Asianet Suvarna News Asianet Suvarna News

ಇಬ್ಬರು ಐಪಿಎಸ್‌ ಸೇರಿ 12 ಪೊಲೀಸರಿಗೆ ಕೇಂದ್ರದ ಸ್ಪೆಷಲ್‌ ಆಪರೇಷನ್‌ ಪ್ರಶಸ್ತಿ

  • ಭಯೋತ್ಪಾದನೆ ಹಾಗೂ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ಸವಾಲಿನ ಪ್ರಕರಣಗಳನ್ನು ಭೇದಿಸಿದ ಪೊಲೀಸ್‌ 
  •  ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೇಂದ್ರ ಗೃಹ ಇಲಾಖೆಯಿಂದ ಪ್ರತಿ ವರ್ಷ ನೀಡಲಾಗುವ ‘ಸ್ಪೆಷಲ್‌ ಆಪರೇಷನ್‌ ಅವಾರ್ಡ್‌’
  • ಈ ಬಾರಿ ರಾಜ್ಯದ ಇಬ್ಬರು ಐಪಿಎಸ್‌ ಅಧಿಕಾರಿಗಳು ಸೇರಿ 12 ಪೊಲೀಸ್‌ ಅಧಿಕಾರಿ, ಸಿಬ್ಬಂದಿಗೆ ಲಭಿಸಿದೆ.
12 Karnataka police Officers Bag Central Special operation award snr
Author
Bengaluru, First Published Nov 1, 2021, 7:16 AM IST

ಬೆಂಗಳೂರು (ನ.01):  ಭಯೋತ್ಪಾದನೆ (Terrorism) ಹಾಗೂ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ಸವಾಲಿನ ಪ್ರಕರಣಗಳನ್ನು ಭೇದಿಸಿದ ಪೊಲೀಸ್‌ ಅಧಿಕಾರಿಗಳು (Police Officers) ಹಾಗೂ ಸಿಬ್ಬಂದಿಗೆ ಕೇಂದ್ರ ಗೃಹ ಇಲಾಖೆಯಿಂದ (Central Home ministry) ಪ್ರತಿ ವರ್ಷ ನೀಡಲಾಗುವ ‘ಸ್ಪೆಷಲ್‌ ಆಪರೇಷನ್‌ ಅವಾರ್ಡ್‌’ (Special Operation Award) ಈ ಬಾರಿ ರಾಜ್ಯದ ಇಬ್ಬರು ಐಪಿಎಸ್‌ (IPS) ಅಧಿಕಾರಿಗಳು ಸೇರಿ 12 ಪೊಲೀಸ್‌ ಅಧಿಕಾರಿ, ಸಿಬ್ಬಂದಿಗೆ ಲಭಿಸಿದೆ.

ಬಡವರ ಅನ್ನಕ್ಕೆ ಕನ್ನ ಹಾಕುವವರ ಬೆನ್ನು ಬಿದ್ದಿದೆ ಕಲಬುರಗಿ ಖಾಕಿ ಪಡೆ

ದಕ್ಷಿಣ ಭಾರತದಲ್ಲಿ (South India) ‘ಐಸಿಸ್‌’ (ISIS) ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಯುವಕರ ನೇಮಕಾತಿ, ದೇಣಿಗೆ ಸಂಗ್ರಹ ಆರೋಪದಡಿ ಎಂ.ಎಸ್‌.ರಾಮಯ್ಯ (MS Ramaiah)ಆಸ್ಪತ್ರೆಯ ನೇತ್ರ ವೈದ್ಯ ಡಾ.ಅಬ್ದುರ್‌ ರೆಹಮಾನ್‌ (Abdur Rehman), ಇರ್ಫಾನ್‌ ನಾಸೀರ್‌ (Irhan Nasir) ಬಂಧನ ಸೇರಿದಂತೆ ಹಲವು ಶಂಕಿತ ಉಗ್ರರ ಬಂಧನ ಪ್ರಕರಣದ ನೇತೃತ್ವ ವಹಿಸಿದ್ದ ರಾಷ್ಟ್ರೀಯ ತನಿಖಾ ದಳದ (NIA) ಕರ್ನಾಟಕ  (karnataka) ಕೇಡರ್‌ ಡಿಐಜಿ ಸೋನಿಯಾ ನಾರಂಗ್‌ (DIG Sonia Narang), ಸಂಜಯನಗರ ಇನ್‌ಸ್ಪೆಕ್ಟರ್‌ ಜಿ.ಬಾಲರಾಜು (G Balaraju) ಮತ್ತು ಐಎಸ್‌ಡಿ (ISD) ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ (Sub Inspector) ಎಂ.ಶೌಕತ್‌ ಅಲಿ, ಮುಖ್ಯಪೇದೆ ಪಿ. ಸೋಮಶೇಖರ್‌ (P Somashekar) ಅವರಿಗೆ ಪ್ರಶಸ್ತಿ ಲಭಿಸಿದೆ.

