Asianet Suvarna News Asianet Suvarna News

ಡ್ರಂಕ್‌ ಅಂಡ್‌ ಡ್ರೈವ್‌ ಟೆಸ್ಟ್‌ ವೇಳೆ ಪೇದೆಗೆ ಕಾರಲ್ಲಿ ಗುದ್ದಿದ ಕುಡುಕ..!

* ಎಚ್‌ಎಎಲ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
* ಖಾಸಗಿ ಬ್ಯಾಂಕ್‌ ಮ್ಯಾನೇಜರ್‌ ಸೆರೆ
* ಬ್ರೇಕ್‌ ತುಳಿಯುವ ಬದಲು ಎಕ್ಸಿಲೇಟರ್‌ ತುಳಿದ ಪರಿಣಾಮ ಕಾರು ವೇಗವಾಗಿ ಚಲಿಸಿದ ಕಾರು  
 

Private Bank Manager Arrested for Car Collision to Police Constable in Bengaluru grg
Author
Bengaluru, First Published Oct 25, 2021, 9:25 AM IST
  • Facebook
  • Twitter
  • Whatsapp

ಬೆಂಗಳೂರು(ಅ.25): ಎಚ್‌ಎಎಲ್‌ ಮುಖ್ಯರಸ್ತೆಯಲ್ಲಿ ಡ್ರಂಕ್‌ ಅಂಡ್‌ ಡ್ರೈವ್‌(Drunk and Drive) ತಪಾಸಣೆ ಮಾಡುವಾಗ ಮುಖ್ಯಪೇದೆಗೆ(Police Constable) ಕಾರು ಗುದ್ದಿಸಿ ಪರಾರಿಯಾಗಲು ಯತ್ನಿಸಿದ ಖಾಸಗಿ ಬ್ಯಾಂಕ್‌ ಮ್ಯಾನೇಜರ್‌ನನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎಚ್‌ಎಎಲ್‌ನ ಚಿನ್ನಪ್ಪನಹಳ್ಳಿ ನಿವಾಸಿ ರಾಮಾಂಜುಲು(35) ಬಂಧಿತ(Arrest). ಘಟನೆಯಲ್ಲಿ ಎಚ್‌ಎಎಲ್‌ ಏರ್‌ಪೋರ್ಟ್‌ ಸಂಚಾರ ಠಾಣೆಯ ಮುಖ್ಯಪೇದೆ ಮುಬಾರಕ್‌ ಅಲಿ ಅವರ ಎಡಗಾಲಿನ ಮೂಳೆ ಮುರಿದಿದ್ದು, ಚಿಕಿತ್ಸೆ(Treatment) ಪಡೆಯುತ್ತಿದ್ದಾರೆ. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

ಎಚ್‌ಎಎಲ್‌ ಏರ್‌ಪೋರ್ಟ್‌(HAL Airport) ಸಂಚಾರ ಠಾಣೆಯ ಸಿಬ್ಬಂದಿ ಶನಿವಾರ ರಾತ್ರಿ ಎಚ್‌ಎಎಲ್‌ ಮುಖ್ಯ ರಸ್ತೆಯಲ್ಲಿ ಡ್ರಂಕ್‌ ಅಂಡ್‌ ಡ್ರೈವ್‌ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ನಾಗರಬಾವಿ ಕಡೆಯಿಂದ ಚಿನ್ನಪ್ಪನಹಳ್ಳಿ ಕಡೆಗೆ ವೇಗವಾಗಿ ಬರುತ್ತಿದ್ದ ಕ್ರೆಟಾ ಕಾರನ್ನು ಪೊಲೀಸರು ತಡೆದಿದ್ದಾರೆ. ಬಳಿಕ ಆಲ್ಕೋಮೀಟರ್‌ನಲ್ಲಿ(Alcometer) ತಪಾಸಣೆ ಮಾಡಿದಾಗ ರಾಮಾಂಜುಲು ಮದ್ಯಸೇವಿಸಿರುವುದು(Alcohol) ದೃಢಪಟ್ಟಿದೆ. ಈ ವೇಳೆ ಮುಖ್ಯಪೇದೆ ಮುಬಾರಕ್‌ ಕಾರನ್ನು ರಸ್ತೆಬದಿ ನಿಲ್ಲಿಸುವಂತೆ ಕೈ ಸನ್ನೆ ಮಾಡಿದ್ದಾರೆ. ಆದರೆ, ಪಾನಮತ್ತ ರಾಮಾಂಜುಲು ಪೊಲೀಸರಿಗೆ ಆವಾಜ್‌ ಹಾಕಿ ಪರಾರಿಯಾಗಲು ಯತ್ನಿಸಿದ್ದಾನೆ.

ಕುಡಿದ ಮತ್ತಿನಲ್ಲಿ ಪೊಲೀಸ್‌ಗೆ ಒದ್ದು, ಕಪಾಳಮೋಕ್ಷ ಮಾಡಿದ ಯುವತಿ!

ಈ ವೇಳೆ ವೇಗವಾಗಿ ಕಾರು ಚಲಾಯಿಸಿ ಎದುರು ನಿಂತ್ತಿದ್ದ ಮುಖ್ಯಪೇದೆ ಮುಬಾರಕ್‌ ಅಲಿ ಅವರಿಗೆ ಡಿಕ್ಕಿ ಹೊಡೆದಿದ್ದೇನೆ. ಡಿಕ್ಕಿಯ ರಭಸಕ್ಕೆ ಮುಬಾರಕ್‌ ಅವರ ಎಡಗಾಲಿನ ಮೂಳೆ ಮುರಿದಿದೆ. ಈ ನಡುವೆ ತಪ್ಪಿಸಿಕೊಳ್ಳುವ ಭರದಲ್ಲಿ ಕಾರು ನಿಯಂತ್ರಣ ತಪ್ಪಿ ಕಾಂಪೌಂಡ್‌ಗೆ ಗುದ್ದಿ ನಿಂತಿದೆ. ತಕ್ಷಣ ಪೊಲೀಸರು ರಾಮಾಂಜುಲುನನ್ನು ವಶಕ್ಕೆ ಪಡೆದು ಎಚ್‌ಎಎಲ್‌ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪಾರ್ಟಿ ಎಫೆಕ್ಟ್

ಆರೋಪಿ ರಾಮಾಂಜಲು ನಗರದ ಖಾಸಗಿ ಬ್ಯಾಂಕ್‌ವೊಂದರಲ್ಲಿ ಮ್ಯಾನೇಜರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೀಕೆಂಡ್‌ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ಮನೆಗೆ ಹೋಗುವಾಗ ಈ ಘಟನೆ ನಡೆದಿದೆ. ಗಾಬರಿಯಲ್ಲಿ ಬ್ರೇಕ್‌ ತುಳಿಯುವ ಬದಲು ಎಕ್ಸಿಲೇಟರ್‌ ತುಳಿದ ಪರಿಣಾಮ ಕಾರು ವೇಗವಾಗಿ ಚಲಿಸಿತು. ಉದ್ದೇಶಪೂರ್ವಕವಾಗಿ ನಾನು ಮುಖ್ಯಪೇದೆಗೆ ಡಿಕ್ಕಿ ಹೊಡೆಯಲಿಲ್ಲ ಎಂದು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. 
 

Follow Us:
Download App:
  • android
  • ios