Asianet Suvarna News Asianet Suvarna News

ಲೋಕಾಯುಕ್ತ ದಾಳಿ: ಬೆಸ್ಕಾಂ ಇಇ ಬಳಿ 15 ಕೋಟಿ ಆಸ್ತಿ ಪತ್ತೆ

ದಾಳಿ ವೇಳೆ ಕೋಟ್ಯಂತರ ರು. ನಗದು, ಕೆ.ಜಿ.ಗಟ್ಟಲೆ ಚಿನ್ನಾಭರಣ, ಬೆಳ್ಳಿ ಸಾಮಗ್ರಿಗಳು, ವಜ್ರದ ಆಭರಣಗಳು ಹಾಗೂ ದುಬಾರಿ ವಸ್ತುಗಳು ಸೇರಿದಂತೆ ಒಟ್ಟು 65.84 ಕೋಟಿ ರು. ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.
 

15 Crore Property Found in BESCOM EE House During Lokayukta Raid in Karnataka grg
Author
First Published Dec 6, 2023, 7:19 AM IST

ಬೆಂಗಳೂರು(ಡಿ.06):  ಕರ್ನಾಟಕ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳ್ಳಂಬೆಳಗ್ಗೆ ರಾಜ್ಯದ 9 ಜಿಲ್ಲೆಗಳಲ್ಲಿನ 13 ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ನಿವಾಸಗಳು ಸೇರಿದಂತೆ 68 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ನೀರಿಳಿಸಿದ್ದಾರೆ.

ದಾಳಿ ವೇಳೆ ಕೋಟ್ಯಂತರ ರು. ನಗದು, ಕೆ.ಜಿ.ಗಟ್ಟಲೆ ಚಿನ್ನಾಭರಣ, ಬೆಳ್ಳಿ ಸಾಮಗ್ರಿಗಳು, ವಜ್ರದ ಆಭರಣಗಳು ಹಾಗೂ ದುಬಾರಿ ವಸ್ತುಗಳು ಸೇರಿದಂತೆ ಒಟ್ಟು 65.84 ಕೋಟಿ ರು. ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.

ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಚಳಿ ಬಿಡಿಸಿದ ಲೋಕಾ ದಾಳಿ: ಕೋಟ್ಯಂತರ ರೂ. ಮೌಲ್ಯದ ವಸ್ತು ಪತ್ತೆ

ರಾಜ್ಯದ 9 ಜಿಲ್ಲೆಗಳ 13 ಅಧಿಕಾರಿಗಳಿಗೆ ಸೇರಿದ 68 ಸ್ಥಳಗಳಲ್ಲಿ ನಡೆದ ಲೋಕಾಯುಕ್ತ ಪೊಲೀಸರ ದಾಳಿಯಲ್ಲಿ ಪತ್ತೆಯಾದ ಆಸ್ತಿ ವಿವರ ಹೀಗಿದೆ.

