Corona, Omicron ಕರ್ನಾಟಕದಲ್ಲಿ ಕೊರೋನಾ ಜತೆಗೆ ಒಮಿಕ್ರಾನ್ ಸ್ಫೋಟ, ಇಲ್ಲಿದೆ ಜ.10ರ ಅಂಕಿ-ಸಂಖ್ಯೆ

* ರಾಜ್ಯದಲ್ಲಿ ಇಂದು(ಜ.10) ಕೊರೋನಾ ಮಹಾ ಸ್ಪೋಟ
* ಕೊರೋನಾ ಜತೆಗೆ ಒಮಿಕ್ರಾನ್ ಹೆಚ್ಚಳ
* ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

146 New Omicron and 11698 Coronavirus Cases In Karnataka On Jan 10th rbj

ಬೆಂಗಳೂರು, (ಜ.10): ರಾಜ್ಯದಲ್ಲಿ ಕೋವಿಡ್ 3ನೇ ಅಲೆ ಹೆಚ್ಚಾಗುತ್ತಿರುವ ಹೊತ್ತಲ್ಲೇ ಒಮಿಕ್ರಾನ್ (Omicron)ಸದ್ದು ಮಾಡುತ್ತಿದೆ. ಕೋವಿಡ್-19 ನ ರೂಪಾಂತರಿ ವೈರಸ್ ಹೊಸದಾಗಿ 146 ಜನರಲ್ಲಿ ಕಾಣಿಸಿಕೊಂಡಿದೆ. ಇನ್ನು ಹೊಸದಾಗಿ 11,698 ಕೋವಿಡ್ ಕೇಸ್​ಗಳು(Covid-19 Cases) ಪತ್ತೆಯಾಗಿವೆ.

ಈ ಮೂಲಕ ಒಮಿಕ್ರಾನ್ ಸೋಂಕಿತರ ಸಂಖ್ಯೆ 479ಕ್ಕೇರಿದ್ರೆ, ಕೊರೋನಾ ಸೋಂಕಿತರ(Coronavirus) ಸಂಖ್ಯೆ 3063656. ಒಟ್ಟು ಸಾವಿನ ಸಂಖ್ಯೆ 38374 ಆಗಿದ್ರೆ, ಇದುವರೆಗೂ ಕೊರೋನಾ ಮಹಾಮಾರಿಯಿಂದ ಗುಣಮುಖರಾದವರ ಸಂಖ್ಯೆ 2965105. ಸದ್ಯ 60,148 ಸಕ್ರಿಯ ಪ್ರಕರಣಗಳಿವೆ. ಇಂದು ಕೋವಿಡ್‌ ಪಾಸಿಟಿವಿಟಿ ದರ ಶೇ.7.77ಕ್ಕೆ ಏರಿದೆ.

Deltacron: ಕೋವಿಡ್‌ನ ಮತ್ತೊಂದು ರೂಪಾಂತರಿ ಪತ್ತೆ: ಬಂತು ಹೊಸ ತಳಿ ಡೆಲ್ಟಾಕ್ರೋನ್‌..!

ಬೆಂಗಳೂರಿನಲ್ಲಿ(Bengaluru) ಸೋಮವಾರ ಒಂದೇ ದಿನ 9,221 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೋನಾ ಪೀಡಿತರ ಸಂಖ್ಯೆ 13,08,540 ಕ್ಕೆ ಏರಿಕೆಯಾಗಿದೆ. 13,08,540 ಸೋಂಕಿತರ ಪೈಕಿ 12,43,155 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ 2 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ನಗರದಲ್ಲಿ ಕೊರೋನಾದಿಂದ ಈವರೆಗೆ 16,424 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 48,960 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಮಾಹಾಮಾರಿ ಸೋಂಕಿನಿಂದ 2 ಮಂದಿ ಸಾವನ್ನಪ್ಪಿದ್ದಾರೆ. ರಾಮನಗರ ಹಾಗೂ ಮೈಸೂರು ಜಿಲ್ಲೆಯಲ್ಲಿ ಕೊವಿಡ್​ನಿಂದ ಒಬ್ಬರು ಮೃತಪಟ್ಟಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಕೊರೋನಾದಿಂದ ಸಾವು ಸಂಭವಿಸಿಲ್ಲ.

