'ಅವರಿಬ್ಬರಿಗೂ ಹುಚ್ಚು ಹಿಡಿದಿದೆ : ಕಾಂಗ್ರೆಸ್ ಒಂದು ವರ್ಷದೊಳಗೆ ಎರಡು ಪಾಲಾಗುತ್ತದೆ'

  •  ಸಿದ್ದರಾಮಯ್ಯ ಅವರಿಗೆ ಹೇಗಾದರೂ ಸರಿ ಸಿಎಂ ಆಗಬೇಕು ಅನ್ನೋ ಹುಚ್ಚು. ಡಿಕೆ ಶಿವಕುಮಾರ್ ಗೆ ಬಿಜೆಪಿಯವರನ್ನ ಹೇಗಾದರೂ ಎಳೆದುಕೊಳ್ಳಬೇಕು ಅನ್ನೋ ಹುಚ್ಚು
  • ಎರಡು ಹುಚ್ಚರನ್ನ ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಸಚಿವ ಕೆಎಸ್ ಈಶ್ವರಪ್ಪ ವಿವಾದಿತ ಹೇಳಿಕೆ
Minister KS Eshwarappa Controversial Statement On Siddaramaiah DK Shivakumar snr

ಮೈಸೂರು (ಅ.03):  ಸಿದ್ದರಾಮಯ್ಯ (Siddaramaiah) ಅವರಿಗೆ ಹೇಗಾದರೂ ಸರಿ ಸಿಎಂ ಆಗಬೇಕು ಅನ್ನೋ ಹುಚ್ಚು. ಡಿಕೆ ಶಿವಕುಮಾರ್ ಗೆ (DK Shivakumar) ಬಿಜೆಪಿಯವರನ್ನ (BJP) ಹೇಗಾದರೂ ಎಳೆದುಕೊಳ್ಳಬೇಕು ಅನ್ನೋ ಹುಚ್ಚು‌. ಈ ಎರಡು ಹುಚ್ಚರನ್ನ ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಸಚಿವ ಕೆಎಸ್ ಈಶ್ವರಪ್ಪ (KS Eshwarappa) ವಿವಾದಿತ ಹೇಳಿಕೆ ನೀಡಿದ್ದಾರೆ. 

"

ಮೈಸೂರು ಭಾಗದಲ್ಲಿ 20ಕ್ಕೂ ಹೆಚ್ಚು ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಮೈಸೂರಿನಲ್ಲಿಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ಡಿಕೆಶಿಗೆ  ಬಿಜೆಪಿಯವರನ್ನು ಸೆಳೆಯುವ ಹುಚ್ಚಾದರೆ ಸಿದ್ದರಾಮಯ್ಯ ಸಿಎಂ ಅಗುವ ಹುಚ್ಚಿದೆ. ಇದಕ್ಕೆ ಬೇರೆ ಏನು ಉತ್ತರ ಇಲ್ಲ ಎಂದು ಈಶ್ವರಪ್ಪ ಹೇಳಿದರು.  

ಮೋದಿ ಕಾಂಗ್ರೆಸ್‌ನಿಂದ ಪ್ರಧಾನಿಯಾಗಿದ್ದರೆ ಹಿಂದುಳಿದ ವರ್ಗದ ನಾಯಕರೆನಿಸಿಕೊಳ್ಳುತ್ತಿದ್ದರು

ಕೆಲವರಿಗೆ ಎಂಎಲ್ಎ (MLA) ಸೀಟ್ ಸಿಗಲಿಲ್ಲ,  ಟಿಕೆಟ್ ಸಿಗಲಿಲ್ಲ ಅನ್ನೋ ಹುಚ್ಚು, ಸಿದ್ದರಾಮಯ್ಯರಿಗೆ ಮುಖ್ಯಮಂತ್ರಿ ಸ್ಥಾನದ ಹುಚ್ಚು ಕನಸು. ಮುಂಬರುವ ಚುನಾವಣೆಯಲ್ಲಿ ಗೆಲ್ಲಲಿ.  ಕಳೆದ ಚುನಾವಣೆಯಲ್ಲಿ ಜನ ಯಾಕ್ ಕೈ ಬಿಟ್ರು ನಿಮ್ಮನ್ನ. ಚಾಮುಂಡೇಶ್ವರಿಲಿ ಯಾಕ್ ಸೋತ್ರಿ..? ಅದನ್ನ ಮೊದಲು ಹೇಳಿ ಆಮೇಲೆ ಕನಸು ಕಾಣಿ ಎಂದು ಸಚಿವ ಈಶ್ವರಪ್ಪ ಹೇಳಿದರು.

