ಬೆಂಗಳೂರು, (ಡಿ.01): ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1330 ಹೊಸ ಕೊರೋನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ನಿನ್ನೆಗಿಂತ (ಸೋಮವಾರ) ಇಂದು (ಮಂಗಳವಾರ) ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಮಟ್ಟಗೆ  ಏರಿಕೆಯಾಗಿದೆ. 

ನ.30ರಂದು ಕರ್ನಾಟಕದಲ್ಲಿ ಒಂದೇ ದಿನ ಕೇವಲ 998 ಕೊರೋನಾ ಕೇಸ್ ಪತ್ತೆಯಾಗಿದ್ದವು. ಆದ್ರೆ, ಡಿ.1ರಂದು 1330 ದೃಢಪಟ್ಟಿವೆ. ಈ ಮೂಲಕ ಕೊರೋನಾ ಸೊಂಕಿತರ ಸಂಖ್ಯೆ 886227ಕ್ಕೇರಿದೆ. 

ಇನ್ನು ಇಂದು 886 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.  ಇದರಿಂದಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 850707ಕ್ಕೆ ಏರಿಕೆಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 23709 ಆಗಿದೆ.

ಕಳೆದ 4 ತಿಂಗಳಿನಲ್ಲಿ ಅತಿ ಕಡಿಮೆ ಕೊರೋನಾ.. ಇಳಿಕೆಯಾಗಿದ್ದೆಷ್ಟು? 

ಸೋಂಕಿನಿಂದ ಮಂಗಳವಾರ 14 ಮಂದಿ ಸಾವನ್ನಪ್ಪಿದ್ದು, ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 11792 ಆಗಿದೆ. ಕೋವಿಡ್-19 ಖಚಿತ ಪ್ರಕರಣಗಳ ಒಟ್ಟು ಸಂಖ್ಯೆ 886227 ಆಗಿದೆ.

ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಶೇಕಡಾವಾರು ಪ್ರಮಾಣ ಶೇ.1. 05 ಆಗಿದೆ. ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ ಶೇ.1.40 ಆಗಿದೆ.