Asianet Suvarna News Asianet Suvarna News

ಸಾರಿಗೆ ಮುಷ್ಕರ: ರೈಲ್ವೆಯಿಂದ 18 ವಿಶೇಷ ರೈಲು ಸಂಚಾರ

ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಸೇವೆ| ನೈಋುತ್ಯ ರೈಲ್ವೆಯು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಮಾರ್ಗಗಳಲ್ಲಿ ಏ.8ರಿಂದ ಏ.14ರವರೆಗೆ 18 ವಿಶೇಷ ರೈಲು ಕಾರ್ಯಾಚರಣೆ| ಪ್ರಯಾಣಿಸಲು ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸಬೇಕು| 

18 Special Train Trains Due to Bus Strike in Kanrataka grg
Author
Bengaluru, First Published Apr 9, 2021, 9:21 AM IST

ಬೆಂಗಳೂರು(ಏ.09):  ಸಾರಿಗೆ ನೌಕರರ ಮುಷ್ಕರ ಹಾಗೂ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನೈಋುತ್ಯ ರೈಲ್ವೆಯು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಮಾರ್ಗಗಳಲ್ಲಿ ಏ.8ರಿಂದ ಏ.14ರವರೆಗೆ 18 ವಿಶೇಷ ರೈಲು ಕಾರ್ಯಾಚರಣೆ ನಡೆಸಲಿದೆ.

ಹುಬ್ಬಳ್ಳಿ-ಯಶವಂತಪುರ, ಯಶವಂತಪುರ-ವಿಜಯಪುರ, ಯಶವಂತಪುರ-ಬೆಳಗಾವಿ, ಬೆಳಗಾವಿ-ಯಶವಂತಪುರ, ಮೈಸೂರು-ಬೀದರ್‌, ಬೀದರ್‌-ಮೈಸೂರು, ಯಶವಂತಪುರ-ಬೀದರ್‌, ಬೀದರ್‌- ಯಶವಂತಪುರ, ಕೆಎಸ್‌ಆರ್‌ ಬೆಂಗಳೂರು-ಮೈಸೂರು, ಮೈಸೂರು-ಕೆಎಸ್‌ಆರ್‌ ಬೆಂಗಳೂರು, ಮೈಸೂರು-ಯಶವಂತಪುರ, ಯಶವಂತಪುರ-ಶಿವಮೊಗ್ಗ ಟೌನ್‌, ಶಿವಮೊಗ್ಗ ಟೌನ್‌-ಯಶವಂತಪುರ, ಯಶವಂತಪುರ-ಕಾರವಾರ ಹಾಗೂ ಕಾರವಾರ-ಯಶವಂತಪುರ ಮಾರ್ಗಗಳಲ್ಲಿ ಈ ವಿಶೇಷ ರೈಲುಗಳು ಸಂಚರಿಸಲಿವೆ. ಈ ವಿಶೇಷ ರೈಲುಗಳಿಗೆ ವಿಶೇಷ ಪ್ರಯಾಣ ದರ ನಿಗದಿಗೊಳಿಲಾಗುತ್ತದೆ. ಈ ರೈಲುಗಳಲ್ಲಿ ಪ್ರಯಾಣಿಸಲು ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸಬೇಕು.

ಸಾರಿಗೆ ಮುಷ್ಕರ: 'ಸರ್ಕಾರ ಬ್ಲಾಕ್‌ಮೇಲ್‌ ಸಹಿಸಲ್ಲ'

ಸಾರಿಗೆ ನೌಕರರ ಮುಷ್ಕರ ಆರಂಭವಾಗಿರುವುದರಿಂದ ಹಾಗೂ ಯುಗಾದಿ ಹಬ್ಬ ಸಮೀಪಿಸುತ್ತಿರುವುದರಿಂದ ಊರುಗಳಿಗೆ ತೆರಳುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿಶೇಷ ರೈಲು ಕಾರ್ಯಾಚರಿಸುವಂತೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಅವರು ನೈಋುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ನೈಋುತ್ಯ ರೈಲ್ವೆ ವಿಶೇಷ ರೈಲು ಕಾರ್ಯಾಚರಣೆ ನಡೆಸಲಿದೆ.
 

Follow Us:
Download App:
  • android
  • ios