Asianet Suvarna News Asianet Suvarna News

ಪಿಎಂ ಹುದ್ದೆಗೆ ಸ್ಪರ್ಧಿಸಿದರೆ ಬೆಂಬಲಿಸುವುದಾಗಿ ಹೇಳಿದ್ರು, ಆದರೆ ... :ನಿತಿನ್ ಗಡ್ಕರಿ ಹೇಳಿದ್ದೇನು?

ಪ್ರಧಾನಿ ಹುದ್ದೆಗೆ ಸ್ಪರ್ಧೆ ನೀಡಿದರೆ ಬೆಂಬಲಿಸುವುದಾಗಿ ರಾಜಕೀಯ ನಾಯಕರೊಬ್ಬರು ನನಗೆ ಹೇಳಿದರು. ಆದರೆ ಪ್ರಧಾನಿಯಾಗುವ ಮಹತ್ವಾಕಾಂಕ್ಷೆಯನ್ನು ನಾನು ಹೊಂದಿಲ್ಲ ಎಂದು ಹೇಳಿ ನಾನು ಅವರ ಬೆಂಬಲವನ್ನು ನಿರಾಕರಿಸಿದೆ ಎಂದು ಬಿಜೆಪಿ ನಾಯಕ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

Nitin Gadkari said A leader told him that if he contest PM post he will support akb
Author
First Published Sep 15, 2024, 9:51 AM IST | Last Updated Sep 16, 2024, 8:00 AM IST

ನಾಗಪುರ: ಪ್ರಧಾನಿ ಹುದ್ದೆಗೆ ಸ್ಪರ್ಧೆ ನೀಡಿದರೆ ಬೆಂಬಲಿಸುವುದಾಗಿ ರಾಜಕೀಯ ನಾಯಕರೊಬ್ಬರು ನನಗೆ ಹೇಳಿದರು. ಆದರೆ ಪ್ರಧಾನಿಯಾಗುವ ಮಹತ್ವಾಕಾಂಕ್ಷೆಯನ್ನು ನಾನು ಹೊಂದಿಲ್ಲ ಎಂದು ಹೇಳಿ ನಾನು ಅವರ ಬೆಂಬಲವನ್ನು ನಿರಾಕರಿಸಿದೆ ಎಂದು ಬಿಜೆಪಿ ನಾಯಕ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಶನಿವಾರ ನಾಗ್ಪುರದಲ್ಲಿ ನಡೆದ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಸಚಿವರು, ಬೆಂಬಲಿಸಿದ ನಾಯಕನ ಹೆಸರು ಹೇಳದೇ ಈ ವಿಚಾರ ತಿಳಿಸಿದರು. 

ನಾನು ಒಂದು ಘಟನೆಯನ್ನು ನೆನೆಪಿಸಿಕೊಳ್ಳುತ್ತಿದ್ದೇನೆ, ನಾನು ಅವರ ಹೆಸರನ್ನು ಹೇಳಲಿಚ್ಚಿಸುವುದಿಲ್ಲ, ಆ ವ್ಯಕ್ತಿ, ನೀವು ಪ್ರಧಾನಿಯಾಗಲು ಬಯಸಿದರೆ ನಾವು ನಿಮಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದರು. ಆದರೆ ನಾನು ಅವರ ಬಳಿಯೇ ಮರು ಪ್ರಶ್ನೆ ಮಾಡಿದೆ. ನೀವು ಏಕೆ ನನಗೆ ಬೆಂಬಲಿಸುತ್ತಿದ್ದೀರಿ? ಹಾಗೂ ನಾನು ಏಕೆ ನಿಮ್ಮ ಬೆಂಬಲವನ್ನು ಪಡೆಯಬೇಕು? ಪ್ರಧಾನಿಯಾಗುವುದು ನನ್ನ ಜೀವನದ ಉದ್ದೇಶ ಅಲ್ಲ, ನಾನು ನನ್ನ ನಂಬಿಕೆ ಹಾಗೂ ಸಂಘಟನೆಗೆ ನಿಷ್ಠನಾಗಿದ್ದೇನೆ ಹಾಗೂ ನಾನು ಯಾವುದೇ ದೊಡ್ಡ ಹುದ್ದೆಗಾಗಿ ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ, ಏಕೆಂದರೆ ನನ್ನ ನಂಬಿಕೆಯೇ ನನ್ನ ದೊಡ್ಡ ಆದ್ಯತೆಯಾಗಿದೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ. 

