* ಕರ್ನಾಟಕದಲ್ಲಿ ಕೊರೋನಾ ಮೂರನೇ ಅಲೆ ಭೀತಿ* ರಾಜ್ಯದ ಕೊರೋನಾ ಅಂಕಿ-ಅಂಖ್ಯೆ* ಕೊರೋನಾ ಪಾಸಿಟಿವಿಟಿ ದರ 1.38%.

ಬೆಂಗಳೂರು, (ಅ.03):  ನೆರೆ ರಾಜ್ಯಗಳಾದ ಕೇರಳ, ಮಹಾರಾಷ್ಟ್ರದಲ್ಲಿ ಪಾಸಿಟಿವ್ ಕೇಸ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕರ್ನಾಟಕದಕ್ಕೂ ಆತಂಕ ಎದುರಾಗಿದೆ. ಈ ಹಿನ್ನಲೆಯಲ್ಲಿ ಗಡಿಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. RTPCR ಚೆಕ್ ಮಾಡಿ ರಾಜ್ಯದೊಳಗೆ ಬಿಡಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರ ಮಧ್ಯೆ ರಾಜ್ಯದಲ್ಲಿ ಇಂದು (ಅ.03) 1674 ಕೋವಿಡ್ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಸೋಂಕಿನಿಂದ 38 ಜನರು ಸಾವನ್ನಪ್ಪಿದ್ದಾರೆ.

ಬೆಂಗಳೂರು: ಒಂದೇ ಕುಟುಂಬದ 5 ಮಂದಿಗೆ ಸೋಂಕು, ಮನೆ ಸೀಲ್‌ಡೌನ್

1376 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2849003ಕ್ಕೆ ಏರಿಕೆಯಾಗಿದೆ. ಇದರಿಂದಿಗೆ ಕೊರೋನಾ ಪಾಸಿಟಿವಿಟಿ ದರ 1.38%.

ಜಿಲ್ಲಾವಾರು ಕೇಸ್ ಸಂಖ್ಯೆ :
ಬಾಗಲಕೋಟೆ-1, ಬಳ್ಳಾರಿ-8, ಬೆಳಗಾವಿ-36, ಬೆಂಗಳೂರು ಗ್ರಾಮಾಂತರ-21, ಬೆಂಗಳೂರು ನಗರ-477, ಬೀದರ್-0, ಚಾಮರಾಜನಗರ-19, ಚಿಕ್ಕಬಳ್ಳಾಪುರ-6, ಚಿಕ್ಕಮಗಳೂರು-61, ಚಿತ್ರದುರ್ಗ-15, ದಕ್ಷಿಣ ಕನ್ನಡ-307, ದಾವಣಗೆರೆ-12, ಧಾರವಾಡ-9, ಗದಗ-3, ಹಾಸನ-104, ಹಾವೇರಿ-1, ಕಲಬುರಗಿ-3, ಕೊಡಗು-94, ಕೋಲಾರ-17, ಕೊಪ್ಪಳ-4, ಮಂಡ್ಯ-44, ಮೈಸೂರು-147, ರಾಯಚೂರು-0, ರಾಮನಗರ-11, ಶಿವಮೊಗ್ಗ-26, ತುಮಕೂರು-80, ಉಡುಪಿ-104, ಉತ್ತರ ಕನ್ನಡ-60, ವಿಜಯಪುರ-4, ಯಾದಿಗಿರಿ-0.