ಜಿಲ್ಲಾವಾರು ಕೇಸ್
ಬಾಗಲಕೋಟೆ 7, ಬಳ್ಳಾರಿ 93, ಬೆಳಗಾವಿ 129, ಬೆಂಗಳೂರು ಗ್ರಾಮಾಂತರ 143, ಬೆಂಗಳೂರು ನಗರ 9221, ಬೀದರ್ 37, ಚಾಮರಾಜನಗರ 40, ಚಿಕ್ಕಬಳ್ಳಾಪುರ 53, ಚಿಕ್ಕಮಗಳೂರು 43, ಚಿತ್ರದುರ್ಗ 27, ದಕ್ಷಿಣ ಕನ್ನಡ 176, ದಾವಣಗೆರೆ 22, ಧಾರವಾಡ 144, ಗದಗ 16, ಹಾಸನ 171, ಹಾವೇರಿ 0, ಕಲಬುರಗಿ 88, ಕೊಡಗು 23, ಕೋಲಾರ 65, ಕೊಪ್ಪಳ 7, ಮಂಡ್ಯ 306, ಮೈಸೂರು 309, ರಾಯಚೂರು 4, ರಾಮನಗರ 8, ಶಿವಮೊಗ್ಗ 75, ತುಮಕೂರು 139, ಉಡುಪಿ 219, ಉತ್ತರ ಕನ್ನಡ 100, ವಿಜಯಪುರ 28 ಹಾಗೂ ಯಾದಗಿರಿಯಲ್ಲಿ 5 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಕಳೆದೆರಡು ಕೋವಿಡ್‌ ಅಲೆಗಳ (Covid 19) ವೇಳೆ ಲಾಕ್‌ಡೌನ್‌ ಸಮಯದಲ್ಲಿ ದೇಶಾದ್ಯಂತ ಮಹಾನಗರಗಳಿಂದ ತಮ್ಮ ಊರುಗಳಿಗೆ ಭಾರಿ ಪ್ರಮಾಣದಲ್ಲಿ ಮರುವಲಸೆ ಹೋಗಿದ್ದ ಕಾರ್ಮಿಕರು (Migrant Workers) ಮತ್ತೆ ಈಗ ಲಾಕ್‌ಡೌನ್‌ ಭೀತಿಯಿಂದ ಊರುಗಳಿಗೆ ಮರಳತೊಡಗಿದ್ದಾರೆ. ವಿಶೇಷವಾಗಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಕೋವಿಡ್‌ ನಿಯಂತ್ರಣಕ್ಕೆ ವೀಕೆಂಡ್‌ ಕರ್ಫ್ಯೂ ವಿಧಿಸುತ್ತಿದ್ದಂತೆ ಇದು ಕ್ರಮೇಣ ಲಾಕ್‌ಡೌನ್‌ ಆಗಿ ಬದಲಾಗಬಹುದು ಎಂಬ ಭೀತಿಯಿಂದ ಕಾರ್ಮಿಕರು ಗುಳೆ ಆರಂಭಿಸಿದ್ದಾರೆ.

ಕೋವಿಡ್‌ನ ಮತ್ತೊಂದು ರೂಪಾಂತರಿ ಪತ್ತೆ
ಜಗತ್ತು ಡೆಲ್ಟಾ ಹಾಗೂ ಒಮಿಕ್ರೋನ್‌(Omicron) ಕೋವಿಡ್‌ ತಳಿಗಳ ಹಾವಳಿಯಿಂದ ತತ್ತರಿಸುತ್ತಿರುವಾಗಲೇ ಕೊರೋನಾ ವೈರಸ್‌ನ ಮತ್ತೊಂದು ರೂಪಾಂತರಿ ತಳಿ ‘ಡೆಲ್ಟಾಕ್ರೋನ್‌’(Deltacron) ಪತ್ತೆಯಾಗಿದೆ. ಯುರೋಪ್‌(Europe) ಖಂಡದ ದ್ವೀಪ ದೇಶ ಸೈಪ್ರಸ್‌ ವಿಜ್ಞಾನಿಗಳು(Cyprus Scientists) ಈ ಹೊಸ ತಳಿ ಪತ್ತೆ ಹಚ್ಚಿದ್ದಾರೆ. ಈ ವೈರಸ್‌ನಲ್ಲಿ ಡೆಲ್ಟಾಮತ್ತು ಒಮಿಕ್ರೋನ್‌ ಎರಡೂ ತಳಿಗಳ ಕೆಲ ಗುಣಗಳಿವೆ.

ಸೈಪ್ರಸ್‌ನಲ್ಲಿ ಕೋವಿಡ್‌ ದೃಢಪಟ್ಟ 25 ರೋಗಿಗಳ ಜೀನೋಮಿಕ್‌ ಸೀಕ್ವೆನ್ಸಿಂಗ್‌ ನಡೆಸಿದಾಗ ಅವರ ಪೈಕಿ ಕೆಲವರಲ್ಲಿ ಡೆಲ್ಟಾಮತ್ತು ಒಮಿಕ್ರೋನ್‌ ರೂಪಾಂತರಿ ತಳಿಗಳ ಒಂದಷ್ಟು ಗುಣಗಳ ಮಿಶ್ರಣವಿರುವ ವೈರಸ್‌ ಪತ್ತೆಯಾಗಿದೆ. ಇದಕ್ಕೆ ‘ಡೆಲ್ಟಾಕ್ರೋನ್‌’ ಎಂದು ವಿಜ್ಞಾನಿಗಳು ಕರೆದಿದ್ದಾರಾದರೂ, ಅಧಿಕೃತವಾಗಿ ಇನ್ನೂ ಹೆಸರು ಇಟ್ಟಿಲ್ಲ. ಇನ್ನು, ತಕ್ಷಣಕ್ಕೆ ಈ ರೂಪಾಂತರಿ ತಳಿಯ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಈ ಕುರಿತು ಅಧ್ಯಯನ ನಡೆಸಿದ ಸೈಪ್ರಸ್‌ ವಿಶ್ವವಿದ್ಯಾಲಯದ ತಜ್ಞರು ಹೇಳಿದ್ದಾರೆ.

Latest Videos
Follow Us:
Download App:
  • android
  • ios