"

ಜಾತಿಗಣತಿ ಗಣತಿ ವಿಚಾರ :  ಸಿದ್ದರಾಮಯ್ಯನವರು ಸಂಘಟನೆ ಮಾಡಲು ಅಡ್ಡ ದಾರಿ ತುಳಿದಿದ್ದಾರೆ. ಸದನದಲ್ಲಿ ಜಾತಿಗಣತಿ ಬಗ್ಗೆ ಯಾಕೆ ಮಾತನಾಡಲಿಲ್ಲ. ಸಿದ್ದರಾಮಯ್ಯನವರೇನು ಬಾಯಲ್ಲಿ ಕಡುಬು ಇಟ್ಟುಕೊಂಡಿದ್ದರಾ.  ಸದನದಲ್ಲಿ ಜಾತಿಗಣತಿಯ ಧ್ವನಿ ಮಾಡುತ್ತೇವೆ ಎಂದಿದ್ದಿರಿ, ಅದನ್ನು ಮಾಡಿದಿರಾ..? ಯಾಕೆ ಜಾತಿಗಣತಿ ಬಗ್ಗೆ ಮಾತಡಲಿಲ್ಲ. ಹಿಂದುಳಿದಿರುವ, ಅಲ್ಪಸಂಖ್ಯಾತರು ನಿಮಗೆ ಹೆಸರಿಗೆ ಮಾತ್ರನಾ..?

ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಜಾತಿಗಣತಿ ವರದಿ ಸಿದ್ದವಾಗಿದ್ದರೂ ಕುಮಾರಸ್ವಾಮಿ ಮಂಡಿಸಲಿಲ್ಲ. ಆಗ ನಿಮ್ಮ ಬೆಂಬಲ ವಾಪಸ್ ತೆಗೆದುಕೊಳ್ಳಬೇಕಿತ್ತು. ಯಾಕೆ ತಗೆದುಕೊಳ್ಳಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ  ಈಶ್ವರಪ್ಪ ಪ್ರಶ್ನೆ ಮಾಡಿದರು. ಇವರಿಗೆ ಯಾವುದು ಬೇಕಾಗಿಲ್ಲ. ಅಧಿಕಾರವೊಂದೆ ಇವರ ಗುರಿ. ಮುಂದಿನ ವಿಧಾನ ಸಭೆ ಚುನಾವಣೆಗೆ ಮುಂಚೆನೇ ಕಾಂಗ್ರೆಸ್ ಎರಡು ಹೊಳಾಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಇಮ್ನು ಒಂದೂವರೆ ವರ್ಷ ಕಾಯುವ ಅವಶ್ಯಕತೆ ಇಲ್ಲ. ಡಿ.ಕೆ.ಶಿವಕುಮಾರ್ ‌ಗೂ ಅಧಿಕಾರ ಬೇಕು. ಸಿದ್ದರಾಮಯ್ಯರಿಗೂ ಅಧಿಕಾರ ಬೇಕು. ಇದರಿಂದ ಕಾಂಗ್ರೆಸ್ ಎರಡೂ ಹೊಳಾಗುತ್ತದೆ ಎಂದು ಮೈಸೂರಿನಲ್ಲಿ ಭವಿಷ್ಯ ನುಡಿದ ಸಚಿವ ಈಶ್ವರಪ್ಪ.

Latest Videos
Follow Us:
Download App:
  • android
  • ios