ಪರಿಸರದ ರಕ್ಷಣೆ, ಭವಿಷ್ಯಕ್ಕಾಗಿ ಹಸಿರು ಇಂಧನ ಬಳಸಿ: ಸಚಿವ ನಿತಿನ್ ಗಡ್ಕರಿ

ಇದೇ ಕಾರ್ಯಕ್ರಮದಲ್ಲಿ ಅವರು ರಾಜಕೀಯ ಹಾಗೂ ಪತ್ರಿಕೋದ್ಯಮ ಈ ಎರಡರಲ್ಲೂ ನೈತಿಕತೆಯ ಮಹತ್ವದ ಬಗ್ಗೆ ಒತ್ತಿ ಹೇಳಿದರು. ಹಿರಿಯ ಸಿಪಿಐ ನಾಯಕರೊಬ್ಬರ ಜೊತೆಗಿನ ಭೇಟಿಯನ್ನು ಇದೇ ವೇಳೆ ನನೆಪು ಮಾಡಿಕೊಂಡ ನಿತಿನ್ ಗಡ್ಕರಿ ಸಿಪಿಐಎಂ ನಾಯಕ ದಿವಂಗತ ಎ.ಬಿ ಬರ್ಧನ್ ಅವರು ನಾಗ್ಪುರ ಹಾಗೂ ವಿದರ್ಭದ ಉನ್ನತ ನಾಯಕರಲ್ಲಿ ಒಬ್ಬರು ಎಂದು ಹೇಳಿದರು. ಆದರೆ ಬರ್ಧನ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರೋಧಿಯಾಗಿದ್ದರು ಎಂದು ಬೇರೊಬ್ಬ ನಾಯಕರು ಗಡ್ಕರಿ ಹೇಳಿಕೆಗೆ ಅಚ್ಚರಿ ವ್ಯಕ್ತಪಡಿಸಿದಾಗ ಪ್ರತಿಕ್ರಿಯಿಸಿದ ಗಡ್ಕರಿ, ಪ್ರಾಮಾಣಿಕವಾಗಿ ವಿರೋಧಿಸುವವರನ್ನು ಗೌರವಿಸಬೇಕು ಎಂದರು. 

ಪ್ರಾಮಾಣಿಕತೆಯಿಂದ ವಿರೋಧಿಸುವ ವ್ಯಕ್ತಿಯನ್ನು ಗೌರವಿಸಬೇಕು ಎಂದು ನಾನು ಹೇಳುತ್ತೇನೆ, ಏಕೆಂದರೆ ಅವರ ವಿರೋಧದಲ್ಲಿ ಪ್ರಾಮಾಣಿಕತೆ ಇರುತ್ತದೆ. ಆದರೆ ಅಪ್ರಾಮಾಣಿಕತೆ ಇಲ್ಲದೇ ವಿರೋಧಿಸುವವನು ಯಾವುದೇ ಗೌರವಕ್ಕೆ ಅರ್ಹನಲ್ಲ ಎಂದು ನಿತಿನ್ ಗಡ್ಕರಿ ಹೇಳಿದರು.  ಎಬಿ ಬರ್ಧನ್ ಅವರು ತಮ್ಮ ಸಿದ್ಧಾಂತಗಳಿಗೆ ನಿಷ್ಠರಾಗಿದ್ದರು. ಆದರೆ ರಾಜಕೀಯದಲ್ಲಿ ಹಾಗೂ ಪತ್ರಿಕೋದ್ಯಮದಲ್ಲಿ ಈಗ ಅಂತಹ ನಿಷ್ಠಾವಂತ ಜನರ ಕೊರತೆ ಕಾಣಿಸುತ್ತಿದೆ ಎಂದ ಗಡ್ಕರಿ ಈ ಎರಡು ಕ್ಷೇತ್ರಗಳಲ್ಲಿ ನಿಷ್ಠಾವಂತ ಜನರು ಎಷ್ಟು ಅಗತ್ಯ ಹಾಗೂ ನೈತಿಕತೆಯನ್ನು ಅನುಸರಿಸುವುದು ಎಷ್ಟು ಮಹತ್ವದು ಎಂಬುದನ್ನು ಒತ್ತಿ ಹೇಳಿದರು.

ಹಳೆ ವಾಹನ ಗುಜರಿಗೆ ಹಾಕಿದರೆ, ಹೊಸದಕ್ಕೆ ಶೇ.3ವರೆಗೆ ಡಿಸ್ಕೌಂಟ್‌

ನ್ಯಾಯಾಂಗ ಕಾರ್ಯಾಂಗ, ಶಾಸಕಾಂಗ, ಹಾಗೂ ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಈ ನಾಲ್ಕು ಅಂಗಗಳು ಸಧೃಡವಾಗಿದ್ದರೆ ಮಾತ್ರ  ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ ಎಂದು ಗಡ್ಕರಿ ಹೇಳಿದರು. ಅಂದಹಾಗೆ 2024ರ ಲೋಕಸಭಾ ಚುನಾವಣೆ ಫಲಿತಾಂಶ ಬಂದ ನಂತರ ಗಡ್ಕರಿ ಅವರನ್ನು ಪ್ರಧಾನಿ ಮಾಡಲಾಗುತ್ತದೆ ಎಂಬ ಊಹಾಪೋಹಾಗಳು ಅಂದು ಹಬ್ಬಿದ್ದವು

Latest Videos
Follow Us:
Download App:
  • android
  • ios