರಿ ರಜೆಗಳ ಪಟ್ಟಿ ಇಲ್ಲಿ

2023 public holidays list released by karnataka government through notification ash

ಇನ್ನು, ಭಾನುವಾರಗಳಂದು ಬರುವ ಹಬ್ಬಗಳನ್ನು ಈ ಸಾರ್ವತ್ರಿಕ ರಜಾ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ. ಈ ಹಬ್ಬಗಳ ವಿವರ ಹೀಗಿದೆ ನೋಡಿ..

  • ಜನವರಿ 15, ಭಾನುವಾರ - ಮಕರ ಸಂಕ್ರಾಂತಿ
  • ಏಪ್ರಿಲ್‌ 23 - ಬಸವ ಜಯಂತಿ / ಅಕ್ಷಯ ತೃತೀಯ  
  • ನವೆಂಬರ್ 12 - ನರಕ ಚತುದರ್ಶಿ 

ಇದೇ ರೀತಿ 2ನೇ ಹಾಗೂ 4ನೇ ಶನಿವಾರಗಳಂದು ಬರುವ ರಜಾ ದಿನಗಳನ್ನು ಸಹ ಈ ಪಟ್ಟಿಯಲ್ಲಿ ನಮೂದಿಸಿಲ್ಲ. ಈ ದಿನಗಳಂದು ಬರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಹೀಗಿದೆ ನೋಡಿ..

  • ಅಕ್ಟೋಬರ್ 14, ಎರಡನೇ ಶನಿವಾರ - ಮಹಾಲಯ ಅಮಾವಾಸ್ಯೆ
  • ಏಪ್ರಿಲ್ 22, ನಾಲ್ಕನೇ ಶನಿವಾರ - ಖುತುಬ್ - ಎ - ರಂಜಾನ್‌
  • ಅಕ್ಟೋಬರ್ 28, ನಾಲ್ಕನೇ ಶನಿವಾರ -  ಮಹರ್ಷಿ ವಾಲ್ಮೀಕಿ ಜಯಂತಿ 

ಇದನ್ನೂ ಓದಿ: Bank Holidays:ನವೆಂಬರ್ ನಲ್ಲಿ 10 ದಿನ ಬ್ಯಾಂಕಿಗೆ ರಜೆ; ಆರ್ ಬಿಐ ರಜಾಪಟ್ಟಿ ಹೀಗಿದೆ ನೋಡಿ

ಮೇಲಿನ ಈ ಎಲ್ಲ ದಿನಗಳಂದು ಸರ್ಕಾರಿ ಕಚೇರಿಗಳು ಮುಚ್ಚಿರುತ್ತವೆ. ಈ ಹಿನ್ನೆಲೆ ಕಚೇರಿಯ ಜರೂರು ಕೆಲಸವನ್ನು ವಲೇವಾರು ಮಾಡುವ ಬಗ್ಗೆ ಇಲಾಖಾವಾರು ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು ಎಂದೂ ಸಹ ರಾಜ್ಯ ಸರ್ಕಾರ ಸೂಚನೆ ನೀಡಿದೆ. 

Follow Us:
Download App:
  • android
  • ios