ಕೊರೋನಾ ಭೀತಿ: 165 ವರ್ಷದಲ್ಲಿ ಇದೇ ಮೊದಲ ಬಾರಿ 155 ರೈಲು ರದ್ದು
ದೇಶಾದ್ಯಂತ ಕೊರೊನಾವೈರಸ್ ಪರಿಣಾಮದಿಂದ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದ್ದು, 155 ರೈಲು ಸಂಚಾರ ರದ್ದುಪಡಿಸಲಾಗಿದೆ.
ಬೆಂಗಳೂರು(ಮಾ.19): ದೇಶಾದ್ಯಂತ ಕೊರೊನಾವೈರಸ್ ಪರಿಣಾಮದಿಂದ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದ್ದು, 155 ರೈಲು ಸಂಚಾರ ರದ್ದುಪಡಿಸಲಾಗಿದೆ. ಶೇ. 40ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಟಿಕೆಟ್ ಬುಕ್ಕಿಂಗ್ ನಡೆಯುತ್ತಿದ್ದು ರೈಲ್ವೆ ಇಲಾಖೆ ಟ್ರೈನ್‌ಗಳನ್ನು ಕ್ಯಾನ್ಸಲ್ ಮಾಡಿದೆ.
ಮಾರ್ಚ್20ರಿಂದ 31ರವರೆಗಿನ ಅನೇಕ ರೈಲು ಸಂಚಾರ ರದ್ದು ಮಾಡಲಾಗಿದ್ದು, 165 ವರ್ಷಗಳ ರೈಲ್ವೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕ್ರಮ ವಹಿಸಲಾಗಿದೆ. ಈಗಾಗಲೆ ಬುಕ್ ಮಾಡಿರುವ ಪ್ರಯಾಣಿಕರಿಗೆ ಸಂಪೂರ್ಣ ಹಣ ವಾಪಸ್ ಮಾಡಲಾಗಿದೆ. ಕ್ಯಾನ್ಸಲೇಶನ್ ಫೀ ತೆಗೆದುಕೊಳ್ಳದೆ ಸಂಪೂರ್ಣ ಹಣ ವಾಪಸ್ ಮಾಡಲಾಗಿದೆ.
ಕೊರೋನಾ ಎಫೆಕ್ಟ್: 6 ವಿಮಾನ ಸೇರಿ ಹಲವು ರೈಲುಗಳೂ ರದ್ದು
ನೈರುತ್ಯ ವಲಯದ 8 ರೈಲುಗಳು ಸೇರಿದಂತೆ ಅನೇಕ ರೈಲು ಸಂಚಾರ ರದ್ದಾಗಿದೆ. ಯಶವಂತಪುರ-ವಿಜಯಪುರ ಡೈಲಿ ಎಕ್ಸ್ಪ್ರೆಸ್ ವಿಶೇಷ ರೈಲು, ವಿಜಯಪುರ-ಯಶವಂತಪುರ ಎಕ್ಸ್ಪ್ರೆಸ್, ವಿಜಯಪುರ-ಮಂಗಳೂರು ಡೈಲಿ ಎಕ್ಸ್ಪ್ರೆಸ್ ವಿಶೇಷ ರೈಲು, ಮಂಗಳೂರು ವಿಜಯಪುರ ಎಕ್ಸ್ಪ್ರೆಸ್, ಯಶವಂತಪುರ-ವಾಸ್ಕೋಡಿಗಾಮ ಎಕ್ಸ್ಪ್ರೆಸ್ ವಿಶೇಷ ರೈಲು, ಹಬೀಬ್ಗಂಜ್-ಧಾರವಾಡ ಎಕ್ಸ್ಪ್ರೆಸ್ ರೈಲು, ಧಾರವಾಡ-ಹಬೀಬಗಂಜ್ ಎಕ್ಸ್ಪ್ರೆಸ್ ರೈಲು , ಮಂಗಳೂರು ಜಂಕ್ಷನ್-ಮಡಗಾಂವ್ ಜಂಕ್ಷನ್ ಇಂಟರ್ಸಿಟಿ ಎಕ್ಸ್ಪ್ರೆಸ್, ಜಬಲ್ಪುರ ಜಂಕ್ಷನ್- ಕೊಯಮತ್ತೂರು ಜಂಕ್ಷನ್ ರೈಲು ರದ್ದಾಗಿದೆ.
ಮಾರ್ಚ್ 19ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