ದೊಡ್ಡ ಸವಾಲು ನಿರ್ವಹಿಸಿದ ಕರ್ನಾಟಕ ಪೊಲೀಸ್‌ಗೆ ಅನಂತ ಧನ್ಯವಾದ

ಅಂತೆಯೆ ಬೆಂಗಳೂರು ನಗರ (Bengaluru City) ಗುಪ್ತದಳ ವಿಭಾಗ ಡಿಸಿಪಿ (DCP) ಕೆ. ಸಂತೋಷ್‌ ಬಾಬು (K Santhosh babu) ಮತ್ತು ಮುಖ್ಯಪೇದೆ ಫಕ್ರುದ್ದೀನ್‌ ಕುಂದಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಇಸ್ಲಾಮಿಕ್‌ ಸ್ಟೇಟ್‌ ಖೋರಸನ್‌ ಪ್ರೋವೆನ್ಸ್‌ (ಐಎಸ್‌ಕೆಸಿ) ಉಗ್ರ ಸಂಘಟನೆ ಸದಸ್ಯ ಬೆಂಗಳೂರಿನ ಮಾದೇಶ ಅಲಿಯಾಸ್‌ ಅಲಿ ಮುಆವಿಯಾನನ್ನು ಬಂಧಿಸಿದ್ದರು. ಅಂತೆಯೆ ಸವಾಲಿನ ಪ್ರಕರಣ ಬೇಧಿಸಿದ್ದ ಇನ್‌ಸ್ಪೆಕ್ಟರ್‌ಗಳಾದ ಪಿ.ಶಿವಕುಮಾರ್‌, ಎಚ್‌.ವಿ. ಸುದರ್ಶನ್‌, ಮಹೇಶ್‌ ಪ್ರಸಾದ್‌, ಎಸ್‌.ಆರ್‌.ಶ್ರೀಧರ್‌ ಮತ್ತು ಕಾನ್‌ಸ್ಟೇಬಲ್‌ ಅಕ್ಬರ್‌ ಯಡ್ರಾಮಿ ಮತ್ತು ಮುಖ್ಯಪೇದೆ ಶ್ರೀಕೃಷ್ಣ ದೇವಿಗೌಡ ಅವರಿಗೆ ‘ಸ್ಪೇಷಲ್‌ ಆಪರೇಷನ್‌ ಅವಾರ್ಡ್‌’ ಲಭಿಸಿದೆ.

ಲಂಚ ಪಡೆಯಲ್ಲ ಎಂದು ಪೊಲೀಸರ ಪ್ರತಿಜ್ಞೆ

 

ಭ್ರಷ್ಟಾಚಾರ(Corruption) ನಿರ್ಮೂಲನೆ ಕುರಿತ ಅರಿವು ಸಪ್ತಾಹದ ಹಿನ್ನೆಲೆಯಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಬದ್ಧನಾಗಿ ಭ್ರಷ್ಟಾಚಾರದ ವಿರುದ್ಧದ ಹೋರಾಟ ಬೆಂಬಲಿಸುವುದಾಗಿ ನಗರ(Bengaluru) ಪೊಲೀಸರು ಪ್ರತಿಜ್ಞೆ ಮಾಡಿದ್ದಾರೆ. 

