ಭಾರತೀಯ ರಿಸವ್‌ರ್‍ ಬ್ಯಾಂಕ್‌ .2 ಸಾವಿರ ಮುಖಬೆಲೆಯ ನೋಟು ಹಿಂಪಡೆಯುವ ಆದೇಶದ ಬಳಿಕ ಮಾರುಕಟ್ಟೆಯಲ್ಲಿ ಚಲಾವಣೆ ಕಂಡುಬಂದಿದೆ. ಈವರೆಗೆ ತಮ್ಮ ಬಳಿ ಈ ನೋಟು ಹೊಂದಿದ್ದವರು ಇದೀಗ ವಹಿವಾಟಿನ ವೇಳೆ ಬೇರೆಯವರಿಗೆ ನೀಡುತ್ತಿರುವುದು ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ.

ಬೆಂಗಳೂರು (ಮೇ.23) : ಭಾರತೀಯ ರಿಸವ್‌ರ್‍ ಬ್ಯಾಂಕ್‌ .2 ಸಾವಿರ ಮುಖಬೆಲೆಯ ನೋಟು ಹಿಂಪಡೆಯುವ ಆದೇಶದ ಬಳಿಕ ಮಾರುಕಟ್ಟೆಯಲ್ಲಿ ಚಲಾವಣೆ ಕಂಡುಬಂದಿದೆ. ಈವರೆಗೆ ತಮ್ಮ ಬಳಿ ಈ ನೋಟು ಹೊಂದಿದ್ದವರು ಇದೀಗ ವಹಿವಾಟಿನ ವೇಳೆ ಬೇರೆಯವರಿಗೆ ನೀಡುತ್ತಿರುವುದು ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ.

ಇಷ್ಟುದಿನ ಮಾರುಕಟ್ಟೆಯಲ್ಲಿ ವಿರಳವಾಗಿದ್ದ .2 ಸಾವಿರ ನೋಟು ಈಗ ಬೆಳಕಿಗೆ ಬರುತ್ತಿವೆ. ಸೆ.30ರವರೆಗೆ ಬ್ಯಾಂಕ್‌ಗೆ ಹೋಗಿ ನೋಟು ಬದಲಿಸಿಕೊಳ್ಳಲು ಅವಕಾಶವಿದ್ದರೂ ಆ ಹೊಣೆಯಿಂದ ತಪ್ಪಿಸಿಕೊಳ್ಳಲು ಹಲವರು ವರ್ತಕರಿಗೆ ನೀಡುತ್ತಿದ್ದಾರೆ. ನಗರದ ಪ್ರತಿಷ್ಠಿತ ಹೊಟೆಲ್‌ಗಳು, ಪೆಟ್ರೋಲ್‌ ಬಂಕ್‌, ಆನ್‌ಲೈನ್‌ ಡಿಲಿವರಿ ನೀಡುವವರಿಗೆ ಜನತೆ ಈ ನೋಟನ್ನು ನೀಡುತ್ತಿದ್ದಾರೆ.

Viral news: ₹2000 ನೋಟು ಬ್ಯಾನ್ ಆದ್ರೂ ಕಾಫಿನಾಡು ಯುವಕನ ಬಾಳಲ್ಲಿ ಎವರ್‌ಗ್ರೀನ್!

ಕಳೆದ ಎರಡು ದಿನಗಳಿಂದ ಈ ನೋಟುಗಳು ಹೆಚ್ಚೆಚ್ಚು ಚಲಾವಣೆ ಆಗುತ್ತಿರುವುದು ವರ್ತಕರಿಗೆ ತಲೆನೋವು ತರಿಸಿದೆ. ಅಲ್ಲದೆ, ಮಾರುಕಟ್ಟೆಯಲ್ಲಿ ಹಲವರು ಈ ನೋಟನ್ನು ಸ್ವೀಕರಿಸಲು ನಿರಾಕರಿಸುತ್ತಿರುವುದು ಕಂಡುಬಂದಿದೆ. ಒಂದು ಕಡೆ .2 ಸಾವಿರ ನೋಟು ತೆಗೆದುಕೊಳ್ಳಲ್ಲ ಎನ್ನಲೂ ಆಗುತ್ತಿಲ್ಲ. ತೆಗೆದು ಕೊಂಡರೆ ಬ್ಯಾಂಕ್‌ಗೆ ತೆರಳಿ ಬದಲಿಸಿಕೊಳ್ಳುವ ಹೆಚ್ಚುವರಿ ಕೆಲಸ ನಿಭಾಯಿಸಬೇಕಿದೆ.

ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಬರುವ ಗ್ರಾಹಕರು ಊಟ, ತಿಂಡಿ ಸೇವನೆ ಬಳಿಕ .2 ಸಾವಿರ ನೀಡುತ್ತಿದ್ದಾರೆ. ನಾವು ತಿರಸ್ಕರಿಸುತ್ತಿಲ್ಲ. ಆದರೆ, ಎಂದಿಗಿಂತ ಈಗ ಇದರ ಚಲಾವಣೆ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಅನಿವಾರ್ಯವಾಗಿ ನಾವು ಸ್ವೀಕಾರ ಮಾಡುತ್ತಿದ್ದೇವೆ ನಗರದ ಎಂದು ಹೋಟೆಲ್‌ ವರ್ತಕರು ತಿಳಿಸಿದರು.

ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾಬಿ.ರಾಮಾಚಾರಿ ಮಾತನಾಡಿ, ನಂಬಲರ್ಹ ಗ್ರಾಹಕರು ಹಾಗೂ ನಿರಂತರ ವಹಿವಾಟು ನಡೆಸುತ್ತಿರುವವರು ಎರಡು ಸಾವಿರ ರು. ನೋಟುಗಳನ್ನು ತಂದರೆ ಮಾತ್ರ ಸ್ವೀಕರಿಸಲು ತಿಳಿಸಿದ್ದೇವೆ. ಸಂಶಯ ಇದ್ದಲ್ಲಿ ಗ್ರಾಹಕರಿಗೆ ಆರ್‌ಟಿಜಿಎಸ್‌ ಮಾಡುವಂತೆ ತಿಳಿಸಿ ಎಂದು ಚಿನ್ನಾಭರಣ ವರ್ತಕರಿಗೆ ಸೂಚ್ಯವಾಗಿ ಹೇಳಿದ್ದೇವೆ. ಜೊತೆಗೆ, ತಿರಸ್ಕರಿಸಲು ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.

ಬ್ಯಾಂಕಲ್ಲಿ ನೂಕು ನುಗ್ಗಲಿಲ್ಲ

ಇನ್ನು, ಅಮಾನ್ಯವಾಗಿರುವ .2 ಸಾವಿರ ಮುಖ ಬೆಲೆಯ ನೋಟನ್ನು ತಮ್ಮ ಖಾತೆಗೆ ಜಮಾ ಮಾಡಲು ಅಥವಾ ಬದಲಾವಣೆ ಮಾಡಿಕೊಳ್ಳಲು ಮೊದಲನೇ ದಿನವಾದ ಸೋಮವಾರ ಬ್ಯಾಂಕ್‌ಗಳಲ್ಲಿ ಜನರ ಸರದಿ ಸಾಲು ಕಂಡುಬಂದಿಲ್ಲ.

‘ಪೆಟ್ರೋಲ್‌ ಬಂಕ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ವೈನ್ಸ್‌ ಸ್ಟೋರ್‌, ಅಂಗಡಿಗಳ ಮಾಲಿಕರು ಸೇರಿದಂತೆ ವ್ಯಾಪಾರಸ್ಥರು ಮಾತ್ರ ಹೆಚ್ಚಿನ ಮೊತ್ತದ ಹಣವನ್ನು ಬ್ಯಾಂಕ್‌ಗಳಲ್ಲಿ ಜಮೆ ಮಾಡುತ್ತಿದ್ದು ಸಾಮಾನ್ಯ ಜನರು ನಾಲ್ಕೈದು ಸಂಖ್ಯೆಯ ಒಳಗಡೆಯೇ ನೋಟುಗಳನ್ನು ಜಮಾ ಮಾಡುತ್ತಿದ್ದಾರೆ. ಕಳೆದ ಬಾರಿ ಆದಂತೆ ಯಾವ ಸರದಿ ಸಾಲೂ ಇಲ್ಲ. ಜನರೂ ಆತಂಕಕ್ಕೆ ಒಳಗಾಗಿಲ್ಲ. ಏಕೆಂದರೆ ಜನರ ಬಳಿ ಭಾರೀ ಸಂಖ್ಯೆಯ ನೋಟುಗಳಂತೂ ಇಲ್ಲವೇ ಇಲ್ಲ’ ಎಂದು ಬ್ಯಾಂಕ್‌ ಅಧಿಕಾರಿಗಳು ತಿಳಿಸಿದರು.

2000 ರು. ನೋಟು ರದ್ದಿನಿಂದ ಚಿನ್ನಕ್ಕೆ ಭಾರೀ ಡಿಮ್ಯಾಂಡ್‌!

ಆರ್‌ಬಿಐ ಸುತ್ತೋಲೆ ಪ್ರಕಟವಾದ ಬಳಿಕ ಹೋಟೆಲ್‌ಗಳಿಗೆ .2 ಸಾವಿರ ನೋಟು ತೆಗೆದುಕೊಂಡು ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ನಾವು ತಿರಸ್ಕರಿಸುತ್ತಿಲ್ಲ, ಆದರೆ, ಇದರಿಂದ ನೋಟನ್ನು ಬದಲಿಸಬೇಕಾದ ಹೊಣೆ ನಮ್ಮ ಹೆಗಲೇರುತ್ತಿದೆ.

-ಪಿ.ಸಿ.ರಾವ್‌, ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘ ಅಧ್ಯಕ್ಷ.

ಆರ್‌ಬಿಐ ಮಾರ್ಗಸೂಚಿಯಂತೆ .2 ಸಾವಿರ ಮುಖ ಬೆಲೆಯ ನೋಟನ್ನು ವಿನಿಮಯ ಮಾಡಿಕೊಡುತ್ತಿದ್ದೇವೆ. ಸೋಮವಾರ ಸುಮಾರು 25 ನೋಟುಗಳು ಮಾತ್ರ ಬಂದಿವೆ. ಕರೆಂಟ್‌ ಅಕೌಂಟ್‌ಗೆ ಮಾತ್ರ ಸುಮಾರು .6 ಲಕ್ಷ ಜಮೆಯಾಗಿದೆ. ಯಾವುದೇ ಗೊಂದಲ, ನೂಕುನುಗ್ಗಲು ಇರಲಿಲ್ಲ.

-ಲಲಿತಾ, ಗಾಂಧಿನಗರ ಫೆಡರಲ್‌ ಬ್ಯಾಂಕ್‌ ಶಾಖೆಯ ವ್ಯವಸ್ಥಾಪಕಿ