*   ಕಳ್ಳತನ, ಪ್ರಯಾಣಿಕರ ಜತೆ ಅನುಚಿತ ವರ್ತನೆ ದೂರು*   ರೈಲ್ವೆ ಪೊಲೀಸ್‌ ಎಸ್ಪಿ ಸಿರಿಗೌರಿ ನೇತೃತ್ವದಲ್ಲಿ ಪರಿಶೀಲನೆ*   ಪ್ರಯಾಣದ ವೇಳೆ ಎಚ್ಚರ ವಹಿಸುವಂತೆ ಜಾಗೃತಿ 

ಬೆಂಗಳೂರು(ನ.02): ಕಳ್ಳಕಾಕರ ಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ನಗರದ(Bengaluru) ಕ್ರಾಂತಿವೀರ ಸಂಗೊಳ್ಳಿ ರೈಲ್ವೆ ನಿಲ್ದಾಣದಿಂದ(Railway Station) ಸೋಮವಾರ ಮುಂಜಾನೆ ಪ್ರಯಾಣ ಬೆಳೆಸಿದ ಎಲ್ಲ ರೈಲುಗಳಲ್ಲಿ ಪೊಲೀಸರು ದಿಢೀರ್‌ ತಪಾಸಣೆ ನಡೆಸಿದರು.

ಇತ್ತೀಚಿಗೆ ರೈಲುಗಳಲ್ಲಿ(Train) ಕಳ್ಳತನ(Theft) ಹಾಗೂ ಪ್ರಯಾಣಿಕರ(Passengers) ಜತೆ ಅನುಚಿತ ವರ್ತನೆಗಳ ಬಗ್ಗೆ ದೂರುಗಳ(Complaint) ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸ್‌ ವರಿಷ್ಠಾಧಿಕಾರಿ ಸಿರಿಗೌರಿ, ಮುಂಜಾನೆ ವೇಳೆ ಸಂಚರಿಸುವ ರೈಲುಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದರು. ನಸುಕಿನ 3 ಗಂಟೆಗೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಎಸ್ಪಿ ಸಿರಿಗೌರಿ, ನಗರದಿಂದ ಹೊರಟ ಎಲ್ಲ ರೈಲುಗಳಲ್ಲಿ ದಿಢೀರ್‌ ಪರಿಶೀಲನೆ ನಡೆಸಿ ಪ್ರಯಾಣಿಕರಿಗೆ ಸುರಕ್ಷತೆ ಪಾಠ ಹೇಳಿದರು.

ರೈಲಿನಲ್ಲಿ ಪ್ರಯಾಣಿಸುವಾಗ ಅಪರಿಚಿತರ ಬಗ್ಗೆ ಜಾಗೃತೆ ಇರಬೇಕು. ಅಪರಿಚಿತ ವ್ಯಕ್ತಿಗಳಿಂದ ತಿಂಡಿ-ತಿನಿಸು ಸ್ವೀಕರಿಸಬಾರದು ಹಾಗೂ ಒಡವೆ ಧರಿಸಿ ಕಿಟಕಿ ಪಕ್ಕದಲ್ಲಿ ಕುಳಿತುಕೊಳ್ಳದಂತೆ ಜನರಿಗೆ ಪೊಲೀಸರು(Police) ತಿಳುವಳಿಕೆ ಮೂಡಿಸಿದರು. ನಿದ್ರೆ ಮಾಡುವಾಗ ಮೊಬೈಲ್‌(Mobile) ಅನ್ನು ಚಾರ್ಜಿಂಗ್‌ ಹಾಕದಂತೆ ಸೂಚಿಸಿದರು.

ಪೋಕರಿಗಳ ವಿರುದ್ಧ ರೈಲ್ವೆ ಪೊಲೀಸ್ ಸಮರ, ಬೈಕ್ ನಲ್ಲಿ ಬರ್ತಾರೆ

ವೃದ್ಧನ ರಕ್ಷಣೆ:

ಮಹಾರಾಷ್ಟ್ರದ(Maharashtra) ಲಾತೂರ್‌ನಿಂದ ನಗರಕ್ಕೆ ರೈಲಿನಲ್ಲಿ ಬರುವಾಗ ಮಾರ್ಗ ಮಧ್ಯೆ ದಿಢೀರ್‌ ನಾಪತ್ತೆಯಾಗಿದ್ದ 84 ವರ್ಷದ ವೃದ್ಧರೊಬ್ಬರನ್ನು ರೈಲ್ವೆ ಪೊಲೀಸರು(Railwayt Police) ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿ ಕುಟುಂಬದವರಿಗೆ ಒಪ್ಪಿಸಿದ್ದಾರೆ.

