*   8 ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನ: ಸೋಮಣ್ಣ ಸೂಚನೆ*   56 ರೈಲ್ವೆ ಸೇತುವೆಗಳ ನಿರ್ಮಾಣ ಈ ವರ್ಷವೇ ಪೂರ್ಣ*   ಆರ್‌ಒಬಿ, ಆರ್‌ಯುಬಿ ಮಾರ್ಚ್‌ ಒಳಗೆ ಪೂರ್ಣ 

ಬೆಂಗಳೂರು(ನ.11):  ರಾಜ್ಯದಲ್ಲಿ(Karnataka) ಹಲವು ವರ್ಷಗಳಿಂದ ಎಂಟು ರೈಲ್ವೆ ಯೋಜನೆಗಳ(Railway Projects) ಅನುಷ್ಠಾನ ಆಮೆಗತಿಯಲ್ಲಿ ಸಾಗುತ್ತಿದ್ದು, ಪರಿಣಾಮ ಯೋಜನೆಗಳ ಅಂದಾಜು ವೆಚ್ಚ ಎರಡು-ಮೂರು ಪಟ್ಟು ಹೆಚ್ಚಾಗಿದೆ. ಹೀಗಾಗಿ ಮುಂದಿನ 20 ದಿನದಲ್ಲಿ ಭೂಸ್ವಾಧೀನ(Land Acquisition) ಸೇರಿದಂತೆ ಅಗತ್ಯ ಅಡೆತಡೆ ನಿವಾರಿಸಿ ಸುಗಮವಾಗಿ ಕಾಮಗಾರಿ ನಡೆಯುವಂತೆ ಅನುವು ಮಾಡಲು ಸೂಚಿಸಲಾಗಿದೆ ಎಂದು ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ(V Somanna) ಹೇಳಿದ್ದಾರೆ.

ಇದೇ ವೇಳೆ ಹಲವು ವರ್ಷದಿಂದ ನೆನೆಗುದಿಗೆಗೆ ಬಿದ್ದಿರುವ 56 ರೈಲ್ವೆ ಮೇಲು ಸೇತುವೆ ಹಾಗೂ ಕೆಳ ಸೇತುವೆ ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲೇ (2021-22) ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ.
ವಿಧಾನಸೌಧದಲ್ಲಿ(Vidhanasoudha) ಬುಧವಾರ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2007ರಿಂದ ಗಿಣಿಗೇರಾ- ರಾಯಚೂರು(Ginigera-Raichur) ರೈಲ್ವೆ ಮಾರ್ಗದ ಯೋಜನೆ ಬಾಕಿ ಉಳಿದಿದೆ. ಹಲವು ವರ್ಷಗಳಿಂದ ಒಟ್ಟು ಎಂಟು ರೈಲ್ವೆ ಯೋಜನೆಗಳ ಅನುಷ್ಠಾನ ನೆನೆಗುದಿಗೆಗೆ ಬಿದ್ದಿದೆ. ಹೀಗಾಗಿ ರೈಲ್ವೆ ಇಲಾಖೆ ಅಧಿಕಾರಿಗಳು, ‘ಕೆ- ರೈಡ್‌’ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತ್ವರಿತವಾಗಿ ಯೋಜನೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದರು.

ಡಿಸೆಂಬರ್ 6ರಂದು ಅಯೋಧ್ಯೆ ಸೇರಿ ಅನೇಕ ಸ್ಥಳ ಸ್ಫೋಟಿಸುವ ಬೆದರಿಕೆ!

ಯೋಜನೆಯ ಅನುಷ್ಠಾನ ವಿಳಂಬದಿಂದ ಕೆಲ ಯೋಜನಾ ವೆಚ್ಚ ದುಪ್ಪಟ್ಟಾಗಿದೆ. ಜತೆಗೆ ಇತರೆ ಅಡೆತಡೆಗಳು ಎದುರಾಗಿವೆ. ಹೀಗಾಗಿ 20 ದಿನದಲ್ಲಿ ಅಡೆತಡೆ ನಿವಾರಿಸಲು ಪ್ರಯತ್ನಿಸಲಾಗುವುದು. ಜತೆಗೆ ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುವುದು ಎಂದು ಹೇಳಿದರು.

ಆರ್‌ಒಬಿ, ಆರ್‌ಯುಬಿ ಮಾರ್ಚ್‌ ಒಳಗೆ ಪೂರ್ಣ:

ಬೆಂಗಳೂರು(Bengaluru) ಸೇರಿದಂತೆ ರಾಜ್ಯದ ವಿವಿಧ ಕಡೆ 56 ರೈಲ್ವೆ ಮೇಲುಸೇತುವೆ (RRB) ಹಾಗೂ ಕೆಳ ಸೇತುವೆ (RUB) ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಯೋಜನೆ ವಿಳಂಬ ಎಲ್ಲರಿಗೂ ಬೇಸರ ಮೂಡಿಸಿದೆ. ಜತೆಗೆ ಯೋಜನಾ ವೆಚ್ಚವೂ ಹೆಚ್ಚಾಗುತ್ತಿದೆ. ಹೀಗಾಗಿ ಮಾರ್ಚ್‌ ಒಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಉಳಿದಂತೆ ಶಿವಮೊಗ್ಗ(Shivamogga), ವಿಜಯಪುರ(Vijayapura) ಸೇರಿದಂತೆ ಇತರೆಡೆ ವಿಮಾನ ನಿಲ್ದಾಣ(Airport) ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಕಾರವಾರದಲ್ಲಿ(Karwar) ಸೀಬರ್ಡ್‌(Seabird) ಎನ್‌ಕ್ಲೇವ್‌ ನಿರ್ಮಾಣ ಕಾರ್ಯವನ್ನು ಶೀಘ್ರವೇ ಆರಂಭಿಸಲಾಗುವುದು. ಜತೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದೆ ಎಂದು ಹೇಳಿದರು.

ಬೆಳ್ಳಂ ಬೆಳ್ಳಗ್ಗೆ ರೈಲುಗಳಲ್ಲಿ ಪೊಲೀಸರ ದಿಢೀರ್‌ ಗಸ್ತು..!

ರೈಲ್ವೆ ಯೋಜನೆಗಳ ವಿವರ (ಕೋಟಿ ರು.ಗಳಲ್ಲಿ)

ಯೋಜನೆ ಆರಂಭಿಕ ಅಂದಾಜು ವೆಚ್ಚ ಪರಿಷ್ಕೃತ ಅಂದಾಜು ವೆಚ್ಚ

ಮುನಿರಾಬಾದ್‌- ಮೆಹಬೂಬನಗರ (ಗಿಣಿಗೇರ- ರಾಯಚೂರು) 1350.91 2565.09
ತುಮಕೂರು- ರಾಯದುರ್ಗ 479.59 2432.51
ಕುಡಚಿ- ಬಾಗಲಕೋಟೆ 816.14 1525
ತುಮಕೂರು- ಚಿತ್ರದುರ್ಗ- ದಾವಣಗೆರೆ 1801 2161.37

ಆನ್‌ಲೈನ್ ವಂಚನೆ ನಿಯಂತ್ರಿಸಲು ಭಾರತೀಯ ರೈಲ್ವೇಗೆ ಟ್ರೂಕಾಲರ್ ಸಹಯೋಗ!

ಭಾರತೀಯ ರೈಲ್ವೇ(Indian railway) ಮತ್ತಷ್ಟು ಡಿಜಲೀಟಕರಣವಾಗುತ್ತಿದೆ. ಇದರ ಜೊತೆಗೆ ಗ್ರಾಹಕರ ಸುರಕ್ಷತೆಗೆ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ. ಏಕೀಕೃತ ನ್ಯಾಷನಲ್ ರೈಲ್ವೇಸ್ ಹೆಲ್ಪ್‍ಲೈನ್ 139 ಸಂಖ್ಯೆಯನ್ನು ಲಕ್ಷಾಂತರ ಮಂದಿ ಭಾರತೀಯರು ಪ್ರತಿನಿತ್ಯ ಬಳಸುತ್ತಿದ್ದು ಈಗ ಟ್ರೂಕಾಲರ್ ಬ್ಯುಸಿನೆಸ್ ಐಡೆಂಟಿಟಿ ಪರಿಹಾರಗಳ ಭಾಗವಾಗಿದೆ. ಇದರೊಂದಿಗೆ ಪರಿಶೀಲಿಸಲಾದ ಎಸ್‍ಎಂಎಸ್(SMS) ಮೆಸೇಜ್ ಹೆಡರ್‌ಗಳು, ಗ್ರಾಹಕರಿಗೆ ಅವರ ಬುಕಿಂಗ್‍ಗಳು(Booking) ಮತ್ತು ಇತರೆ ಪ್ರಯಾಣದ ವಿವರಗಳು IRTCಯಿಂದ ಮಾತ್ರ ಪಡೆಯುತ್ತಿರುವುದನ್ನು ತಿಳಿಸುತ್ತವೆ. ಆದ್ದರಿಂದ ಪರಿಶೀಲಿಸಿದ ಗುರುತು ಭಾರತದ ರೈಲ್ವೆಯ ಬ್ರಾಂಡ್ ಹೆಸರನ್ನು ಲಾಕ್ ಮಾಡುತ್ತದೆ ಮತ್ತು ಟ್ರೂಕಾಲರ್ ಪ್ರೊಫೈಲ್ ಫೋಟೋದಲ್ಲಿ ಬರುವ ಮೂಲಕ ಸುರಕ್ಷಿತ ಗ್ರಾಹಕ ಅನುಭವ ನೀಡುತ್ತದೆ ಮತ್ತು ವಂಚನೆಗಳ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.