ಬಾಡಿಗೆ ಮನೆಯಲ್ಲಿರೋರಿಗೆ ಸಿಗುತ್ತಾ 200 ಯುನಿಟ್‌ ಫ್ರೀ ವಿದ್ಯುತ್? ಇಂಧನ ಸಚಿವ ಕೆ.ಜೆ. ಜಾರ್ಜ್‌ ಸ್ಪಷ್ಟನೆ ಹೀಗಿದೆ..

ಒಂದು ಆರ್‌.ಆರ್ ನಂಬರ್‌ನಲ್ಲಿ ಒಂದು ಮೀಟರ್‌ಗೆ ಮಾತ್ರ ಫ್ರೀ ಸ್ಕೀಂ ಅಪ್ಲೈ ಆಗಲಿದೆ ಎಂಬ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಈ ಹಿನ್ನೆಲೆ, 200 ಯುನಿಟ್ ಫ್ರೀ ಸ್ಕೀಮ್ ಬಾಡಿಗೆದಾರರಿಗೆ ಸಿಗೋದಿಲ್ವಾ ಎಂಬ ಅನುಮಾನ ಮೂಡುತ್ತಿದೆ.

200 units free electricity clarification given by karnataka energy minister kj george ash

ಬೆಂಗಳೂರು (ಜೂನ್ 6, 2023): ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಪ್ರತಿ ಮನೆಗೂ 200 ಯೂನಿಟ್‌ ಉಚಿತ ವಿದ್ಯುತ್‌ ನೀಡೋದಾಗಿ ಗ್ಯಾರಂಟಿ ಘೋಷಿಸಿತ್ತು. ಅದರಂತೆ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಯೋಜನೆಯನ್ನು ಜುಲೈನಿಂದ ಜಾರಿ ಗೊಳಿಸುವುದಾಗಿಯೂ ಹೇಳಿದ್ದಾರೆ. ಆಧರೆ, ಜೂನ್ 5 ರಂದು ರಾಜ್ಯ ಸರ್ಕಾರ ಈ ಸಂಬಂಧ ಬಿಡುಗಡೆ ಮಾಡಿರುವ ಮಾರ್ಗಸೂಚಿ ಗೊಂದಲಮಯವಗಿದೆ. ಹಾಗೆ, ಬಾಡಿಗೆ ಮನೆಯಲ್ಲಿರೋರಿಗೆ ಉಚಿತ ವಿದ್ಯುತ್ ಸಿಗೋದಿಲ್ಲ ಎಂಬ ಅನುಮಾನ, ಗೊಂದಲವೂ ಕಾಡುತ್ತಿದೆ. ಈ ಬಗ್ಗೆ ಸುವರ್ಣ ನ್ಯೂಸ್‌ಗೆ ಇಂಧನ ಸಚಿವ ಕೆ.ಜೆ. ಜಾರ್ಜ್‌ ಸ್ಪಷ್ಟನೆ ನೀಡಿದ್ದಾರೆ.

ಒಂದು ಆರ್‌.ಆರ್ ನಂಬರ್‌ನಲ್ಲಿ ಒಂದು ಮೀಟರ್‌ಗೆ ಮಾತ್ರ ಫ್ರೀ ಸ್ಕೀಂ ಅಪ್ಲೈ ಆಗಲಿದೆ ಎಂಬ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಈ ಹಿನ್ನೆಲೆ, 200 ಯುನಿಟ್ ಫ್ರೀ ಸ್ಕೀಮ್ ಬಾಡಿಗೆದಾರರಿಗೆ ಸಿಗೋದಿಲ್ವಾ ಎಂಬ ಅನುಮಾನ ಮೂಡುತ್ತಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ ಇಂಧನ ಸಚಿವರು ಬಾಡಿಗೆ ಮನೆಯವರಿಗೂ ಉಚಿತ ವಿದ್ಯುತ್ ಸಿಗ್ಬೇಕು ಅಂದ್ರೆ ಮನೆ ಮಾಲೀಕರು ದಾಖಲಾತಿ ಕೊಡ್ಬೇಕು ಎಂದು ತಿಳಿಸಿದ್ದಾರೆ.

