6 ತಿಂಗಳಲ್ಲಿ 14 ಲೇನ್‌ ಬೆಂಗ್ಳೂರು-ಮುಂಬೈ ರಸ್ತೆ ಕೆಲಸ ಶುರು: ಕೇಂದ್ರ ಸಚಿವ ನಿತಿನ್ ಗಡ್ಕರಿ

ಮುಂಬೈನ ಅಟಲ್ ಸೇತುವೆಯಿಂದ ಈ ಹೊಸ ರಸ್ತೆ ಶುರುವಾಗಲಿದ್ದು, ಪುಣೆ ರಿಂಗ್ ರಸ್ತೆ ಮೂಲಕ ಸಾಗುತ್ತದೆ. ಜತೆಗೆ ಛತ್ರಪತಿ ಸಂಭಾಜಿನಗರವನ್ನು ಹಾದು ಹೋಗುತ್ತದೆ. ಇದು ಹಾಲಿ ರಸ್ತೆಗೆ ಬದಲಿಯಾಗಲಿದೆ. ಈ ರಸ್ತೆ ನಿರ್ಮಾಣದಿಂದ ಹಾಲಿ ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇನ ಶೇ.50 ರಷ್ಟು ವಾಹನಗಳು ಹೊಸ ಹೆದ್ದಾರಿಗೆ ವರ್ಗಾವಣೆಯಾಗಲಿವೆ' ಎಂದ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ 

14 lane Bengaluru Mumbai road work will be start in 6 months says Union Minister Nitin Gadkari grg

ಪುಣೆ(ಸೆ.17): ಹಾಲಿ ಇರುವ ಮುಂಬೈ - ಬೆಂಗಳೂರು ಹೆದ್ದಾರಿ ಈಗಾಗಲೇ ದಟ್ಟಣೆಯಿಂದ ಕೂಡಿದೆ.ಹೀಗಾಗಿ ಉಭಯ ನಗರಗಳ ನಡುವೆ ಹೊಸ 14 ಪಥದ ಎಕ್ ಪ್ರೆಸ್ ವೇ ನಿರ್ಮಿಸಲಾಗುವುದು. ಟೆಂಡ‌ರ್ ಪ್ರಕ್ರಿಯೆ ಆರಂಭಿಸಲಾಗಿದ್ದು, 6 ತಿಂಗಳಲ್ಲಿ ಕಾಮಗಾರಿ ಆರಂಭ ಆಗುವ ನಿರೀಕ್ಷೆ ಇದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಇಲ್ಲಿನ ಕಾಠ್ಯಕ್ರಮದಲ್ಲಿ ಮಾತನಾಡಿದ ಅವರು, 'ಮುಂಬೈನ ಅಟಲ್ ಸೇತುವೆಯಿಂದ ಈ ಹೊಸ ರಸ್ತೆ ಶುರುವಾಗಲಿದ್ದು, ಪುಣೆ ರಿಂಗ್ ರಸ್ತೆ ಮೂಲಕ ಸಾಗುತ್ತದೆ. ಜತೆಗೆ ಛತ್ರಪತಿ ಸಂಭಾಜಿನಗರವನ್ನು ಹಾದು ಹೋಗುತ್ತದೆ. ಇದು ಹಾಲಿ ರಸ್ತೆಗೆ ಬದಲಿಯಾಗಲಿದೆ. ಈ ರಸ್ತೆ ನಿರ್ಮಾಣದಿಂದ ಹಾಲಿ ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇನ ಶೇ.50 ರಷ್ಟು ವಾಹನಗಳು ಹೊಸ ಹೆದ್ದಾರಿಗೆ ವರ್ಗಾವಣೆಯಾಗಲಿವೆ' ಎಂದರು. 'ಇದರ ಟೆಂಡರ್‌ ಆಹ್ವಾನ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು, ಮುಂದಿನ 6 ತಿಂಗಳಿನಲ್ಲಿ ಕೆಲಸ ಶುರುವಾಗಲಿದೆ' ಎಂದು ಸಚಿವರು ಹೇಳಿದರು.

