ರಾಜ್ಯದಲ್ಲಿ ಮೊದಲು ಮೀಸಲಾತಿ ತಂದವರು ನಾಲ್ವಡಿ ಕೃಷ್ಣರಾಜ ಒಡೆಯರ್

  • ದೇವನಹಳ್ಳಿ ಹೊರವಲಯದಲ್ಲಿಂದು ನಡೆಯುತ್ತಿರುವ ಗಾಣಿಗರ ಸಮಾವೇಶ
  • ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ
  • ದೇಶದಲ್ಲಿ ಚತುರ್ವರ್ಣ ವ್ಯವಸ್ಥೆ ಇನ್ನೂ ಇದೆ. ಲಿಂಗಾಯತರು, ವಕ್ಕಲಿಗರು ಕೂಡ ಶೂದ್ರ ಜನಾಂಗಕ್ಕೆ ಸೇರಿದವರೇ 
20 Percent of people  Deprived from education in country says congress Leader siddaramaiah snr

 ದೇವನಹಳ್ಳಿ(ಅ.03):  ದೇಶದಲ್ಲಿ ಚತುರ್ವರ್ಣ ವ್ಯವಸ್ಥೆ ಇನ್ನೂ ಇದೆ. ಲಿಂಗಾಯತರು, ವಕ್ಕಲಿಗರು ಕೂಡ ಶೂದ್ರ ಜನಾಂಗಕ್ಕೆ ಸೇರಿದವರೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದರು.

ದೇವನಹಳ್ಳಿ (Devanahalli) ಹೊರವಲಯದಲ್ಲಿಂದು ನಡೆಯುತ್ತಿರುವ ಗಾಣಿಗರ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ  ಚತುರ್ವರ್ಣ ವ್ಯವಸ್ಥೆ ಇನ್ನೂ ಇದೆ. ಲಿಂಗಾಯತರು, ವಕ್ಕಲಿಗರು ಕೂಡ ಶೂದ್ರ ಜನಾಂಗಕ್ಕೆ ಸೇರಿದವರು.  ದೇಶದಲ್ಲಿ‌ ಇನ್ನೂ ಶೇಕಡಾ 20% ಜನರು ಶಿಕ್ಷಣದಿಂದ (Education) ವಂಚಿತರಾಗಿದ್ದಾರೆ.  ಜಾತಿ ಸಮ್ಮೇಳನಗಳನ್ನು ಮಾಡಬಾರದೆಂದು ಇಂದಿಗೂ ಕೆಲವರು ವಿರೋಧ ಮಾಡುತ್ತಾರೆ. ಲೋಹಿಯಾ ಅವರೇ ಹೇಳಿದ್ದಾರೆ ಎಂದರು.

ಅವಕಾಶಗಳಿಂದ ವಂಚಿತರಾದವರು ಜಾತಿ ಸಮ್ಮೇಳನ ಮಾಡಿದರೆ ತಪ್ಪಲ್ಲ. ಕೆಲವರು ಟೀಕೆ ಮಾಡುತ್ತಾರೆ ಅಂತವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.  ನಮ್ಮ ತಂದೆ ತಾಯಿ ಹೆಬ್ಬೆಟ್ಟಿನವರು ಶಿಕ್ಷಣ ಪಡೆದಿಲ್ಲ.  ನಾನು ಶಿಕ್ಷಣ ಪಡೆದಿದ್ದಕ್ಕೆ ಇವತ್ತು ಈ ಮಟ್ಟಕ್ಕೆ ಬಂದು  ನಿಂತಿದ್ದೇನೆ. ಹಿಂದುಳಿದ ಜಾತಿಗಳು ಅವಕಾಶದಿಂದ ವಂಚಿತರಾಗಿರುವವರು.  ಹಿಂದುಳಿದವರು ಖಂಡಿತವಾಗಿಯು ಸಂಘಟಿತರಾಗಬೇಕು. ಶಿಕ್ಷಣ ಸಂಘಟನೆ ಹೋರಾಟ ಮಾಡದೇ ಇದ್ದರೇ ಯಾರು   ನಿಮ್ಮನ್ನು ‌ಕೇರ್ ಮಾಡಲ್ಲ ಎಂದರು.

