ಬನ್ನೇರುಘಟ್ಟ ಉದ್ಯಾನವನದಲ್ಲಿ ಚಿರತೆ ಬಳಿಕ ಈಗ 13 ಜಿಂಕೆಗಳ ಸಾವು: ಪ್ರಾಣಿ ಪ್ರಿಯರ ಆಕ್ರೋಶ
ಬನ್ನೇರುಘಟ್ಟ ಜೈವಿಕ ಉದ್ಯಾನ ವನದಲ್ಲಿ ಬೆಕ್ಕಿನಿಂದ ಹರಡುವ ಮಾರಕ ಫೆಲೈನ್ ಫ್ಯಾನ್ ಲ್ಯುಕೋಪೆನಿಯಾ ಎಂಬ ವೈರಸ್ ಕಾಣಿಸಿಕೊಂಡು 7 ಚಿರತೆ ಮರಿಗಳ ಸಾವಿಗೀಡಾದ ಬೆನ್ನಲ್ಲೇ ಜಂತು ಹುಳುಗಳಿಂದಾಗಿ 13 ಜಿಂಕೆಗಳು ಸಹ ಸಾವನ್ನಪ್ಪಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಬೆಂಗಳೂರು (ಸೆ.20): ಬನ್ನೇರುಘಟ್ಟ ಜೈವಿಕ ಉದ್ಯಾನ ವನದಲ್ಲಿ ಬೆಕ್ಕಿನಿಂದ ಹರಡುವ ಮಾರಕ ಫೆಲೈನ್ ಫ್ಯಾನ್ ಲ್ಯುಕೋಪೆನಿಯಾ ಎಂಬ ವೈರಸ್ ಕಾಣಿಸಿಕೊಂಡು 7 ಚಿರತೆ ಮರಿಗಳ ಸಾವಿಗೀಡಾದ ಬೆನ್ನಲ್ಲೇ ಜಂತು ಹುಳುಗಳಿಂದಾಗಿ 13 ಜಿಂಕೆಗಳು ಸಹ ಸಾವನ್ನಪ್ಪಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬನ್ನೇರಘಟ್ಟದಲ್ಲಿರುವ ಜೈವಿಕ ಉದ್ಯಾನವನದಲ್ಲಿ ಚಿರತೆ ಮರಿಗಳ ಸಾವು ಮುಗಿಯುತ್ತಿದ್ದಂತೆ ಜಿಂಕೆ ಸಫಾರಿಯಲ್ಲಿದ್ದ 13 ಜಿಂಕೆಗಳು ಸಾವಿಗೀಡಾಗಿವೆ.
ಸೇಂಟ್ ಜಾನ್ ಆಸ್ಪತ್ರೆ ಬಳಿ ಸಾಕಲಾಗಿದ್ದ 28 ಜಿಂಕೆಗಳನ್ನು ಸೂಕ್ತ ಪೋಷಣೆ ಇಲ್ಲವೆಂದು ಬನ್ನೇರುಘಟ್ಟ ಪಾರ್ಕ್‌ಗೆ ತರಲಾಗಿತ್ತು, 28 ಜಿಂಕೆಗಳಲ್ಲಿ ಈಗಾಗಲೇ 13 ಜಿಂಕೆಗಳ ಸಾವನ್ನಪ್ಪಿವೆ. ಬೇರೆಡೆಯಿಂದ ತಂದ ಪ್ರಾಣಿಗಳನ್ನು ಕನಿಷ್ಠ ಒಂದು ತಿಂಗಳು ಕ್ವಾರಂಟೈನ್ ಮಾಡಬೇಕಿತ್ತು, ಆರೋಗ್ಯ ಸೇರಿದಂತೆ, ಆಹಾರ, ಔಷಧೋಪಚಾರ ಬಗ್ಗೆ ನಿಗಾ ವಹಿಸಬೇಕಾಗಿತ್ತು, ಕಾರ್ಯ ನಿರ್ವಾಹಕ ಅಧಿಕಾರಿ ಸೂರ್ಯ ಸೇನ್ ಅವರ ಅವೈಜ್ಞಾನಿಕ ಕ್ರಮದಿಂದಾಗಿ ಪ್ರಾಣಿಗಳು ಬಲಿಯಾಗುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ.
ಕರ್ನಾಟಕದಲ್ಲಿ ಹುಕ್ಕಾ ಬಾರ್ ನಿಷೇಧ: ಸಚಿವ ದಿನೇಶ್ ಗುಂಡೂರಾವ್ ಘೋಷಣೆ
ಜಂತು ಹುಳುಗಳಿಂದ ಜಿಂಕೆಗಳ ಸಾವು: ಕಳೆದೊಂದು ವಾರದಲ್ಲಿ 13 ಜಿಂಕೆಗಳ ಸಾವಿಗೀಡಾಗಿದ್ದು, ಹೆಚ್ಚು ಪರಿಶೀಲನೆ ಅಗತ್ಯವಿಲ್ಲ. ಅವುಗಳನ್ನು ಎಲ್ಲಿ ಇಟ್ಟರೂ ಸಾಯುತ್ತವೆ ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ಕಾರ್ಯ ನಿರ್ವಾಹಕ ಅಧಿಕಾರಿ ಸೂರ್ಯ ಸೇನ್ ನೀಡಿದ್ದಾರೆ. ಕಾರ್ಯ ನಿರ್ವಾಹಕ ಅಧಿಕಾರಿ ಅವೈಜ್ಞಾನಿಕ ಕ್ರಮಕ್ಕೆ ಬನ್ನೇರುಘಟ್ಟ ಪಾರ್ಕ್ ಸೂತಕದ ಮನೆಯಾಗಿದೆ, ಆಡಳಿತಾಧಿಕಾರಿಗಳು ಎಚ್ಚೆತ್ತು ಕೊಂಡು ಪ್ರಾಣಿ ಪಕ್ಷಿಗಳನ್ನು ರಕ್ಷಣೆಗೆ ಮುಂದಾಗಬೇಕು ಎಂದು ಪ್ರಾಣಿಪ್ರಿಯರ ಆಗ್ರಹವಾಗಿದೆ.