ಕೊರೋನಾ ವಿರುದ್ಧ ಹೋರಾಟ: ಮಾಸ್ಕ್ ಡೇಯಂದೇ ಮುಖಗವಸು ಧರಿಸದ 1113 ಮಂದಿಗೆ ದಂಡ
ಮಾಸ್ಕ್ ಧರಿಸದ 1113 ಮಂದಿಗೆ ತಲಾ 200 ರು.ನಂತೆ 2.22 ಲಕ್ಷ ರು. ದಂಡ ವಸೂಲಿ|ಸಾಮಾಜಿಕ ಅಂತರ ಮರೆತವರಿಗೂ ದಂಡದ ಬಿಸಿ| ಮಾರುಕಟ್ಟೆ ಸೇರಿದಂತೆ ಇನ್ನಿತರ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದಕ್ಕೂ ದಂಡ ವಿಧಿಸುವುದಕ್ಕೆ ಆರಂಭ|
ಬೆಂಗಳೂರು(ಜೂ.19): ಕೊರೋನಾ ಸೋಂಕು ಹರಡುವಿಕೆ ತಡೆಯಲು ರಾಜ್ಯ ಸರ್ಕಾರ ಆಯೋಜಿಸಿದ್ದ ‘ಮಾಸ್ಕ್ ದಿನ’ವಾದ ಗುರುವಾರದಂದೇ, ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದ 1113 ಮಂದಿಗೆ ಒಟ್ಟು 2.22 ಲಕ್ಷ ರು. ದಂಡವನ್ನು ಬಿಬಿಎಂಪಿ ಮಾರ್ಷಲ್‌ಗಳು ವಿಧಿಸಿದ್ದಾರೆ.
1113 ಮಂದಿಗೆ ತಲಾ 200 ರು.ಗಳಂತೆ 222,600 ರು. ದಂಡವನ್ನು ವಸೂಲಿ ಮಾಡಲಾಗಿದೆ. ಗುರುವಾರದಿಂದ ನಗರದ ಮಾಲ್, ಮಾರುಕಟ್ಟೆ ಸೇರಿದಂತೆ ಇನ್ನಿತರ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದಕ್ಕೂ ದಂಡ ವಿಧಿಸುವುದಕ್ಕೆ ಆರಂಭಿಸಲಾಗಿದ್ದು, ಗುರುವಾರ ದಕ್ಷಿಣ ವಲಯದಲ್ಲಿ ಒಟ್ಟು 22 ಮಂದಿಗೆ ತಲಾ 200 ರು.ನಂತೆ 4,400 ರು. ದಂಡ ವಸೂಲಿ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾಸ್ಕ್ ಡೇ: ಸಿಎಂ ಜೊತೆ ಸೆಲೆಬ್ರಿಟಿಗಳ ಸಾಥ್, ಇಲ್ಲಿವೆ ಫೋಟೋಸ್
9 ದಿನದಲ್ಲಿ 12.35 ಲಕ್ಷ ದಂಡ
ಬಿಬಿಎಂಪಿ ಮಾರ್ಷಲ್‌ಗಳು ಜೂ.10 ರಿಂದ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವುದಕ್ಕೆ ಆರಂಭಿಸಿದ್ದು, ಕಳೆದ 9 ದಿನದಲ್ಲಿ 198 ವಾರ್ಡ್‌ನಲ್ಲಿ ಒಟ್ಟು 6,157 ಮಂದಿಗೆ 12.31 ಲಕ್ಷ ರು. ದಂಡ ವಿಧಿಸಲಾಗಿದೆ.