ತಂದೆ ಚಾಕಲೇಟ್‌ಗೆ ಹಣ ಕೊಡದ್ದಕ್ಕೆ ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ಹೋದ ಪುತ್ರಿಯರು!
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಐದು ಗ್ಯಾರಂಟಿ ಯೋಜನೆಗಳಲ್ಲಿ ಮೊದಲನೇದಾಗಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಜಾರಿ ಮಾಡುವ ಮೂಲಕ ನುಡಿದಂತೆ ನಡೆದಿದೆ.
ಬೆಂಗಳೂರು (ಜೂ.19) ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಐದು ಗ್ಯಾರಂಟಿ ಯೋಜನೆಗಳಲ್ಲಿ ಮೊದಲನೇದಾಗಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಜಾರಿ ಮಾಡುವ ಮೂಲಕ ನುಡಿದಂತೆ ನಡೆದಿದೆ.
ಉಚಿತ ಪ್ರಯಾಣ ಯೋಜನೆಗೆ ಚಾಲನೆ ನೀಡುತ್ತಿದ್ದಂತೆ ರಾಜ್ಯದ ಮಹಿಳೆಯರಿಗೆ ರಕ್ಕೆ ಬಂದಂತಾಗಿದೆ. ಇಷ್ಟು ವರ್ಷ ಅಡುಗೆಮನೆಯಲ್ಲೇ ಬಂಧಿಯಾಗಿದ್ದ ಮಹಿಳೆಯರು ಶಕ್ತಿ ಯೋಜನೆ ಜಾರಿಯಾಗುತ್ತಿದ್ದಂತೆ ಗಂಟುಮೂಟೆ ಕಟ್ಟಿಕೊಂಡು ತೀರ್ಥಯಾತ್ರೆ, ಪ್ರವಾಸ ಮಾಡುತ್ತಿದ್ದಾರೆ. ಈ ಯೋಜನೆ ಮಹಿಳೆಯರಿಗೆ ಖುಷಿ ತಂದಿದ್ದರೆ, ಇತ್ತ ಪುರುಷರಿಗೆ ಸಂಕಟ ತಂದೊಡ್ಡಿದೆ. ಯೋಜನೆ ಜಾರಿ ಆದ ಬಳಿಕ ಹೆಂಗಸರು ಮನೆಯಲ್ಲಿ ಅಡುಗೆ ಮಾಡುತ್ತಿಲ್ಲ ಎಂದು ದೂರಿದ್ದಾರೆ. ಇನ್ನು ಕೆಲವರು ವಾರಕ್ಕೊಮ್ಮೆ ತವರಿಗೆ ಹೋಗುತ್ತಿದ್ದಾರೆ ಎಂದು ದೂರಿದ್ದಾರೆ. ಈ ಯೋಜನೆಯಿಂದ ಹಲವು ಅವಾಂತರಗಳು ಆಗಿವೆ.
ಬಸ್ಸಲ್ಲಿ ಶೇ.95 ಮಹಿಳಾ ಪ್ರಯಾಣಿಕರೇ ಭರ್ತಿ; ಪುರುಷರಿಗೆ ಸೀಟು ಬಿಟ್ಟುಕೊಡುವಂತೆ ಕಂಡಕ್ಟರ್ ಮನವಿ
ಇನ್ನೊಂದೆಡೆ ಸಣ್ಣಪುಟ್ಟ ಕಾರಣಗಳಿಗೆ ಮನೆಬಿಟ್ಟು ಹೋಗುವ ಮಕ್ಕಳಿಗೆ ಈ ಯೋಜನೆಯಿಂದ ಪೋಷಕರಿಗೆ ಆತಂಕ ತಂದೊಡ್ಡಿದೆ. ಇಂತದ್ದೇ ಘಟನೆ ಬೆಂಗಳೂರಿನ ಕೋಣನಕುಂಟೆಯಲ್ಲಿ ನಡೆದಿದೆ.
ಚಾಕಲೇಟ್ ಕೊಡಿಸದ್ದಕ್ಕೆ ಮನೆಬಿಟ್ಟು ಹೋದ ಪುತ್ರಿಯರು!
