Asianet Suvarna News Asianet Suvarna News

Covid Crisis: ಕರ್ನಾಟಕದಲ್ಲಿ ಮತ್ತಷ್ಟು ತಗ್ಗಿದ ಕೊರೋನಾ: 145 ಜನರಿಗೆ ಸೋಂಕು

*  392 ಮಂದಿ ಚೇತರಿಕೆ 
*  41,097 ಮಂದಿಗೆ ಕೋವಿಡ್‌ ಪರೀಕ್ಷೆ
*  ಪಾಸಿಟಿವಿಟಿ ದರ ಶೇ.0.35ರಷ್ಟು ದಾಖಲು
 

145 New Covid Cases on March 16th in Karnataka grg
Author
First Published Mar 17, 2022, 8:00 AM IST

ಬೆಂಗಳೂರು(ಮಾ.17): ರಾಜ್ಯದಲ್ಲಿ(Karnataka) ಬುಧವಾರ 145 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದೆ. ಇಬ್ಬರು ಮೃತರಾಗಿದ್ದಾರೆ. 392 ಮಂದಿ ಚೇತರಿಸಿಕೊಂಡಿದ್ದಾರೆ. 41,097 ಕೋವಿಡ್‌ ಪರೀಕ್ಷೆ(Covid Test) ನಡೆದಿದ್ದು, ಪಾಸಿಟಿವಿಟಿ ದರ ಶೇ.0.35ರಷ್ಟು ವರದಿಯಾಗಿದೆ. 

ಬೆಂಗಳೂರು ನಗರದಲ್ಲಿ 97, ಮೈಸೂರಲ್ಲಿ 17 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೀದರ್‌, ದಾವಣಗೆರೆ, ಗದಗ, ಕೊಡಗು, ಕೋಲಾರ, ಕೊಪ್ಪಳ, ಮಂಡ್ಯ, ರಾಯಚೂರು, ಉಡುಪಿ, ಉತ್ತರ ಕನ್ನಡ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ಪತ್ತೆಯಾಗಿಲ್ಲ. ಉಳಿದ ಜಿಲ್ಲೆಗಳಲ್ಲಿ ಬೆರಳೆಣಿಕೆಯ ಪ್ರಕರಣ ದಾಖಲಾಗಿದೆ. ಬೆಂಗಳೂರು ನಗರದಲ್ಲಿ ಮಾತ್ರ ಸಾವಿನ ವರದಿಯಾಗಿದೆ. ರಾಜ್ಯದಲ್ಲಿ ಬುಧವಾರ 70,321 ಮಂದಿ ಕೋವಿಡ್‌-19 ಲಸಿಕೆ(Covid-19 Vaccine) ಪಡೆದಿದ್ದಾರೆ.

Coronavirus:  ಕಳೆದ ವಾರ ಜಗತ್ತಿನಾದ್ಯಂತ 1.1 ಕೋಟಿ ಹೊಸ  ಪ್ರಕರಣ, ಮತ್ತೊಂದು ಎಚ್ಚರಿಕೆ ಕೊಟ್ಟ WHO

100ರ ಒಳಗೆ ಇಳಿದ ಕೊರೋನಾ ಕೇಸ್‌

ಬೆಂಗಳೂರು(Bengaluru) ನಗರಲ್ಲಿ ಬುಧವಾರ 97 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇಬ್ಬರು ಮರಣವನ್ನಪ್ಪಿದ್ದಾರೆ.(Death) 280 ಮಂದಿ ಚೇತರಿಸಿಕೊಂಡಿದ್ದಾರೆ. 1,738 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 46 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

13,019 ಮಂದಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದಾರೆ. ಮಹಾದೇವಪುರ (ಶೇ.1.78), ಬೊಮ್ಮನಹಳ್ಳಿ (ಶೇ.1.43) ವಲಯದಲ್ಲಿ ಪಾಸಿಟಿವಿಟಿ ದರ ಶೇ.1ಕ್ಕಿಂತ ಹೆಚ್ಚಿದೆ. ಬೆಂಗಳೂರು ಪಶ್ಚಿಮ ವಲಯ (ಶೇ.0.37) ಕನಿಷ್ಟಪಾಸಿಟಿವಿಟಿ ದರ ಇದೆ. ಬೊಮ್ಮನಹಳ್ಳಿ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ದಕ್ಷಿಣದಲ್ಲಿ ತಲಾ ಒಂದು ಕಂಟೈನ್ಮೆಂಟ್‌ ವಲಯವಿದೆ.

ಲಸಿಕೆ ಅಭಿಯಾನ

912 ಮಂದಿ ಮೊದಲ ಡೋಸ್‌, 10, 684 ಮಂದಿ ಎರಡನೇ ಡೋಸ್‌ ಮತ್ತು 1,273 ಮಂದಿ ಮುನ್ನೆಚ್ಚರಿಕೆ ಡೋಸ್‌ ಸ್ವೀಕರಿಸಿದ್ದಾರೆ. ನಗರದಲ್ಲಿ ಈವರೆಗೆ ಒಟ್ಟು 1.81 ಕೋಟಿ ಡೋಸ್‌ ಲಸಿಕೆ(Vaccine) ನೀಡಲಾಗಿದೆ.