ಬಾಡಿಗೆ ಮನೆಯವರಿಗಿಲ್ಲ ಉಚಿತ ವಿದ್ಯುತ್‌?: ಗೃಹಜ್ಯೋತಿ ಯೋಜನೆ ಮಾರ್ಗಸೂಚಿ ಪ್ರಕಟ

ಈ ಹಿನ್ನೆಲೆ 200 ಯುನಿಟ್ ಫ್ರೀ ಸ್ಕೀಮ್ ಬಾಡಿಗೆದಾರರಿಗೆ ಮುಂದಿನ ತಿಂಗಳೇ ಸಿಗೋದು ಡೌಟ್ ಆಗಿದೆ. ಒಂದು ಮೀಟರ್ ಒಂದು ಮನೆಗೆ ನಮ್ಮ ಸ್ಕೀಮ್ ಜಾರಿಯಾಗುತ್ತದೆ. ಒಂದು ಮನೆಗೆ ಮೂರು ಮನೆ ಇಟ್ಟುಕೊಂಡ್ರೆ ಅದಕ್ಕೆ ಈ ಸ್ಕೀಮ್ ನೀಡೋದಕ್ಕೆ ಆಗೋದಿಲ್ಲ. ಬಾಡಿಗೆದಾರರಾಗ್ಲೀ‌ ಮನೆ ಮಾಲಿಕರಾಗ್ಲೀ ಇವ್ರು ಬಾಡಿಗೆದಾರರು ಅಂತ ದಾಖಲಾತಿ ನೀಡಬೇಕಾಗುತ್ತೆ. ಅವ್ರು ಬಾಡಿಗದಾರರಾಗಿದ್ದಾರೆ ಅಂತ ಯಾವುದಾದ್ರು ದಾಖಲಾತಿ ಇರಲೇಬೇಕಲ್ಲಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಪ್ರಶ್ನೆಮಾಡಿದ್ದಾರೆ.

ಅಲ್ಲದೆ, ನಮ್ಮ ಸ್ಕೀಮ್ ಒಂದು ಆರ್‌.ಆರ್ ನಂಬರ್‌ಗೆ ಲೆಕ್ಕ. ಎಲ್ಲ ಆರ್ ಆರ್ ನಂಬರ್‌ಗಳು ಸಹ ಮನೆ ಮಾಲಿಕರ ಹೆಸರಲ್ಲೇ ಇರಬಹುದು. ಅಂತಹ ಸಂದರ್ಭದಲ್ಲಿ ಮನೆ ಮಾಲೀಕರು  ಬಾಡಿಗೆದಾರರ ದಾಖಲಾತಿ ನೀಡಬೇಕು ಎಂದಿದ್ದಾರೆ.

ಹಾಗೆ, ನಾವು ಈ ವಿಚಾರದಲ್ಲಿ ಕ್ಲಿಯರ್ ಇದ್ದೇವೆ. ಮನೆ ಮಾಲಿಕರಿಗಾಗ್ಲೀ , ಬಾಡಿಗೆದಾರರಿಗಾಗ್ಲೀ 200 ಯುನಿಟ್ ಫ್ರೀ ಕೊಡ್ತೀವಿ .12 ತಿಂಗಳು ಅಂದಾಜು ತೆಗೆದುಕೊಂಡು ಮೇಲೆ 10% ಗ್ರೇಸ್ ಕೊಡುತ್ತೆವೆ. ಅದನ್ನು ಕಳೆದು ಉಳಿದ ಹಣ ಕಟ್ಟಿದ್ರೆ ಸಾಕು. ಬಾಡಿಗೆದಾರರ ಹೆಸರಿನಲ್ಲಿ ಆರ್ ಆರ್ ನಂಬರ್ ಇರೋದಿಲ್ಲ ನಮಗೂ ಗೊತ್ತಿದೆ.  ಹಾಗಾಗಿ ನಾವು ದಾಖಲಾತಿ ನೀಡಿ ಅಂತ ಹೇಳ್ತಾ ಇದ್ದೇವೆ. ಅರ್ಜಿಯಲ್ಲಿ ನಮಗೆ ದಾಖಲಾತಿ ನೀಡಬೇಕಾಗುತ್ತೆ ಅಷ್ಟೇ.