ನಗರ ಪೊಲೀಸ್‌(Police)ಆಯುಕ್ತರ ಕಚೇರಿಯಲ್ಲಿ ಮಂಗಳವಾರ ನಡೆದ ಅರಿವು ಸಪ್ತಾಹದಲ್ಲಿ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರು ಪೊಲೀಸ್‌ ಅಧಿಕಾರಿಗಳಿಗೆ ಪ್ರತಿಜ್ಞೆ ಬೋಧಿಸಿದರು. ದೇಶದ ಆರ್ಥಿಕ(Economic), ರಾಜಕೀಯ(Politics) ಮತ್ತು ಸಾಮಾಜಿಕ ಅಭಿವೃದ್ಧಿಗೆ ಭ್ರಷ್ಟಾಚಾರವು ಒಂದು ಪ್ರಮುಖ ಅಡಚಣೆಯಾಗಿದೆ. ಭ್ರಷ್ಟಾಚಾರ ನಿರ್ಮೂಲನೆಗೆ ಸರ್ಕಾರ, ನಾಗರಿಕರು ಹಾಗೂ ಖಾಸಗಿ ವಲಯದ ಎಲ್ಲ ಪಾಲುದಾರರೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕು. ಪ್ರತಿ ನಾಗರಿಕರನು ಜಾಗರೂಕನಾಗಿದ್ದು, ಎಲ್ಲ ಸಮಯದಲ್ಲೂ ಉನ್ನತ ಗುಣಮಟ್ಟದ ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಬದ್ಧನಾಗಿರಬೇಕು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟ ಬೆಂಬಲಿಸಬೇಕು ಎಂಬುದನ್ನು ಅರಿತಿದ್ದೇನೆ ಎಂದು ಪೊಲೀಸರು ಪ್ರತಿಜ್ಞೆ(Pledge) ಮಾಡಿದರು.

ಡ್ರಂಕ್‌ ಅಂಡ್‌ ಡ್ರೈವ್‌ ಟೆಸ್ಟ್‌ ವೇಳೆ ಪೇದೆಗೆ ಕಾರಲ್ಲಿ ಗುದ್ದಿದ ಕುಡುಕ..!

ಜೀವನ ಎಲ್ಲ ಕ್ಷೇತ್ರಗಳಲ್ಲಿ ಪ್ರಾಮಾಣಿಕತೆ ಮತ್ತು ಕಾನೂನಿನ ನಿಯಮಗಳನ್ನು ಅನುಸರಿಸುತ್ತೇನೆ. ಲಂಚವನ್ನು ಪಡೆಯುವುದಿಲ್ಲ ಹಾಗೂ ನೀಡುವುದಿಲ್ಲ. ಎಲ್ಲ ಕಾರ್ಯಗಳನ್ನು ಪ್ರಾಮಾಣಿಕ ಮತ್ತು ಪಾರದರ್ಶಕ ರೀತಿಯಲ್ಲಿ ನಿರ್ವಹಿಸುತ್ತೇನೆ. ಸಾರ್ವಜನಿಕ ಹಿತಾಸಕ್ತಿಯಲ್ಲಿ ಕಾರ್ಯ ನಿರ್ವಹಿಸುತ್ತೇನೆ. ವೈಯಕ್ತಿಕ ನಡವಳಿಕೆಯಲ್ಲಿ ನಿಷ್ಠೆ ಪ್ರದರ್ಶಿಸುವ ಮೂಲಕ ಮಾದರಿಯಾಗಿರುತ್ತೇನೆ. ಯಾವುದೇ ಭ್ರಷ್ಟಾಚಾರದ ಘಟನೆಯನ್ನು ಸೂಕ್ತ ಸಂಸ್ಥೆಗೆ ವರದಿ ಮಾಡುವುದಾಗಿ ನಗರ ಪೊಲೀಸರು ಪ್ರತಿಜ್ಞೆಗೈದರು.

Follow Us:
Download App:
  • android
  • ios