ಚೀನಾ ಸೇರಿ 6 ದೇಶಗಳಲ್ಲಿ ಮತ್ತೆ ಕೊರೋನಾ ಆರ್ಭಟ

ಬೀಜಿಂಗ್‌/ಸೋಲ್‌: ಕಳೆದ 2 ತಿಂಗಳು ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳನ್ನು ಕಾಡಿದ್ದ ಮಾರಕ ಒಮಿಕ್ರೋನ್‌ ರೂಪಾಂತರಿ ವೈರಸ್‌ ಇದೀಗ ಚೀನಾ ಮತ್ತು ದಕ್ಷಿಣಾ ಕೊರಿಯಾ ದೇಶಗಳನ್ನು ಮತ್ತಷ್ಟುಆವರಿಸಿಕೊಂಡಿದ್ದು ಭಾರೀ ಸೋಂಕು, ಸಾವಿಗೆ ಕಾರಣವಾಗಿದೆ. ಚೀನಾದಲ್ಲಿ ಮಂಗಳವಾರ 5280 ಹೊಸ ಕೇಸು ದೃಢಪಟ್ಟಿದೆ. ಇದು ಸೋಮವಾರ ದಾಖಲಾಗಿದ್ದ ಪ್ರಮಾಣಕ್ಕಿಂತ ದ್ವಿಗುಣ. ಸೋಂಕು ನಿಗ್ರಹ ವಿಷಯದಲ್ಲಿ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿ ಪ್ರದರ್ಶಿಸುತ್ತಿದ್ದರೂ, ಹೊಸ ಪ್ರಕರಣಗಳ ಮೇಲೆ ನಿಯಂತ್ರಣ ಸಾಧ್ಯವಾಗದೇ ಇರುವುದು ಸರ್ಕಾರವನ್ನು ಆತಂಕಕ್ಕೆ ಗುರಿ ಮಾಡಿದೆ. 

Covid Vaccine: ಇಂದಿನಿಂದ 12-14 ವರ್ಷದ ಮಕ್ಕಳಿಗೆ ಕೋವಿಡ್‌ ಲಸಿಕೆ

ಅದರಲ್ಲೂ ಸ್ಥಳೀಯವಾಗಿ ಹಬ್ಬುತ್ತಿರುವ ಪ್ರಕರಣಗಳೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ 13 ನಗರಗಳನ್ನು ಪೂರ್ಣ ಲಾಕ್ಡೌನ್‌ಗೆ ಒಳಪಡಿಸಲಾಗಿದೆ. ಹೀಗೆ ಲಾಕ್ಡೌನ್‌ಗೆ ಒಳಪಟ್ಟನಾಗರಿಕರ ಸಂಖ್ಯೆ 3 ಕೋಟಿಯಷ್ಟಿದೆ. ಇದಲ್ಲದೇ ಹಲವು ನಗರಗಳನ್ನು ಭಾಗಶಃ ನಿರ್ಬಂಧಕ್ಕೆ ಒಳಪಡಿಸಲಾಗಿದ್ದು, ಸೀಮಿತ ಕಾರ್ಯಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಚೀನಾದಲ್ಲಿ 2019ರಲ್ಲಿ ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡ ಬಳಿಕ ಇದುವರೆಗೂ 1.16 ಲಕ್ಷ ಜನರಿಗೆ ಸೋಂಕು ತಗುಲಿದೆ, 3636 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಹೇಳಿಕೊಂಡಿದೆ.

ಕೊರಿಯಾದಲ್ಲೂ ಆತಂಕ: 

ಈ ನಡುವೆ ದಕ್ಷಿಣ ಕೊರಿಯಾದಲ್ಲಿ ಮಂಗಳವಾರ 3.62 ಲಕ್ಷ ಹೊಸ ಕೇಸು ದೃಢಪಟ್ಟಿದ್ದು, ದಾಖಲೆಯ 293 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕು ಮತ್ತು ಸಾವು ಎರಡೂ ಈವರೆಗಿನ ಗರಿಷ್ಠ ಪ್ರಮಾಣವಾಗಿದೆ. ಜೊತೆಗೆ ದೇಶದಲ್ಲಿ ಹೊಸ ಸೋಂಕಿನ ಪ್ರಮಾಣವು ಸತತ 5 ದಿನಗಳಿಂದ 3 ಲಕ್ಷಕ್ಕಿಂತ ಹೆಚ್ಚೇ ದಾಖಲಾಗುತ್ತಿದೆ.

ಇತರೆಡೆ: 

ಉಳಿದಂತೆ ಮಂಗಳವಾರ ಅತಿ ಹೆಚ್ಚು ಪ್ರಕರಣ ದಾಖಲಾದ ದೇಶಗಳೆಂದರೆ ವಿಯೆಟ್ನಾಂ 1.61 ಲಕ್ಷ, ಜರ್ಮನಿ 1.01 ಲಕ್ಷ, ಬ್ರಿಟನ್‌ 47181, ನೆದರ್‌ಲೆಂಡ್‌ 45892, ರಷ್ಯಾ 41055, ಆಸ್ಟ್ರಿಯಾ 37125, ಜಪಾನ್‌ 35846, ಆಸ್ಪ್ರೇಲಿಯಾ 34047ದಲ್ಲಿ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios