ರಾಜ್ಯದಲ್ಲಿ ಪಾಸಿಟಿವಿಟಿ ದರ ಇಳಿಕೆ: ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಡಬಲ್
* ರಾಜ್ಯದಲ್ಲಿ ತಗ್ಗಿದ ಕೊರೋನಾ ಪಾಸಿಟಿವಿಟಿ ಪ್ರಮಾಣ
* ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರು ಡಬಲ್
* ಆರೋಗ್ಯ ಸಚಿವ ಸುಧಾಕರ್ ಮಾಹಿತಿ
ಬೆಂಗಳೂರು, (ಜೂನ್.06): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದ್ದು, ಇದರ ಜೊತಗೆ ಗುಣಮುಖರಾಗುವವರ ಸಂಖ್ಯೆಯಲ್ಲೂ ಕೂಡ ಹೆಚ್ಚಳವಾಗುತ್ತಿರುವುದು ಸಮಾಧಾನ ತಂದಿದೆ.
ಹೌದು...ಇಂದು (ಭಾನುವಾರ) ರಾಜ್ಯಾಧ್ಯಂತ 1,58,274 ಜನರನ್ನು ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ12,209 ಮಂದಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿವೆ.
ರಾಜ್ಯದಲ್ಲಿ 4 ದಿನಗಳ ಬಳಿಕ 400ಕ್ಕಿಂತ ಕಡಿಮೆ ಸಾವು
ಇನ್ನು ಕಳೆದ 24 ಗಂಟೆಗಳಲ್ಲಿ 25,659 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಇದುವರೆಗೆ 24,09,417 ಜನ ಗುಣಮುಖರಾದಂತಾಗಿದೆ.
ಶುಕ್ರವಾರ ಶೇಕಡ 10.66 ರಷ್ಟು ಪಾಸಿಟಿವಿಟಿ ದರ ಇತ್ತು. ಕಳೆದ ಏಪ್ರಿಲ್ 15 ರ ನಂತರ ನಿನ್ನೆ (ಶನಿವಾರ) ಮೊದಲ ಬಾರಿಗೆ ಪಾಸಿಟಿವಿಟಿ ದರ ಶೇಕಡ ಶೇಕಡ 10 ಕ್ಕಿಂತ ಕಡಿಮೆಯಾಗಿ, ಭಾನುವಾರ ಶೇ.7.71 ರಷ್ಟು ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಪಾಸಿಟಿವಿಟಿ ದರ ಕಡಿಮೆಯಾದ್ರೆ ಅನ್‌ಲಾಕ್ ಮಾಡುವುದಾಗಿ ಸಿಎಂ ಹೇಳಿದ್ದರು. ಇದೀಗ ಪಾಸಿಟಿವಿಟಿ ದರ ಕಡಿಮೆಯಾಗುತ್ತಿರುವುದರಿಂದ ಲಾಕ್ ಡೌನ್ ಹಂತ ಹಂತವಾಗಿ ತೆರವುಗೊಳ್ಳುವ ಸಾಧ್ಯತೆ ಇದೆ.