2000 ರು. ನೋಟು ರದ್ದತಿ ಬೆನ್ನಲ್ಲೇ ಚಿನ್ನಕ್ಕೆ ಈ ಹಿಂದಿಗಿಂತ ಹೆಚ್ಚು ಬೇಡಿಕೆ ಬಂದಿದೆ. ಅಂದರೆ 2000 ರು. ನೋಟುಗಳನ್ನು ಇಟ್ಟುಕೊಂಡವರು ಚಿನ್ನದ ಅಂಗಡಿಗಳಿಗೆ ಹೋಗಿ ಆ ನೋಟನ್ನು ನೀಡಿ ಚಿನ್ನ ಖರೀದಿಸುತ್ತಿದ್ದು, ಚಿನ್ನದಲ್ಲಿ ಹೂಡಿಕೆಗೆ ಮುಂದಾಗಿದ್ದಾರೆ.

ಮುಂಬೈ: 2000 ರು. ನೋಟು ರದ್ದತಿ ಬೆನ್ನಲ್ಲೇ ಚಿನ್ನಕ್ಕೆ ಈ ಹಿಂದಿಗಿಂತ ಹೆಚ್ಚು ಬೇಡಿಕೆ ಬಂದಿದೆ. ಅಂದರೆ 2000 ರು. ನೋಟುಗಳನ್ನು ಇಟ್ಟುಕೊಂಡವರು ಚಿನ್ನದ ಅಂಗಡಿಗಳಿಗೆ ಹೋಗಿ ಆ ನೋಟನ್ನು ನೀಡಿ ಚಿನ್ನ ಖರೀದಿಸುತ್ತಿದ್ದು, ಚಿನ್ನದಲ್ಲಿ ಹೂಡಿಕೆಗೆ ಮುಂದಾಗಿದ್ದಾರೆ. ಸಾಕಷ್ಟು ಚಿನ್ನಾಭರಣ ಅಂಗಡಿಗಳಿಗೆ ಚಿನ್ನ ಖರೀದಿ ಸಂಬಂಧ ದೂರವಾಣಿ ಕರೆಗಳು ಬರುತ್ತಿವೆ ಎಂದು ಚಿನ್ನದ ವ್ಯಾಪಾರಿಗಳೇ ಭಾನುವಾರ ತಿಳಿಸಿದ್ದಾರೆ.

2000 ರು. ನೋಟು ವಿನಿಮಯಕ್ಕೆ ಷರತ್ತುಗಳು ಇದ್ದು, ಒಂದು ಸಲಕ್ಕೆ 20 ಸಾವಿರ ರು.ಗಿಂತ ಹೆಚ್ಚು ಹಣ ವಿನಿಮಯ ಮಾಡಿಕೊಳ್ಳಲು ಆಗದು. ಖಾತೆದಾರರು 50 ಸಾವಿರ ರು.ಗಿಂತ ಹೆಚ್ಚಿನ ಮೌಲ್ಯದ 2000 ರು. ನೋಟು ನೀಡಿದರೆ ಅದಕ್ಕೆ ಪಾನ್‌ ಸಂಖ್ಯೆ ಸೇರಿದಂತೆ ಅಗತ್ಯ ದಾಖಲೆ ಒದಗಿಸಬೇಕು. ಹೀಗಾಗಿ ಭಾರಿ ಪ್ರಮಾಣದಲ್ಲಿ 2000 ರು. ನೋಟು ‘ದಾಸ್ತಾನು’ ಮಾಡಿ ಇಟ್ಟುಕೊಂಡವರು ಈ ತಲೆನೋವೇ ಬೇಡ ಎಂದು ಚಿನ್ನದ ಅಂಗಡಿಗಳಲ್ಲಿ 2000 ರು. ನೋಟುಗಳನ್ನು ನೀಡಿ ತಮ್ಮಲ್ಲಿ ಇರುವ ನೋಟುಗಳ ಮೌಲ್ಯದಷ್ಟು ಚಿನ್ನ ಖರೀದಿ ಮಾಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ನಿಮ್ಮ ಹಳೆಯ ಚಿನ್ನಾಭರಣದಲ್ಲಿ ಹಾಲ್ ಮಾರ್ಕ್ ಇಲ್ಲವೆ? ಹಾಗಾದ್ರೆ ಈ ಕೆಲಸ ಮಾಡದೆ ಮಾರಾಟ ಅಥವಾ ವಿನಿಮಯ ಅಸಾಧ್ಯ!

2 ಲಕ್ಷ ರು.ಗಿಂತ ಕಡಿಮೆ ಮೌಲ್ಯದ ಚಿನ್ನ (Gold), ಬೆಳ್ಳಿ (silver), ಆಭರಣ ಅಥವಾ ಮುತ್ತು-ರತ್ನಗಳನ್ನು ಖರೀದಿಸಿದರೆ ಅದಕ್ಕೆ ಪಾನ್‌ ಅಥವಾ ಆಧಾರ್‌ ಸಂಖ್ಯೆ ನೀಡಿ ಕೆವೈಸಿ (KYC) ವಿವರ ಭರ್ತಿ ಮಾಡಬೇಕಿಲ್ಲ. ಈ ಅವಕಾಶ ಬಳಸಿಕೊಳ್ಳುತ್ತಿರುವ ಜನರು 2000 ರು. ನೋಟು ನೀಡಿ ಚಿನ್ನ ಖರೀದಿಸುತ್ತಿದ್ದಾರೆ ಎಂದು ಗೊತ್ತಾಗಿದೆ.

ಆದರೆ, 2000 ರು. ನೋಟುಗಳು ಸಾಕಷ್ಟು ಜನರ ಬಳಿ ಇಲ್ಲ. ಹೀಗಾಗಿ ಈ ಹಿಂದೆ 500 ರು., 1000 ರು. ನೋಟು ರದ್ದಾದಾಗ ಚಿನ್ನದ ಅಂಗಡಿಗಳಿಗೆ ಮುಗಿಬಿದ್ದಷ್ಟು ಜನ ಈ ಬಾರಿ ಇಲ್ಲ ಎಂದು ಚಿನ್ನದ ವ್ಯಾಪಾರಿಯೊಬ್ಬರು ಹೇಳಿದರು.

2 ಸಾವಿರ ರೂ. ನೋಟುಗಳನ್ನೇ ಕೊಟ್ಟು 5 ಲಕ್ಷಕ್ಕೂ ಹೆಚ್ಚು ಬೆಲೆಬಾಳೋ ಚಿನ್ನದ ಆಭರಣ ಖರೀದಿಸಿದ ಗ್ರಾಹಕ!