'ಅವರಿಬ್ಬರಿಗೂ ಹುಚ್ಚು ಹಿಡಿದಿದೆ : ಕಾಂಗ್ರೆಸ್ ಒಂದು ವರ್ಷದೊಳಗೆ ಎರಡು ಪಾಲಾಗುತ್ತದೆ'

ಕೆಲವು ಪಟ್ಟ ಭದ್ರಾ ಹಿತಾಸಕ್ತಿಗಳು  ಅಂಬೇಡ್ಕರ್ (Ambedkar)  ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಇವರೆಲ್ಲರೂ ಶೋಷಿತರ, ಅವಕಾಶ ವಂಚಿತರ ವಿರೋಧಿಗಳಾಗಿದ್ದಾರೆ.  ಮೀಸಲಾತಿ (Resarvation) ಬಗ್ಗೆ ಬಹಳಷ್ಟು ಮಂದಿ ಟೀಕೆ ಮಾಡುತಿದ್ದರು.  ಆದರೆ ಈಗ ಯಾರು ಕೂಡ ಮೀಸಲಾತಿ ಬಗ್ಗೆ ಮಾತನಾಡುತ್ತಿಲ್ಲ.  ಮೋದಿ ಸರ್ಕಾರ ಮೇಲ್ವರ್ಗದವರಿಗೆ 10% ಕೊಟ್ಟಿದ್ದಾರೆ.  ಯಾರು ಕೂಡ ಮೀಸಲಾತಿ ಯಿಂದ ಹೊರಗುಳಿದಿಲ್ಲ ಎಂದರು. 

ರಾಜ್ಯದಲ್ಲಿ ಮೊದಲ‌ ಬಾರಿಗೆ ಮೀಸಲಾತಿ ಜಾರಿಗೆ ತಂದವರು ಮೈಸೂರಿನ ಆಡಳಿತದ ನಾಲ್ವಡಿ ಕೃಷ್ಣರಾಜ ಒಡೆಯರ್.  ದೇವರಾಜು ಅರಸು ಸಿಎಂ ಆದ ಬಳಿಕ ಹಾವನೂರು ಆಯೋಗ ವರದಿ ಆಧರಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟ್ಟರು.  ಹಿಂದುಳಿದ ವರ್ಗಗಳಿಗೆ ‌ಮೀಸಲಾತಿ ಕೊಟ್ಟವರು ದೇವರಾಜು ಅರಸ್.  ರಾಜೀವ್ ಗಾಂಧಿ ಅವರು 73-74ನೇ ತಿದ್ದುಪಡಿ ಮಾಡಿ ಹಿಂದುಳಿದ ವರ್ಗಗಳಿಗೆ ‌ಮೀಸಲಾತಿ ಕೊಟ್ಟರು. ಈ ಎಲ್ಲಾ ವಿಷಯಗಳ ನ್ನು ನೀವು ತಿಳಿದುಕೊಳ್ಳಬೇಕು ಎಂದರು.
 
ವಿದ್ಯಾಸಿರಿ  ಯೋಜನೆ :  ವಿದ್ಯಾಸಿರಿ ಎಂದು ಹಿಂದುಳಿದ ಜಾತಿಯ ವಿದ್ಯಾರ್ಥಿಗಳಿಗೆ ಯೋಜನೆ ತಂದಿದ್ದೆ. ನನ್ನ ಅವಧಿಯಲ್ಲಿ ಈ ಯೋಜನೆ ಜಾರಿಗೆ ತಂದಿದ್ದೆ.  ಆದರೆ ಈಗ ಆ ಯೋಜನೆಯನ್ನು ‌ಬಿಎಸ್ ವೈ, ಬೊಮ್ಮಾಯಿ ತೆಗೆದುಹಾಕಿದ್ದಾರೆ. ಹಿಂದುಳಿದ ವರ್ಗದ ಯೋಜನೆಗಳೆಂದು ಬಿಜೆಪಿಯವರು (BJP) ತೆಗೆದಿದ್ದಾರೆ.  ಮೇಲಿಂದ ಮೇಲೆ ಬಿಜೆಪಿ ಸರ್ಕಾರ ದಿಂದ ಅನ್ಯಾಯ ಆಗುತ್ತಿದ್ದರೂ ನಮಗೆ ಏನು ಆಗಿಲ್ಲ ಎಂದು ಸುಮ್ಮನೇ ಆಗಿದ್ದಾರೆ ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು. 

