Asianet Suvarna News Asianet Suvarna News

ಕೋವಿಡ್‌ಗೆ ರಾಜ್ಯದಲ್ಲಿ ಒಂದೇ ದಿನ 6 ಜನ ಸಾವು: 154 ದಿನಗಳ ಗರಿಷ್ಠ

ರಾಜ್ಯದಲ್ಲಿ ಗುರುವಾರ 1691 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಆರು ಮಂದಿ ಮೃತಪಟ್ಟಿದ್ದಾರೆ. 1982 ಸೋಂಕಿತರು ಗುಣಮುಖರಾಗಿದ್ದಾರೆ. ವಿಜಯಪುರದಲ್ಲಿ 45 ವರ್ಷದ ಮಹಿಳೆ, ಬಳ್ಳಾರಿ 60 ವರ್ಷದ ಮಹಿಳೆ, ಕೊಪ್ಪಳದ 70 ವರ್ಷ ಮತ್ತು ಧಾರವಾಡದ 72 ವರ್ಷದ ಹಿರಿಯ ನಾಗರಿಕರಿಬ್ಬರು ಯಾವುದೇ ಸಹ ಅಸ್ವಸ್ಥತೆ ಹೊಂದಿರದಿದ್ದರೂ ಮರಣವನ್ನಪ್ಪಿದ್ದಾರೆ.

1691 new coronavirus cases on august 11 in karnataka gvd
Author
Bangalore, First Published Aug 12, 2022, 3:45 AM IST

ಬೆಂಗಳೂರು (ಆ.12): ರಾಜ್ಯದಲ್ಲಿ ಗುರುವಾರ 1691 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಆರು ಮಂದಿ ಮೃತಪಟ್ಟಿದ್ದಾರೆ. 1982 ಸೋಂಕಿತರು ಗುಣಮುಖರಾಗಿದ್ದಾರೆ. ವಿಜಯಪುರದಲ್ಲಿ 45 ವರ್ಷದ ಮಹಿಳೆ, ಬಳ್ಳಾರಿ 60 ವರ್ಷದ ಮಹಿಳೆ, ಕೊಪ್ಪಳದ 70 ವರ್ಷ ಮತ್ತು ಧಾರವಾಡದ 72 ವರ್ಷದ ಹಿರಿಯ ನಾಗರಿಕರಿಬ್ಬರು ಯಾವುದೇ ಸಹ ಅಸ್ವಸ್ಥತೆ ಹೊಂದಿರದಿದ್ದರೂ ಮರಣವನ್ನಪ್ಪಿದ್ದಾರೆ. ಕಳೆದ ಮಾರ್ಚ್‌ 10 ರಂದು ಏಳು ಮಂದಿ ಕೋವಿಡ್‌ ಸೋಂಕಿತರು ಮರಣವನ್ನಪ್ಪಿದ್ದು 154 ದಿನಗಳ ಗರಿಷ್ಠ ಸಾವು ಗುರುವಾರ ದಾಖಲಾಗಿದೆ.

27,725 ಮಂದಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು ಶೇ. 6.09 ಪಾಸಿಟಿವಿಟಿ ದರ ದಾಖಲಾಗಿದೆ. ಗುಣಮುಖರ ಸಂಖ್ಯೆ ಹೆಚ್ಚಿದ್ದರಿಂದ ಸಕ್ರಿಯ ಕೇಸು 10,054ಕ್ಕೆ ಇಳಿದಿವೆ. ಬೆಂಗಳೂರಿನಲ್ಲಿ ಗರಿಷ್ಠ 1,225, ಮೈಸೂರು 88, ಬಳ್ಳಾರಿ 58, ಧಾರವಾಡ 42, ಬೆಳಗಾವಿ 29, ಚಾಮರಾಜನಗರ 27, ಮಂಡ್ಯ 24, ಶಿವಮೊಗ್ಗ ಜಿಲ್ಲೆಯಲ್ಲಿ 22 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ 40.26 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು 39.75 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 40,134 ಮಂದಿ ಮರಣವನ್ನಪ್ಪಿದ್ದಾರೆ.