1. ಬೆಸ್ಕಾಂ ಇಇ ಎಚ್‌.ಡಿ.ಚೆನ್ನಕೇಶವ- ಸ್ಥಿರಾಸ್ತಿ ಮೌಲ್ಯ: 11.46 ಕೋಟಿ ರು., ಚರಾಸ್ತಿ ಮೌಲ್ಯ: 4.07 ಕೋಟಿ ರು.(1.44 ಕೋಟಿ ರು. ನಗದು, 3 ಕೆ.ಜಿ.ಚಿನ್ನ, 28 ಕೆ.ಜಿ.ಬೆಳ್ಳಿ, 25 ಲಕ್ಷ ರು. ಮೌಲ್ಯದ ವಜ್ರ, 5 ಲಕ್ಷ ರು. ಮೌಲ್ಯದ ಪುರಾತನ ವಸ್ತುಗಳು).
2. ರಾಮನಗರ ಜಿಲ್ಲೆ ಕಣಿಮಿಣಿಕೆ ಗ್ರಾಮದ ಕೆಎಂಎಫ್‌ ಮುಖ್ಯ ಕಾರ್ಯನಿರ್ವಾಹಕ (ಕಾರ್ಯದರ್ಶಿ) ಎಚ್‌.ಎಸ್‌.ಕೃಷ್ಣಮೂರ್ತಿ- ಸ್ಥಿರಾಸ್ತಿ ಮೌಲ್ಯ: 49.87 ಲಕ್ಷ ರು., ಚರಾಸ್ತಿ ಮೌಲ್ಯ: 3.60 ಕೋಟಿ ರು.(ನಗದು, ಚಿನ್ನ, ಬೆಳ್ಳಿ, ಗೃಹೋಪಯೋಗಿ ವಸ್ತುಗಳು).
3. ಬೆಂಗಳೂರು ಬೆಸ್ಕಾಂ ಜಾಗೃತ ದಳದ ಉಪ ಪ್ರಧಾನ ವ್ಯವಸ್ಥಾಪಕ ಟಿ.ಎನ್‌.ಸುಧಾಕರ್‌ ರೆಡ್ಡಿ- ಸ್ಥಿರಾಸ್ತಿ ಮೌಲ್ಯ: 5.42 ಕೋಟಿ ರು., ಚರಾಸ್ತಿ ಮೌಲ್ಯ:31.10 ಲಕ್ಷ ರು.
4. ಹುಬ್ಬಳ್ಳಿ ನಗರ ಹೆಸ್ಕಾಂ ನಗರ ವಿಭಾಗೀಯ ಸ್ಟೋರ್‌ನ ನಿವೃತ್ತ ಕಿರಿಯ ಅಭಿಯಂತರ (ಗ್ರೇಡ್‌-2) ಬಸವರಾಜ- ಸ್ಥಿರಾಸ್ತಿ ಮೌಲ್ಯ: 2.31 ಕೋಟಿ ರು. ಚರಾಸ್ತಿ ಮೌಲ್ಯ:1.02 ಕೋಟಿ ರು.(80 ಲಕ್ಷ ರು. ನಗದು, 24.84 ಲಕ್ಷ ರು. ಮೌಲ್ಯದ ವಾಹನಗಳು, 18.33 ಲಕ್ಷ ರು. ಮೌಲ್ಯದ 331 ಗ್ರಾಂ ಚಿನ್ನಾಭರಣ, 18 ಲಕ್ಷ ರು. ಮೌಲ್ಯದ 26 ಕೆ.ಜಿ.ಚಿನ್ನಾಭರಣ, 23 ಲಕ್ಷ ರು. ಬ್ಯಾಂಕ್ ಬ್ಯಾಲೆನ್ಸ್‌, 10 ಲಕ್ಷ ರು. ಮೌಲ್ಯದ ಗೃಹೋಪಯೋಗಿ ವಸ್ತುಗಳು).
5.ಮೈಸೂರಿನ ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಎಂ.ಎಸ್‌.ಮಹದೇವಸ್ವಾಮಿ- ಸ್ಥಿರಾಸ್ತಿ ಮೌಲ್ಯ: 6.08 ಕೋಟಿ ರು. ಚರಾಸ್ತಿ ಮೌಲ್ಯ: 2.33 ಕೋಟಿ ರು.
6.ಬೆಳಗಾವಿ ಜಿಲ್ಲೆ ಕೆಆರ್‌ಐಡಿಎಲ್‌ ಅಧೀಕ್ಷಕ ಇಂಜಿನಿಯರ್‌ ತಿಮ್ಮರಾಜಪ್ಪ- ಸ್ಥಿರಾಸ್ತಿ ಮೌಲ್ಯ: 8 ಕೋಟಿ ರು., ಚರಾಸ್ತಿ ಮೌಲ್ಯ: 1 ಕೋಟಿ ರು.(90 ಸಾವಿರ ರು. ನಗದು, 250 ಗ್ರಾಂ ಚಿನ್ನಾಭರಣ, 300 ಗ್ರಾಂ ಬೆಳ್ಳಿ ವಸ್ತುಗಳು).
7.ರಾಮನಗರ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎನ್‌.ಮುನೇಗೌಡ- ಸ್ಥಿರಾಸ್ತಿ ಮೌಲ್ಯ: 3.58 ಕೋಟಿ ರು., ಚರಾಸ್ತಿ ಮೌಲ್ಯ: 1.42 ಕೋಟಿ ರು.(23.50 ಲಕ್ಷ ರು. ಮೌಲ್ಯದ ವಾಹನಗಳು, 84 ಲಕ್ಷ ರು. ಮೌಲ್ಯದ 1.55 ಕೆ.ಜಿ ಚಿನ್ನಾಭರಣ, 4 ಲಕ್ಷ ರು. ಮೌಲ್ಯದ 6.5 ಕೆ.ಜಿ.ಬೆಳ್ಳಿ ವಸ್ತುಗಳು, 20 ಲಕ್ಷ ರು. ಮೌಲ್ಯದ ಗೃಹೋಪಯೋಗಿ ವಸ್ತುಗಳು, 10 ಲಕ್ಷ ರು. ಬ್ಯಾಂಕ್ ಠೇವಣಿ).
8.ಬೀದರ್‌ನ ರಾಜ್ಯ ಪಶುವೈದ್ಯಕೀಯ ಮತ್ತು ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಎಚ್‌.ಡಿ.ನಾರಾಯಣಸ್ವಾಮಿ- ಸ್ಥಿರಾಸ್ತಿ ಮೌಲ್ಯ: 5.06 ಕೋಟಿ ರು. ಚರಾಸ್ತಿ ಮೌಲ್ಯ:3.84 ಕೋಟಿ ರು.(1.84 ಲಕ್ಷ ರು. ನಗದು, 27.92 ಲಕ್ಷ ರು. ಮೌಲ್ಯದ 448 ಗ್ರಾಂ ಚಿನ್ನಾಭರಣ ಹಾಗೂ ಇತರೆ).

ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ರೇಡ್‌, ಕೋಟಿ ಕೋಟಿ ಸಂಪತ್ತು ಪತ್ತೆ!

9.ಬೀದರನ್‌ ಪಶು ವೈದ್ಯಕೀಯ ಮತ್ತು ಪಶು ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯದ ಲೆಕ್ಕ ಸಹಾಯಕ(ಹೊರಗುತ್ತಿಗೆ) ಸುನೀಲ್‌ ಕುಮಾರ್‌- ಸ್ಥಿರಾಸ್ತಿ ಮೌಲ್ಯ: 50 ಲಕ್ಷ ರು. ಚರಾಸ್ತಿ ಮೌಲ್ಯ: 75 ಲಕ್ಷ ರು.
10.ಕೊಪ್ಪಳದ ಆನೆಗುಂದಿ ವಿಭಾಗದ ಡಿಆರ್‌ಎಫ್‌ಓ ಬಿ.ಮಾರುತಿ- ಸ್ಥಿರಾಸ್ತಿ ಮೌಲ್ಯ: ಶೂನ್ಯ
ಚರಾಸ್ತಿ ಮೌಲ್ಯ: 21.39 ಲಕ್ಷ ರು.(2.50 ಲಕ್ಷ ರು. ನಗದು, 11.80 ಲಕ್ಷ ರು. ಮೌಲ್ಯದ ವಾಹನಗಳು, 6.15 ಲಕ್ಷ ರು. ಮೌಲ್ಯದ 249 ಗ್ರಾಂ ಚಿನ್ನಾಭರಣ, 73 ಸಾವಿರ ರು. ಮೌಲ್ಯದ 1 ಕೆ.ಜಿ.428 ಗ್ರಾಂ ಬೆಳ್ಳಿ ವಸ್ತುಗಳು, 20 ಸಾವಿರ ರು. ಮೌಲ್ಯದ ಮದ್ಯದ ಬಾಟಲಿಗಳು)
11.ಬಳ್ಳಾರಿ ಜಿಲ್ಲೆ ಗಣಿ ಮತ್ತು ಭೂಗರ್ಭ ವಿಭಾಗದ ಹಿರಿಯ ಭೂಗರ್ಭಶಾಸ್ತ್ರಜ್ಞ ಚಂದ್ರಶೇಖರ್‌ ಹಿರೇಮನಿ- ಸ್ಥಿರಾಸ್ತಿ ಮೌಲ್ಯ: 47 ಸಾವಿರ ರು. ಚರಾಸ್ತಿ ಮೌಲ್ಯ: 10.24 ಲಕ್ಷ ರು.
12.ಯಾದಗಿರಿ ಸಿಟಿ ಮುನ್ಸಿಪಲ್ ಕೌನ್ಸಿಲ್‌ ಆಯುಕ್ತ ಶರಣಪ್ಪ- ಸ್ಥಿರಾಸ್ತಿ ಮೌಲ್ಯ: 1.45 ಕೋಟಿ ರು. ಚರಾಸ್ತಿ ಮೌಲ್ಯ: 60.35 ಲಕ್ಷ ರು.
13.ಯಾದಗಿರಿ ಜಿಲ್ಲೆ ಡಿಎಚ್‌ಒ ಡಾ.ಕೆ.ಪ್ರಭುಲಿಂಗ- ಸ್ಥಿರಾಸ್ತಿ ಮೌಲ್ಯ: 1 ಕೋಟಿ ರು. ಚರಾಸ್ತಿ ಮೌಲ್ಯ: 49 ಲಕ್ಷ ರು.

Latest Videos
Follow Us:
Download App:
  • android
  • ios