Corona Update: ಕೊರೋನಾ ಪಾಸಿಟಿವ್ ಪ್ರಕರಣ ಮತ್ತು ಸಾವಿನ ಸಂಖ್ಯೆ ಇಳಿಕೆ

* ರಾಜ್ಯದಲ್ಲಿ ತಗ್ಗಿದ ಕೊರೋನಾ ಎರಡನೇ ಅಲೆ 
* ಕೊರೋನಾ ಪಾಸಿಟಿವ್ ಪ್ರಕರಣ ಮತ್ತು ಸಾವಿನ ಸಂಖ್ಯೆ ಇಳಿಕೆ
* 171 ಹೊಸ ಕೊರೋನಾ ಕೇಸ್, 1 ಸಾವು

171 New Coronavirus Cases and Only 1 death in Karnataka on nov 15th rbj

ಬೆಂಗಳೂರು, (ನ.15): ರಾಜ್ಯದಲ್ಲಿ ಕೊರೋನಾ ಎರಡನೇ (Coroanvrus) ಅಲೆ ಸೋಂಕು ಮತ್ತಷ್ಟು ತಗ್ಗಿದ್ದು, ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಭಾರೀ ಇಳಿಕೆಯಾಗಿದೆ.

  ಇಂದು (ನ.15) ರಾಜ್ಯದಲ್ಲಿ ಒಟ್ಟು 171 ಹೊಸ ಕೊರೋನಾ ಕೇಸ್ ಪತ್ತೆಯಾಗಿದ್ದು, ರಾಜ್ಯದಲ್ಲಿ ಕೇವಲ ಇಬ್ಬರು ಮಾತ್ರ ಸಾವನ್ನಪ್ಪಿದ್ದಾರೆ. ಅದು ಮೈಸೂರು ಜಿಲ್ಲೆಯಲ್ಲಿ ಎಂದು ವರದಿಯಾಗಿದೆ. ಬೆಂಗಳೂರು ಸೇರಿದಂತೆ ಉಳಿದ 29 ಜಿಲ್ಲೆಗಳಲ್ಲಿ ಶೂನ್ಯ ಮರಣ ಪ್ರಕರಣ ದಾಖಲಾಗಿದೆ.

CovidVaccine| 2ನೇ ಡೋಸ್ ಲಸಿಕೆ ಕಡ್ಡಾಯ ಮಾಡಿ: ತಜ್ಞರು

ಈವರೆಗೆ ರಾಜ್ಯದಲ್ಲಿ ಒಟ್ಟು 29,92,021 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಇದುವರೆಗೆ 38146 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. 29,45,934 ಮಂದಿ ಈವರೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.  ಒಟ್ಟು 7,912 ಸಕ್ರಿಯ ಪ್ರಕರಣಗಳು ಇದ್ದು, ಕೋವಿಡ್-19 ಮರಣ ಪ್ರಮಾಣ ಶೇ.0.58 ರಷ್ಟಿದ್ದರೇ, ಪಾಸಿಟಿವಿಟಿ ರೇಟ್ ಶೇ.0.25 ರಷ್ಟಿದೆ.

 ಬೆಂಗಳೂರು ನಗರದಲ್ಲಿ 118 ಮಂದಿಗೆ ಪಾಸಿಟಿವ್ ವರದಿಯಾಗಿದ್ದು, 144 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇಂದು(ನ.15) ರಾಜ್ಯದಲ್ಲಿ  1,73,637 ಮಂದಿಗೆ ಕೊರೋನಾ ಲಸಿಕೆ ನೀಡಲಾಗಿದ್ದು, ಒಟ್ಟು 66,596 ಸ್ಯಾಂಪಲ್ (RTPCR 57,835 + 8,761 ರ್ಯಾಪಿಡ್ ಆಂಟಿಜನ್) ಪರೀಕ್ಷೆಗೆ ಒಳಪಡಿಸಲಾಗಿದೆ.

ಜಿಲ್ಲಾವಾರು ಕೊರೋನಾ ಕೇಸ್
 ಬಾಗಲಕೋಟೆ 0, ಬಳ್ಳಾರಿ 1, ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 118, ಬೀದರ್ 0, ಚಾಮರಾಜನಗರ 4, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 1, ಚಿತ್ರದುರ್ಗ 0, ದಕ್ಷಿಣ ಕನ್ನಡ 8, ದಾವಣಗೆರೆ 0, ಧಾರವಾಡ 0, ಗದಗ 0, ಹಾಸನ 3, ಹಾವೇರಿ 0, ಕಲಬುರಗಿ 2, ಕೊಡಗು 3, ಕೋಲಾರ 1, ಕೊಪ್ಪಳ 0, ಮಂಡ್ಯ 1, ಮೈಸೂರು 14, ರಾಯಚೂರು 1, ರಾಮನಗರ 0, ಶಿವಮೊಗ್ಗ 1, ತುಮಕೂರು 2, ಉಡುಪಿ 4, ಉತ್ತರ ಕನ್ನಡ 2, ವಿಜಯಪುರ ಮತ್ತು ಯಾದಗಿರಿಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.