Gruha Jyothi- ಕಾಂಗ್ರೆಸ್‌ನ ಉಚಿತ ವಿದ್ಯುತ್‌ ಜುಲೈನಿಂದ ಜಾರಿ: ಗೃಹಜ್ಯೋತಿಗೆ 10 ಷರತ್ತುಗಳು ಅನ್ವಯ

ಪ್ರಾಪರ್ಟಿ ಟ್ಯಾಕ್ಸ್ ಡಿಕ್ಲೇರ್ ಮಾಡುವಾಗ ಮಾಲೀಕರು ಸ್ವಂತ ಉಪಯೋಗಕ್ಕೆ ಹಾಗೂ ಬಾಡಿಗೆಗೆ ಎಂದು ಡಿಕ್ಲೇರ್‌ ಮಾಡಿರುತ್ತಾರೆ. ಆ ತರಹದ ಒಂದು ದಾಖಲಾತಿ ಕೊಟ್ರು ಸಾಕು. ಮನೆ ಮಾಲೀಕರು ಸಹ ಈ ದಾಖಲಾತಿಗಳನ್ನು ಕೊಡಬಹುದು. ಫ್ರೀ ಕೊಡುವಾಗ ಯಾವುದಾದ್ರು ಒಂದು ದಾಖಲಾತಿ ಕೊಡಬೇಕಲ್ವ. ಅದಕ್ಕಾಗಿ ನಾವು ಅರ್ಜಿ ಹಾಕಲು ತಿಳಿಸಿದ್ದೇವೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಸ್ಪಷ್ಟನೆ ನೀಡಿದ್ದಾರೆ. 

ಹೆಚ್ಚಾಯಿತು ಇವಿಗೆ ಬೇಡಿಕೆ:
ಯುನಿಟ್ ಗೆ 8 ರೂಪಾಯಿ, 3 ಯುನಿಟ್ ವಿದ್ಯುತ್ ಬಳಸಿ, ಮೂರೂವರೆ ಗಂಟೆ ಚಾರ್ಜ್ ಮಾಡಿದ್ರೆ 280 ಕಿ.ಮೀ ಪ್ರಯಾಣ ಮಾಡ್ಬಹುದದಾದ ವಿದ್ಯುತ್ ವಾಹನಗಳಿಗೆ ಫ್ರೀ ವಿದ್ಯುತ್ ಆಫರ್ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಜನ 200 ಯುನಿಟ್ ವಿದ್ಯುತ್ ಬಳಸಲು ಇವಿ ಬೈಕ್ ಮೊರೆ ಹೋಗುವುದು ಅಧಿಕವಾಗಿದ್ದು, ಎಲ್ಲೆಡೆ ಬುಕ್ಕಿಂಗ್ ಹೆಚ್ಚಾಗಿದೆ. ಬೇಡಿಕೆ ಅನುಗುಣವಾಗಿ ಹೆಚ್ಚು ಬೈಕ್ ಬುಕಿಂಗ್ ಮಾಡಿಕೊಳ್ಳುತ್ತಿದ್ದಾರೆ ಶೋ ರೂಂ ಮಾಲೀಕರು. ಅಲ್ಲದೆ ವೆರೈಟಿ ಕಲರ್ ಇವಿ ಬೈಕ್‌ಗಳಿಗೂ ಹೆಚ್ಚಾಗಿದೆ ಬೇಡಿಕೆ. 

Latest Videos
Follow Us:
Download App:
  • android
  • ios