ಬೆಂಗಳೂರು, (ನ.16): ಕಳೆದ ಹದಿನೈದು ದಿನಗಳಿಂದ ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದು ಇಂದು (ಸೋಮವಾರ) ಕೇವಲ 1,157 ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8,62,804ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ 12 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ಮೃತಪಟ್ಟವರ ಸಂಖ್ಯೆ 11,541ಕ್ಕೇರಿದೆ. 

ಕೊರೋನಾ ವಿರುದ್ಧ ಹೋರಾಟದಲ್ಲಿ remdesivir ಯಶಸ್ವಿ; ಬೆಂಗಳೂರು ವೈದ್ಯರ ಅಧ್ಯಯನ! 

ಇನ್ನು ಸೋಮವಾರ 2,188 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿದ್ದು,  ಇದುವರೆಗೆ  8,25,141 ಗುಣಮುಖರಾಗಿದ್ದಾರೆ. ಸದ್ಯ 26,103 ಸಕ್ರೀಯಾ ಕೇಸ್‌ಗಳಿವೆ. ಈ ಪೈಕಿ 730 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ವರದಿ
ಸೋಮವಾರ ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 597 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸಿಲಿಕಾನ್ ಸಿಟಿಯ ಸೋಂಕಿತರ ಸಂಖ್ಯೆ 3,57,877ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಇಂದು 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇನ್ನು ಈ ಬಗ್ಗೆ ಟ್ವಿಟ್ ಮಾಡಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಚೇತರಿಕೆ ದರ 95.63% ರಷ್ಟಿದೆ. ರಾಜ್ಯದ 24 ಜಿಲ್ಲೆಗಳಲ್ಲಿ ಇಂದು ಶೂನ್ಯ ಮರಣ ದಾಖಲಾಗಿದ್ದು, ಕೋವಿಡ್ ಮರಣ ಪ್ರಮಾಣ 1.33% ರಷ್ಟಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ

ಕೊರೋನಾ ಇಳಿಕೆ
ಹೌದು..ಕಳೆದ 15 ದಿನಗಳಿಂದ ಕೊರೋನಾ ಸೋಂಕಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮೊದಲೆಲ್ಲ ದಿನಕ್ಕೆ 10  ಸಾವಿರವರೆಗೂ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆದ್ರೆ, ಇದೀಗ ದಿನಕ್ಕೆ 2 ಸಾವಿರದೊಳಗೆ ಇಳಿದೆ. ಇದು ಉತ್ತಮ ಬೆಳವಣಿಗೆಯಾಗಿದೆ. ಔಷಧಿ ಬರುವ ಮೊದಲೇ ರಾಜ್ಯದಲ್ಲಿ ಕೊರೋನಾ ಇಳಿಕೆಯಾಗುತ್ತಿರುವುದು ಸಂತಸದ ಸಂಗತಿ. 

ಕಡಿಮೆಯಾಗಿದೆ ಅಂದ ಮಾತ್ರ ಸಾವರ್ಜನಿಕರು ಮಾಸ್ಕ್ ಹಾಗೂ ಸಾಮಾಜಿ ಅಂತರ ಕಾಪಾಡುವುದನ್ನು ಮರೆಯಬಾರದು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.