ತಂದೆ ಚಾಕಲೆಟ್ ಗೆ ಹಣ ಕೊಡದಿದ್ದಕ್ಕೆ ಪುತ್ರಿಯರಿಬ್ಬರು ಮನೆಬಿಟ್ಟು ಹೋಗಿರುವ ಘಟನೆ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪುತ್ರಿಯರಿಬ್ಬರು ನಾಪತ್ತೆಯಾಗಿರುವುದರಿಂದ ಹೆತ್ತವರು ಕಕ್ಕಾಬಿಕ್ಕಿಯಾಗಿದ್ದಾರೆ. 10 ಮತ್ತು 9 ನೇ ತರಗತಿಯಯಲ್ಲಿ ಓದುತ್ತಿರುವ ಮಕ್ಕಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಪೋಷಕರು ಆತಂಕಕ್ಕೊಳಗಾಗಿ ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೋಷಕರ ದೂರು ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸರಿಗೆ ಹೊಸ ಪೀಕಲಾಟ ಶುರುವಾಗಿದೆ. ಮನೆ ಬಿಟ್ಟು ಹೋಗಿದ್ದ ಪುತ್ರಿಯರು ಎರಡು ದಿನಗಳಾದ್ರೂ ಎಲ್ಲಿಗೆ ಹೋಗಿದ್ದಾರೆಂದು ಸುಳಿವು ಸಿಕ್ಕಿರಲಿಲ್ಲ. ಕೊನೆಗೂ ಮಕ್ಕಳು ಧರ್ಮಸ್ಥಳದಲ್ಲಿರುವುದನ್ನು ಪತ್ತೆ ಹಚ್ಚಿದ ಪೊಲೀಸರು. ನಾಪತ್ತೆಯಾದ ಮಕ್ಕಳನ್ನು ಧರ್ಮಸ್ಥಳದಲ್ಲಿ ವಶಕ್ಕೆ ಪಡೆದ ಬಳಿಕ ಮಕ್ಕಳು ಹೇಳಿದ್ದು ಕೇಳಿ ಶಾಕ್ ಆಗಿರುವ ಪೊಲೀಸರು.
ಮಹಿಳೆಯರಿಗೆ ಉಚಿತ ಪ್ರಯಾಣ : ಈಗ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ಬಸ್!
ಫ್ರೀ ಸ್ಕೀಂನಿಂದ ಇಲ್ಲಿಗೆ ಬಂದೆವು ಎಂದ ಮಕ್ಕಳು!
ಅಪ್ಪ ನಮಗೆ ಚಾಕಲೇಟ್‌ಗೆ ಹಣ ಕೊಡಲಿಲ್ಲ. ಕೇಳಿದ್ದಕ್ಕೆ ನಮ್ಮಿಬ್ಬರ ಮೇಲೆ ರೇಗಾಡಿದ್ದರು. ನಮಗೆ ಕೋಪ ಬಂದು ನಾವಿಬ್ರು ಮನೆಬಿಟ್ಟು ಬಸ್ ಹತ್ತಿ ಇಲ್ಲಿಗೆ ಬಂದಿದ್ದೇವೆ. ಫ್ರೀ ಟಿಕೆಟ್ ಇರೋದ್ರಿಂದ ನಾವು ಧರ್ಮಸ್ಥಳಕ್ಕೆ ಬಂದಿದ್ದೇನೆ ಎಂದಿರೋ ಮಕ್ಕಳು. ಕೋಣನಕುಂಟೆಯಿಂದ ನೇರ ಧರ್ಮಸ್ಥಳಕ್ಕೆ ತೆರಳಿದ್ದ ಸಹೋದರಿಯರು. ಎರಡು ದಿನದ ಬಳಿಕ ಜೂನ್ 18 ರಂದು ಧರ್ಮಸ್ಥಳದಲ್ಲಿ ಸಹೋದರಿಯರು ಪತ್ತೆ. ಮಕ್ಕಳ ಪತ್ತೆಯಿಂದ ನಿಟ್ಟುಸಿರು ಬಿಟ್ಟಿರೋ ಪೋಷಕರು! ಇತ್ತ ಪೊಲೀಸರು ಸುಸ್ತು!