ಕೊರೋನಾ ಹೆಚ್ಚಳ: ಕರ್ನಾಟಕದಲ್ಲಿ ಮತ್ತೆ ಕಠಿಣ ನಿಯಮ ಜಾರಿ, ಗಣೇಶೋತ್ಸವಕ್ಕೂ ನಿರ್ಬಂಧ?

50 ಸಾವಿರ ಮಂದಿಗೆ ಲಸಿಕೆ: ಗುರುವಾರ 50,950 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 732 ಮಂದಿ ಮೊದಲ ಡೋಸ್‌, 11,916 ಮಂದಿ ಎರಡನೇ ಡೋಸ್‌ ಮತ್ತು 38,302 ಮಂದಿ ಮೂರನೇ ಡೋಸ್‌ ಲಸಿಕೆ ಸ್ವೀಕರಿಸಿದ್ದಾರೆ. ಈವರೆಗೆ ಒಟ್ಟು 11.71 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.

ಉಡುಪಿಯಲ್ಲಿ 8 ಮಂದಿಗೆ ಕೋವಿಡ್‌: ಜಿಲ್ಲೆಯಲ್ಲಿ ಗುರುವಾರ 566 ಮಂದಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿದ್ದು, ಅವರಲ್ಲಿ ಉಡುಪಿ ತಾಲೂಕಿನ 2 ಮತ್ತು ಕುಂದಾಪುದ 6 ಮಂದಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ. ಈದಿನ 11 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 28 ಮಂದಿ ಸಕ್ರಿಯ ಸೋಂಕಿತರಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 540 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ಕೊಡಗಿನಲ್ಲಿ 13 ಕೋವಿಡ್‌ ಪ್ರಕರಣ ಪತ್ತೆ: ಕೊಡಗು ಜಿಲ್ಲೆಯಲ್ಲಿ ಗುರುವಾರ 13 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿದೆ. ಮಡಿಕೇರಿ ತಾಲೂಕಿನಲ್ಲಿ 2, ವಿರಾಜಪೇಟೆ ತಾಲೂಕಿನಲ್ಲಿ 2, ಸೋಮವಾರಪೇಟೆ ತಾಲೂಕಿನಲ್ಲಿ 9 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿನ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 48,056 ಆಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 23 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಒಟ್ಟು 47, 494 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 451 ಮರಣ ಪ್ರಕರಣಗಳು ವರದಿಯಾಗಿದೆ. 111 ಸಕ್ರಿಯ ಪ್ರಕರಣಗಳಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ 16 ಆಗಿದೆ. ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವಿಟಿ ದರ ಶೇ.2.10 ಆಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರು ತಿಳಿಸಿದ್ದಾರೆ.

ಭಾರತದಲ್ಲಿ ಅತೀ ವೇಗವಾಗಿ ಹರಡುವ, ಅಪಯಕಾರಿ ಹೊಸ ಒಮಿಕ್ರಾನ್ ಉಪತಳಿ ಪತ್ತೆ, ಹೈ ಅಲರ್ಟ್!

ದ.ಕ.ದಲ್ಲಿ 6 ಕೊರೋನಾ ಪ್ರಕರಣ: ದ.ಕ. ಜಿಲ್ಲೆಯಲ್ಲಿ ಗುರುವಾರ 6 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 14 ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 54 ಆಗಿದೆ. ಜಿಲ್ಲೆಯಲ್ಲಿ ಇದುವರೆಗೆ 1,36,384 ಮಂದಿ ಸೋಂಕಿತರಾಗಿದ್ದು, ಅವರಲ್ಲಿ 1,34,473 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 1857 ಮಂದಿ ಮೃತಪಟ್ಟಿದ್ದಾಾರೆ ಎಂದು ಜಿಲ್ಲಾ ಆರೋಗ್ಯ ಬುಲೆಟಿನ್‌ ತಿಳಿಸಿದೆ.

Follow Us:
Download App:
  • android
  • ios