ಗೋಡ್ಸೆಯನ್ನು ದೇಶಭಕ್ತ ಎನ್ನುವ ಪಕ್ಷದಿಂದ ಶಾಂತಿ ಉಳಿಯುತ್ತಾ?: ಸಿದ್ದರಾಮಯ್ಯ

ಸಂವಿಧಾನಕ್ಕೆ ಮೊದಲ ತಿದ್ದುಪಡಿ ಆಗಿದ್ದು ಯಾಕೆ ಗೊತ್ತಾ.  ಅಂಬೇಡ್ಕರ್ ಸಂವಿಧಾನದಲ್ಲಿ Sc/St ಗೆ ಮಾತ್ರ ಮೀಸಲಾತಿ ‌ಇತ್ತು. 1950ರಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ‌ನೀಡಬೇಕೆಂದು ತಿದ್ದುಪಡಿ ಮಾಡಲಾಯಿತು. ಆದರೆ  ಬಿಜೆಪಿಯವರು ಮೀಸಲಾತಿ ಯನ್ನು ನೀಡಬಾರದೆಂದು ವಿರೋಧಿಸಿದ್ದರು ಎಂದರು. 
 
ಇನ್ನು ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಇವನ್ಯಾರವ ಇವನ್ಯಾರವ ಎಂಬ ವಚನ ಬೋಧಿಸಿ ಎಲ್ಲರನ್ನು ನಗಿಸಿದ್ದು,  ಜಾತಿ ಸಮೀಕ್ಷೆ ವಿಚಾರವನ್ನೂ ಪ್ರಸ್ತಾಪಿಸಿದರು. 

ಜಾತಿ ಸಮೀಕ್ಷೆ ನಡೆಸಿದ್ದು ಯಾವ ಜಾತಿ ಎಷ್ಟಿದೆ ಎಂದು ತಿಳಿಯಲು. ಜಾತಿ ಸಮೀಕ್ಷೆ ‌ಮಾಡಿದ್ದು‌ ಯಾರ ವಿರುದ್ಧವು ಅಲ್ಲ. ಜಾತಿ ಸಮೀಕರಣ ಸಾಮಾಜಿಕ, ಆರ್ಥಿಕ ಸಮೀಕ್ಷೆ ಅಷ್ಟೆ.  ಜಾತಿ ಸಮೀಕ್ಷೆಯ ವರದಿ ಜೆಡಿಎಸ್ ಹೆಚ್ ಡಿಕೆ, ಬಿಜೆಪಿ ಕೂಡ ನಿರ್ಲಕ್ಷ್ಯ ಮಾಡಿತು. ನನ್ನನ್ನು ಜೆಡಿಎಸ್ ನವರು ತೆಗೆದು ಎಸೆದರು.  ಸೋನಿಯಾಗಾಂಧಿಯವರು ನನ್ನನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡರು ಎಂದರು. 

 ಬಾಷಣ ಮುಗಿಸಿ ಹೊರಟ ಸಿದ್ದರಾಮಯ್ಯ : ಇನ್ನು ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹ ಪಾಲ್ಗೊಂಡಿದ್ದು, ಡಿಕೆಶಿ ಬಾಷಣಕ್ಕೂ ಮೊದಲೆ ಸಿದ್ದರಾಮಯ್ಯ ಕಾರ್ಯಕ್ರಮದಿಂದ ತೆರಳಿದರು.  

Latest Videos
Follow Us:
Download App:
  • android
  • ios