ಕರ್ನಾಟಕದಲ್ಲಿ ಮತ್ತಷ್ಟು ತಗ್ಗಿದ ಕೊರೋನಾ, ಪಾಸಿಟಿವಿಟಿ ದರದಲ್ಲಿ ಭಾರೀ ಇಳಿಕೆ

* ಕರ್ನಾಟಕದಲ್ಲಿ ಕೊರೋನಾ ಕೇಸ್ ಮತ್ತಷ್ಟು ಕಡಿಮೆ
*  ಇಳಿದ ಕೊರೋನಾ ಪಾಸಿಟಿವಿಟಿ ದರ
*  ರಾಜ್ಯದಲ್ಲಿ ಶೇ.9.69ಕ್ಕೆ ಕೊರೋನಾ ಪಾಸಿಟಿವಿಟಿ ದರ ಇಳಿಕೆ

13800 new cases in Karnataka On June 5th positivity rate falls below 10 Percent rbj

ಬೆಂಗಳೂರು, (ಜೂನ್.05): ಕರ್ನಾಟಕದಲ್ಲಿ ಇಂದು (ಶನಿವಾರ) ಮತ್ತಷ್ಟು ಕೊರೋನಾ ಇಳಿಮುಖವಾಗಿದ್ದು,  ರಾಜ್ಯದಲ್ಲಿ ಶೇ.9.69ಕ್ಕೆ ಕೊರೋನಾ ಪಾಸಿಟಿವಿಟಿ ದರ ಇಳಿಕೆಯಾಗಿದೆ

ರಾಜ್ಯದಲ್ಲಿ ಶನಿವಾರ 1,42, 291 ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದ್ದು, ಇದರಲ್ಲಿ 13,800 ಜನರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಇನ್ನು ಕಳೆದ 24 ಗಂಟೆಗಳಲ್ಲಿ 365 ಮಂದಿ ಸಾವನ್ನಪ್ಪಿದ್ದು, ಬರೋಬ್ಬರಿ  25,346 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಪಾಸಿಟಿವಿಟಿ, ಮರಣ ಪ್ರಮಾಣ ಇಳಿಸಿ: ಸಿಎಂ ಯಡಿಯೂರಪ್ಪ

ಈ ಮೂಲಕ  ಒಟ್ಟು ಸೋಂಕಿತರ ಸಂಖ್ಯೆ 26,83,314ಕ್ಕೆ ಏರಿಕೆಯಾಗಿದ್ರೆ, ಇದುವರೆಗೆ ಮೃತಪಟ್ಟವರ ಸಂಖ್ಯೆ 31.260ಕ್ಕೇರಿದೆ. ಈವರೆಗೆ 23,83,758 ಜನ ಗುಣಮುಖರಾಗಿದ್ದಾರೆ. ಇದರೊಂದಿಗೆ ಪ್ರಸ್ತುತ 2,68,275 ಸಕ್ರಿಯ ಪ್ರಕರಣಗಳು ಇವೆ. 

ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಕೂಡ ಕೊರೋನಾ ಇಳಿಮುಖವಾಗಿದ್ದು, ಇಂದು 2686 ಜನರಿಗೆ ಸೋಂಕು ತಗುಲಿದೆ. 206 ಮಂದಿ ಸಾವನ್ನಪ್ಪಿದ್ದಾರೆ.

Latest Videos
Follow Us:
Download App:
  • android
  • ios