ಪಿಎಂ ಹುದ್ದೆಗೆ ಸ್ಪರ್ಧಿಸಿದರೆ ಬೆಂಬಲಿಸುವುದಾಗಿ ಹೇಳಿದ್ರು, ಆದರೆ ... :ನಿತಿನ್ ಗಡ್ಕರಿ ಹೇಳಿದ್ದೇನು?

ಬೆಂಗಳೂರು-ಮುಂಬೈ 14 ಪಥದ ಪ್ರಸ್ತಾವನೆ ರಾಜ್ಯದ ಬಳಿ ಇಲ್ಲ 

ಬೆಂಗಳೂರು: ಬೆಂಗಳೂರು-ಮುಂಬೈ ನಡುವೆ 14 ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾವನೆಯಿಲ್ಲ. ಸದ್ಯ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಮಸ್ಯೆಗಳನ್ನು ಸರಿಪಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಲಾಸ್ ಪಿ. ಬ್ರಹ್ಮಂಕರ್ ತಿಳಿಸಿದ್ದಾರೆ. ಬೆಂಗಳೂರು-ಪುಣೆ ನಡುವೆ ಹೊಸದಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಕೆಲಸ ಮಾಡುತ್ತಿದೆ. ಈ ಹೆದ್ದಾರಿ ನಿರ್ಮಾಣಕ್ಕೆ ವಿವರವಾದ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದ್ದು, ಯಾವ ಮಾರ್ಗದಲ್ಲಿ ಹೆದ್ದಾರಿ ಸಾಗಬೇಕು ಎಂಬುದನ್ನು ಆನಂತರನಿರ್ಧರಿಸಲಾಗುವುದು. ಅದನ್ನು ಹೊರತುಪಡಿಸಿ ಬೆಂಗಳೂರು-ಮುಂಬೈ ನಡುವೆ 14 ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಯಾವುದೇ ಪ್ರಸ್ತಾವನೆನಮ್ಮಮುಂದಿಲ್ಲ. ಆದರೆ, ಹೆದ್ದಾರಿಸಾಗುವಮಾರ್ಗದಲ್ಲಿನ ಸಮಸ್ಯೆಗಳ ನಿವಾರಣಾ ಕಾರ್ಯ ನಡೆಸಲಾಗುತ್ತಿದೆಯಷ್ಟೇ ಎಂದು ಮಾಹಿತಿ ನೀಡಿದರು.

ಇದಾವ ಮಾರ್ಗ? 

ಗಡ್ಕರಿ ಹೇಳಿದ 14 ಲೇನ್‌ ಎಕ್ಸ್‌ಪ್ರೆಸ್ ವೇ ಯಾವ ಮಾರ್ಗದಲ್ಲಿ ಸಾಗಲಿದೆ ಎಂಬುದು ಸ್ಪಷ್ಟವಾಗಿಲ್ಲ. ಏಕೆಂದರೆ ಪ್ರಸ್ತುತಬೆಂಗಳೂರಿನಿಂದಮುಂಬೈಗೆ ಸಂಪರ್ಕಿಸಲು 2 ಮಾರ್ಗಗಳಿವೆ. ಒಂದು ಬೆಂಗಳೂರು-ಹುಬ್ಬಳ್ಳಿ- ಬೆಳಗಾವಿ-ಪುಣೆ-ಮುಂಬೈ ಮಾರ್ಗ, ಇದು 986 ಕಿ.ಮೀ. ಉದ್ದದ ಎನ್ ಎಚ್ 48. ಇನ್ನೊಂದು ಮಾರ್ಗ ಬೆಂಗಳೂರು-ತುಮಕೂರು-ಚಿತ್ರದುರ್ಗ-ವಿಜಯನಗರ-ಬಾಗಲಕೋಟೆ ಮೂಲಕ ಹಾಯ್ದು ಮಹಾರಾಷ್ಟ್ರ ಸೇರುತ್ತದೆ. ಇದು 900 ಕಿ.ಮೀ.ಇದೆ.

Latest Videos
Follow Us:
Download App:
  • android
  • ios