ಅ.30 ರಾತ್ರಿ ಖಾಸಗಿ ಕಂಪನಿ ಮಹೇಶ ಮೂಳೆ, ತಮ್ಮ ತಂದೆ ರಾಮಚಂದ್ರ ಗಡಿಕಾರ (84) ಅವರೊಂದಿಗೆ ಲಾತೂರುನಿಂದ ಯಶವಂತಪುರಕ್ಕೆ ರೈಲಿನಲ್ಲಿ ಬರುತ್ತಿದ್ದರು. ಆದರೆ ರಾತ್ರಿ 1 ಗಂಟೆ ಸಮಯದಲ್ಲಿ ಮಹೇಶ್‌ ಅವರ ನಿದ್ರೆಯಿಂದ ಎಚ್ಚರಗೊಂಡು ನೋಡಿದಾಗ ಅವರ ತಂದೆ ರೈಲಿನಲ್ಲಿ ಕಾಣದೆ ಕಂಗಲಾಗಿದ್ದರು. ಈ ಬಗ್ಗೆ ರೈಲ್ವೆ ಪೊಲೀಸ್‌ ನಿಯಂತ್ರಣ ಕೊಠಡಿಗೆ(Police Control Room) ಅವರು ದೂರು ನೀಡಿದರು. ಈ ಕರೆಗೆ ಸ್ಪಂದಿಸಿದ ಪೊಲೀಸರು, ಕಣ್ಮರೆಯಾದ ರಾಮಚಂದ್ರ ಅವರ ಭಾವಚಿತ್ರವನ್ನು ಕೂಡಲೇ ವಾಟ್ಸಾಪ್‌(WhatsApp) ಮೂಲಕ ರಾಜ್ಯದ(Karnataka) ಎಲ್ಲ ರೈಲ್ವೆ ಠಾಣೆಗಳಿಗೆ ರವಾನಿಸಿದರು. ಈ ಮಾಹಿತಿ ಮೇರೆಗೆ ಪತ್ತೆದಾರಿಕೆ ಆರಂಭಿಸಿದ ರಾಯಚೂರು ರೈಲ್ವೆ ಠಾಣೆ ಸಿಪಿಐ ಎನ್‌.ಎಸ್‌.ಜನಗೌಡ ಅವರು, ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ರಾಮಚಂದ್ರ ಅವರನ್ನು ಪತ್ತೆ ಮಾಡಿ ಸಂಬಂಧಿ ಗೋಪಾಲ ಉದ್ದಾರ ಅವರಿಗೆ ಒಪ್ಪಿಸಿದ್ದಾರೆ.

ವಾರಸುದಾರರಿಗೆ ಲ್ಯಾಪ್‌ಟಾಪ್‌ ವಾಪಾಸ್‌:

ಕೆಂಗೇರಿ ರೈಲ್ವೆ ನಿಲ್ದಾಣದ ಫ್ಲ್ಯಾಟ್‌ ಫಾರಂನಲ್ಲಿ ಮರೆತು ಬಿಟ್ಟು ಹೋಗಿದ್ದ ಲ್ಯಾಪ್‌ಟಾಪ್‌(Laptop) ಹಾಗೂ ದಾಖಲೆಗಳನ್ನು ವಾರುಸುದಾರರ ಪತ್ತೆ ಹಚ್ಚಿ ಪೊಲೀಸರು ಮರಳಿಸಿದ್ದಾರೆ. ಕೆಂಗೇರಿಯಿಂದ ಭಾನುವಾರ ಬೆಳಗ್ಗೆ ತಾಳಗುಪ್ಪ ಎಕ್ಸ್‌ಪ್ರೆಸ್‌ ರೈಲು ತೆರಳಿದ ಬಳಿಕ ಫ್ಲ್ಯಾಟ್‌ ಫಾರಂನ ಕಲ್ಲು ಬೆಂಚ್‌ನ ಮೇಲೆ ಮರೆತು ಬಿಟ್ಟು ಹೋಗಿದ್ದ ಲ್ಯಾಪ್‌ಟಾಪ್‌ ಅನ್ನು ಗಸ್ತಿನಲ್ಲಿದ್ದ ಪೊಲೀಸರು ನೋಡಿದ್ದಾರೆ. ಕೂಡಲೇ ಬ್ಯಾಗ್‌ ವಶಕ್ಕೆ ಪಡೆದು, ಅದರಲ್ಲಿದ್ದ ಮೊಬೈಲ್‌ ಸಂಖ್ಯೆ ಮೂಲಕ ವಾರಸುದಾರ ವಿಷ್ಣು ಅವರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಕರೆ ಮೇರೆಗೆ ಠಾಣೆಗೆ ಬಂದ ವಿಷ್ಣುಗೆ ಹೆಡ್‌ ಕಾನ್‌ಸ್ಟೇಬಲ್‌ ಚಿಕ್ಕಹನುಮೇಗೌಡ ಹಾಗೂ ಗೃಹ ರಕ್ಷಕ ಪ್ರಸನ್ನ ಬ್ಯಾಗ್‌ ಮರಳಿಸಿದ್ದಾರೆ..

ಸಮಸ್ಯೆಯಾದರೆ ಕರೆ ಮಾಡಿ

ರೈಲು ಪ್ರಯಾಣದ ಸಂದರ್ಭದಲ್ಲಿ ಸಮಸ್ಯೆಯಾದರೆ ತಕ್ಷಣವೇ ಮೊ.948080-2140, 080-22942666 ಗೆ ಕರೆ ಮಾಡಿದರೆ ತುರ್ತು ಸ್ಪಂದನೆ ಸಿಗಲಿದೆ. ಅಲ್ಲದೆ, ಟ್ವಿಟರ್‌(Twitter) @KARrailwayPolice ಖಾತೆಗೆ ಸಂಪರ್ಕಿಸುವಂತೆ ಸಾರ್ವಜನಿಕರಿಗೆ ರೈಲ್ವೆ ಎಸ್ಪಿ ಸಿರಿಗೌರಿ ಮನವಿ ಮಾಡಿದ್ದಾರೆ.