ಲಸಿಕೆ ಹಾಕಿಸಿಕೊಳ್ಳಲು ನಕಾರ : ಬಡಾವಣೆ ನೀರು- ವಿದ್ಯುತ್ ಕಟ್
 ದೇಶದಾದ್ಯಂತ ಎಲ್ಲರಿಗು ಕೊರೋನಾ ಲಸಿಕೆ (Corona vaccination) ಅಭಿಯಾನ ಭರದಿಂದ ಸಾಗಿದೆ. ಈಗಾಗಲೇ ಕೊಟ್ಯಂತರ ಸಂಖ್ಯೆಯಲ್ಲಿ ಜನರು ಕೋವಿಡ್ (Covid) ಲಸಿಕೆ  ಹಾಕಿಸಿಕೊಂಡಿದ್ದು, ತುಮಕೂರಿನ ಒಂದು ಬಡಾವಣೆಯ ಜನರು ಮಾತ್ರ ಹಿಂದೇಟು ಹಾಕುತ್ತಿದ್ದಾರೆ.

ತುಮಕೂರು (Tumakuru) ಜಿಲ್ಲೆ ಪಾವಗಡ ಪಟ್ಟಣದ ಕನುಮಲ ಚೆರವು ಬಡಾವಣೆಯ ಜನರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದು ಈ ನಿಟ್ಟಿನಲ್ಲಿ  ಬಡಾವಣೆ ಜನರ ನೀರು (water), ವಿದ್ಯುತ್ (Electricity) ಸ್ಥಗಿತಗೊಳಿಸಲಾಗಿದೆ.  

 40 ಕ್ಕೂ ಹೆಚ್ಚು ಮನೆಗಳು ಈ ಬಡಾವಣೆಯಲ್ಲಿ ಇದ್ದು 100 ಕ್ಕೂ ಹೆಚ್ಚು ಜನರು ಕೋವಿಡ್ ಲಸಿಕೆ ಹಾಕಿಸಿಕೊಂಡಿಲ್ಲ.  ಲಸಿಕೆ ಹಾಕಿಸಿಕೊಳ್ಳಲು ಒಪ್ಪದ ಕಾರಣ ಪುರಸಭೆ  ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ನೀರು ಮತ್ತು ವಿದ್ಯುತ್ ಸ್ಥಗಿತ ಗೊಳಿಸಿ ಶಿಕ್ಷೆ ನೀಡಿದ್ದಾರೆ.

ಎರಡನೇ ಡೋಸ್ ಪಡೆಯುವುದು ಕಡ್ಡಾಯ
ರಾಜ್ಯದಲ್ಲಿ(Karnataka) ಕೋವಿಡ್-19(Covid19) ಲಸಿಕೆಯ ಎರಡನೇ ಡೋಸ್ ಪಡೆಯಲು ಜನರು ನಿರುತ್ಸಾಹ ತೋರುತ್ತಿರುವುದು ಮತ್ತು ಕೆಲ ದೇಶಗಳಲ್ಲಿ ಕೋವಿಡ್ ಮತ್ತೆ ರಣಕೇಕೆ ಹಾಕುತ್ತಿರುವುದನ್ನು ಗಮನಿಸಿ ಎರಡನೇ ಡೋಸ್ ಪಡೆಯುವುದನ್ನು ಕಡ್ಡಾಯ ಮಾಡಬೇಕು ಎಂದು ಆರೋಗ್ಯ ತಜ್ಞರು(Health Experts) ರಾಜ್ಯ ಸರ್ಕಾರಕ್ಕೆ(Government of Karnataka) ಒತ್ತಾಯ ಮಾಡಿದ್ದಾರೆ.

ಕೋವಿಡ್ ಲಸಿಕೆ(Vaccine) ಪಡೆಯಲು ಅರ್ಹರಾಗಿರುವ ವಯಸ್ಕರಲ್ಲಿ ಶೇ.88ರಷ್ಟು ಮಂದಿ ಈಗಾಗಲೇ ಮೊದಲ ಡೋಸ್ ಪಡೆದಿದ್ದಾರೆ. ಆದರೆ ಎರಡನೇ ಡೋಸ್ ಪಡೆದವರ ಸಂಖ್ಯೆ ಶೇ.50 ಮುಟ್ಟಿಲ್ಲ. ಈ ಮಧ್ಯೆ ಲಸಿಕೆಯ ಎರಡನೇ ಡೋಸ್ ಪಡೆಯುವ ಅವಧಿ ಮುಕ್ತಾಯಗೊಂಡಿದ್ದರೂ ಎಷ್ಟೋ ಮಂದಿ ಇನ್ನೂ ಲಸಿಕೆ ಹಾಕಿಸಿಕೊಂಡಿಲ್ಲ. ಕೆಲ ರಾಷ್ಟ್ರಗಳಲ್ಲಿ ಲಸಿಕಾಕರಣದ ಬಗ್ಗೆ ತೋರಿದ್ದ ಅಸಡ್ಡೆಗೆ ಬೆಲೆ ತೆರುವ ಸ್ಥಿತಿ ಬಂದಿದೆ. ಹೀಗಾಗಿ ಕೊರೋನಾ(Coronavirus) ಲಸಿಕೆಯ ಎರಡೂ ಡೋಸ್ ಪಡೆದವರಿಗೆ ಮಾತ್ರ ಸಾಮಾಜಿಕ- ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ನೀಡಬೇಕು. ತನ್ಮೂಲಕ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

Latest Videos
Follow Us:
Download App:
  • android
  • ios